More

    ಅವೈಜ್ಞಾನಿಕ ಕಾಮಗಾರಿಗೆ ಆಕ್ರೋಶ

    ಗೋಕಾಕ : ಅವೈಜ್ಞಾನಿಕವಾಗಿ ಕಾಮಗಾರಿ ಕೈಗೆತ್ತಿಕೊಂಡಿರುವ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಗೋಕಾಕ ನಗರದಲ್ಲಿ ಕರವೇ ತಾಲೂಕು ಘಟಕದ ಕಾರ್ಯಕರ್ತರು ಪ್ರತಿಭಟನೆ ಹಮ್ಮಿಕೊಂಡು ಕಚೇರಿ ಅಧೀಕ್ಷಕ ಎಂ.ಎನ್ ಸಾಗರೇಕರ ಮೂಲಕ ಸರ್ಕಾರಕ್ಕೆ ಮನಿ ಸಲ್ಲಿಸಿದರು.

    ಇಲ್ಲಿನ ನಗರಸಭೆ ಆವರಣದಲ್ಲಿ ಸೇರಿದ ಕರವೇ ಕಾರ್ಯಕರ್ತರು, ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕರವೇ ತಾಲೂಕು ಅಧ್ಯಕ್ಷ ಬಸವರಾಜ ಖಾನಪ್ಪನವರ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಗೋಕಾಕ ನಗರದಲ್ಲಿ ಸರ್ಕಾರದಿಂದ ಮಂಜೂರಾದ ಅಭಿವೃದ್ಧಿ ಕಾಮಗಾರಿಗಳನ್ನು ಕ್ರಿಯಾಯೋಜನೆ ಅನುಸಾರ ಮಾಡುತ್ತಿಲ್ಲ. ಕಾಮಗಾರಿ ಅವೈಜ್ಞಾನಿಕವಾಗಿ ಕೂಡಿದ್ದು, ಗುತ್ತಿಗೆದಾರರು ಸರ್ಕಾರ ಹಾಗೂ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದಾರೆ. ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ನಗರ ಸುಂದರಗೊಳಿಸಲು ಸಾಕಷ್ಟು ಮೊತ್ತದ ಅನುದಾನ ಪ್ರತಿ ವರ್ಷವೂ ಮಂಜೂರಾಗುತ್ತದೆ. ಆದರೆ, ಕೆಲಸಗಳು ಸರಿಯಾಗಿ ನಡೆಯುತ್ತಿಲ್ಲ. ಗೋಕಾಕದಲ್ಲಿ ಕಳೆದ 3 ವರ್ಷಗಳಿಂದ ಆರಂಭವಾಗಿರುವ ಮಾಸ್ಟರ್ ಪ್ಲಾೃನ್ ಯೋಜನೆಯು ಈವರೆಗೆ ಪೂರ್ಣಗೊಂಡಿಲ್ಲ. ಈಗಾಗಲೇ ಕೆಲ ಕಾಮಗಾರಿಗಳು ಮುಗಿದಿವೆ. ಆದರೆ, ಅವು ನಿಯಮಾ ನುಸಾರ ಆಗಿಲ್ಲ. ಗಟಾಟ ನಿರ್ಮಾಣ ಕಾಮಗಾರಿಯೂ ಅವೈಜ್ಞಾನಿಕವಾಗಿದೆ. ಹಾಗಾಗಿ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಂಡು, ಅವರ ಮಾನ್ಯತೆಯನ್ನು ರದ್ದು ಮಾಡಬೇಕು ಎಂದು ಒತ್ತಾಯಿಸಿದರು. ಕರವೇ ಪದಾಧಿಕಾರಿಗಳಾದ ಸಾದಿಕ ಹಲ್ಯಾಳ, ಕೃಷ್ಣ ಖಾನಪ್ಪನವರ, ಮುಗುಟ ಪೈಲವಾನ್, ಅಶೋಕ ಬಂಡಿವಡ್ಡರ, ರಾಜು ಬಂಡಿವಡ್ಡರ, ಸುರೇಶ ಬಂಡಿವಡ್ಡರ, ಕೃಷ್ಣ ಬಂಡಿವಡ್ಡರ, ವಿಶ್ವನಾಥ ಹಿರೇಮಠ, ಸಾಗರ ಕಪಲಿ, ಪ್ರತೀಕ ಪಾಟೀಲ, ಸತ್ತಾರ ಬೇಪಾರಿ, ದೀಪಕ ಹಟ್ಟಿ, ಹನುಮಂತ ಅಮ್ಮಣಗಿ, ಸುರೇಶ ಪತ್ತಾರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts