More

    ಹಿರೇಬೆಂಡಿಗೇರಿ ಗ್ರಾಪಂಗೆ ಅವಿರೋಧ ಆಯ್ಕೆ

    ಶಿಗ್ಗಾಂವಿ: ಹಿರೇಬೆಂಡಿಗೇರಿ ಗ್ರಾಮ ಪಂಚಾಯಿತಿ ಎರಡನೇ ಅವಧಿಗೆ ಅಧ್ಯಕ್ಷರಾಗಿ ಮಂಜುಳಾ ದ್ಯಾವಣ್ಣವರ ಹಾಗೂ ಉಪಾಧ್ಯಕ್ಷರಾಗಿ ಫಕೀರಯ್ಯ ಹಿರೇಮಠ ಅವಿರೋಧವಾಗಿ ಆಯ್ಕೆಯಾದರು.
    ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ ಮೀಸಲಾಗಿತ್ತು. ಬುಧವಾರ ನಡೆದ ಚುನಾವಣೆಯಲ್ಲಿ ಎರಡು ಸ್ಥಾನಗಳಿಗೆ ತಲಾ ಒಂದು ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಅವಿರೋಧ ಆಯ್ಕೆ ನಡೆಯಿತು. ಚುನಾವಣಾ ಅಧಿಕಾರಿಯಾಗಿ ಚನ್ನಬಸವೇಶ ಜಿನಗಾ ಕಾರ್ಯನಿರ್ವಹಿಸಿದರು.
    ನಂತರ ನಡೆದ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಸನ್ಮಾನ ಸಮಾರಂಭದಲ್ಲಿ ಗ್ರಾಮದ ಹಿರಿಯರಾದ ಸಂಗಮೇಶ ಕಂಬಾಳಿಮಠ, ತಿಪ್ಪಣ್ಣ ಸಾತಣ್ಣವರ, ಬಸನಗೌಡ ಪಾಟೀಲ, ಮೌಲಾಸಾಬ್ ತಹಶೀಲ್ದಾರ, ನಿಲಪ್ಪ ತಳವಾರ, ವಜೀರಸಾಬ ಕಾಜಕಾನನವರ, ಈಶ್ವರ ಹರಕುಣಿ, ಗ್ರಾಪಂ ಸದಸ್ಯರಾದ ನಾಗರಾಜ ಅದೃಶ್ಯಪ್ಪನವರ, ಚನ್ನಬಸಪ್ಪ ಮ್ಯಾಗೇರಿ, ಬಸವರಾಜ ಕನಕಟ್ಟಿ, ಬಸವರಾಜ ಬ್ಯಾಹಟ್ಟಿ, ಹಾಸಿಮ ಪಾಟೀಲ, ಪಾತೀಮಾ ತಹಶಿಲ್ದಾರ, ರುದ್ರವ್ವ ನಂದೇಣ್ಣವರ, ಈರವ್ವ ಹಡಪದ, ಯಲ್ಲವ ವಾಲಿಕಾರ, ಶಂಕ್ರವ್ವ ಹೊಸಮನಿ, ಇದ್ದರು.

    ಫೋಟೋ 26 ಎಸ್‌ಜಿಎನ್ 1
    ಶಿಗ್ಗಾಂವಿ ತಾಲೂಕಿನ ಹಿರೇಬೆಂಡಿಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ದ್ಯಾವಣ್ಣವರ ಹಾಗೂ ಉಪಾಧ್ಯಕ್ಷ ಫಕೀರಯ್ಯ ಹಿರೇಮಠ ಅವರನ್ನು ಸನ್ಮಾನಿಸಲಾಯಿತು. ಸಂಗಮೇಶ ಕಂಬಾಳಿಮಠ, ತಿಪ್ಪಣ್ಣ ಸಾತಣ್ಣವರ, ಬಸನಗೌಡ ಪಾಟೀಲ, ಮೌಲಾಸಾಬ್ ತಹಶೀಲ್ದಾರ, ನಿಲಪ್ಪ ತಳವಾರ, ವಜೀರಸಾಬ ಕಾಜಕಾನನವರ, ಈಶ್ವರ ಹರಕುಣಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts