More

    ಜೋಕೊವಿಕ್​, ರುಬ್ಲೆವ್​ ಶುಭಾರಂಭ: ಮರಿನ್​ ಸಿಲಿಕ್​ಗೆ ಆಘಾತ, ಸಬಲೆಂಕಾ ಮುನ್ನಡೆ

    ಮೆಲ್ಬೋರ್ನ್​: ವಿಶ್ವ ನಂ.1 ಆಟಗಾರ ಸೆರ್ಬಿಯಾದ ನೊವಾಕ್​ ಜೋಕೊವಿಕ್​ ವರ್ಷದ ಮೊದಲ ಗ್ರಾಂಡ್​ ಸ್ಲಾಂ ಆಸ್ಟ್ರೆಲಿಯನ್​ ಓಪನ್​ ಟೆನಿಸ್​ ಟೂರ್ನಿಯ ಮೊದಲ ಸುತ್ತಿನಲ್ಲಿ ಪೈಪೋಟಿಯುತ ಗೆಲುವು ದಾಖಲಿಸಿದ್ದಾರೆ. ಇಟಲಿಯ ಜನ್ನಿಕ್​ ಸಿನ್ನರ್​, ರಷ್ಯಾದ ಆಂಡ್ರೆ ರುಬ್ಲೆವ್​, ಅಮೆರಿಕದ ಟೇಲರ್​ ಫ್ರಿಟ್ಜ್​ ಪುರುಷರ ಸಿಂಗಲ್ಸ್​ ವಿಭಾಗದಲ್ಲಿ ಶುಭಾರಂಭ ಮಾಡಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಬೆಲಾರಸ್​ನ ಅರಿನಾ ಸಬಲೆಂಕಾ, ಗ್ರೀಸ್​ ಮರಿಯಾ ಸಕ್ಕರಿ, ಮಾಜಿ ಚಾಂಪಿಯನ್​ ಕರೋಲಿನಾ ವೊಜ್ನಿಯಾಕಿ, ಜೆಕ್​ ಗಣರಾಜ್ಯದ ಬ್ರೆಂಡಾ ಫ್ರುಹ್ವಿಟೋರ್ವಾ ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ.

    ಮೆಲ್ಬೋರ್ನ್​ ಪಾರ್ಕ್​ನಲ್ಲಿ ಭಾನುವಾರ ಆರಂಭಗೊಂಡ ಟೂರ್ನಿಯ ಪುರುಷರ ಸಿಂಗಲ್ಸ್​ ವಿಭಾಗದಲ್ಲಿ ಹಾಲಿ ಚಾಂಪಿಯನ್​ ನೊವಾಕ್​ ಜೋಕೊವಿಕ್​ಗೆ ಆರಂಭಿಕ ಸುತ್ತಿನಲ್ಲಿ ಸುಲಭ ಗೆಲುವು ದಕ್ಕಲಿಲ್ಲ. ಕ್ರೊವೇಷಿಯಾದ ಡಿನೊ ಪ್ರಿಜ್​ಮಿಕ್​ ಎದುರು 6-2, 6-7, 6-3,6-4 ಸೆಟ್​ಗಳಿಂದ ಗೆಲುವು ದಾಖಲಿಸಿದರು. ಆದರೆ, ಅಗ್ರ ಶ್ರೇಯಾಂಕಿತ ಜೋಕೊವಿಕ್​, 18 ವರ್ಷದ ಪ್ರಿಜ್​ಮಿಕ್​ ಎದುರು ಗೆಲುವಿಗಾಗಿ 4 ಗಂಟೆ 1 ನಿಮಿಷಗಳ ಕಠಿಣ ಹೋರಾಟ ನಡೆಸಿದರು.

    4ನೇ ಶ್ರೇಯಾಂಕಿತ ಜನ್ನಿಕ್​ ಸಿನ್ನರ್​ 6-4, 7-5, 6-3 ರಿಂದ ನೆದರ್ಲೆಂಡ್​ನ ಬೊಟಿಕ್​ ವ್ಯಾನ್​ ಡಿ ರಂಡ್ಸ$್ಕಲ್ಪ್​ ಎದುರು ಜಯದ ಸಂಭ್ರಮ ಕಂಡರು. ಕಳೆದ ವರ್ಷ ನವೆಂಬರ್​ ಜೋಕೋ ಎದುರು 2 ಬಾರಿ ಜಯಿಸಿದ್ದ ಸಿನ್ನರ್​ ಇಟಲಿ ತಂಡದ ಡೇವಿಸ್​ ಕಪ್​ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

    ಸಕ್ಕರಿ, ಗಾರ್ಸಿಯಾಗೆ ಗೆಲುವಿನಾರಂಭ: ಮಹಿಳೆಯರ ವಿಭಾಗದಲ್ಲಿ 8ನೇ ಶ್ರೇಯಾಂಕಿತೆ ಮರಿಯಾ ಸಕ್ಕರಿ 6-4,6-1 ರಿಂದ ಜಪಾನ್​ನ ನವೊ ಹಿಬಿನೊ ಎದುರು ಗೆಲವು ದಾಖಲಿಸಿದರು. ಕಳೆದ ವರ್ಷದ ಆಸ್ಟ್ರೆಲಿಯನ್​ ಓಪನ್​ ಬಳಿಕ ಸಕ್ಕರಿಯ ಮೊದಲ ಗ್ರಾಂಡ್​ ಸ್ಲಾಂ ಗೆಲುವು ಇದಾಗಿದೆ. ತಾಯ್ತನದ ಬಿಡುವಿನ ಬಳಿಕ ಮೊದಲ ಬಾರಿ ಆಸ್ಟ್ರೆಲಿಯನ್​ ಓಪನ್​ನಲ್ಲಿ ಕಣಕ್ಕಿಳಿದಿರುವ 2018ರ ಚಾಂಪಿಯನ್​ ಕರೋಲಿನಾ ವೊಜ್ನಿಯಾಕಿ 6-2, 2-6 ರಿಂದ ಮುನ್ನಡೆ ಸಾಧಿಸಿದಾಗ, ಎದುರಾಳಿ ಮಗಡ ಲಿನೆಟ್​ ಗಾಯದಿಂದ ನಿವೃತ್ತಿಗೊಂಡರು. ಹಾಲಿ ಚಾಂಪಿಯನ್​ ಅರಿನಾ ಸಬಲೆಂಕಾ 6-0,6-1 ರಿಂದ ಅರ್ಹತಾ ಸುತ್ತಿನ ಆಟಗಾರ್ತಿ ಜರ್ಮನಿಯ ಎಲಾ ಸೀಡೆಲ್​ ವಿರುದ್ಧ ಸುಲಭ ಗೆಲುವು ಒಲಿಸಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts