More

    ವಾರಕ್ಕೊಮ್ಮೆ ಪಪಂ ಭೇಟಿ

    ಹೊಳೆಹೊನ್ನೂರು: ಪಟ್ಟಣ ಪಂಚಾಯಿತಿಗೆ ಸೋಮವಾರ ಭದ್ರಾವತಿ ತಹಸೀಲ್ದಾರ್ ನಾಗರಾಜ್ ಭೇಟಿ ನೀಡಿ ಕೆಲಕಾಲ ಪಟ್ಟಣದ ಮುಖಂಡರ ಜತೆ ಮಾತನಾಡಿದರು. ಹೊಳೆಹೊನ್ನೂರು ಪಪಂ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರತಿ ಮಂಗಳವಾರ ಪಟ್ಟಣ ಪಂಚಾಯಿತಿಗೆ ಭೇಟೆ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಿ ಪರಿಹಾರ ನೀಡಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
    ಪಪಂ ಕಾರ್ಯಾಲಯದಲ್ಲಿ ಆಗುತ್ತಿರುವ ವಿಳಂಬ ಧೋರಣೆ, ಸಿಬ್ಬಂದಿ ಕತ್ಯರ್ವ ನಿರ್ಲಕ್ಷ÷್ಯ ವಿರೋಽಸಿ ಸ್ಥಳೀಯರು ಕನ್ನಡ ಯುವಕ ಸಂಘದ ನೇತೃತ್ವದಲ್ಲಿ ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದರು. ಸಾರ್ವಜನಿಕರಿಗೆ ತಿಳಿವಳಿಕೆ ನೀಡದೆ ಶೇ.೩೦ ಆಸ್ತಿ ತೆರಿಗೆ ಮೇಲೆ ದಂಡ ವಿಽಸಲಾಗುತ್ತಿದೆ. ಇ-ಆಸ್ತಿ ದಾಖಲೆ ನೀಡಲು ನಿಗದಿತ ಸಮಯದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಸ್ವತ್ತಿನ ಮಾಲೀಕರಿಗೆ ಅಥವಾ ವಾರಸುದಾರರಿಗೆ ಯಾವುದೇ ತಿಳಿವಳಿಕೆ ನೀಡದೆ ದಂಡ ಪ್ರಯೋಗ ಮಾಡುವುದು ಸೇರಿ ಹತ್ತಾರು ಸಮಸ್ಯೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಲಾಗಿತ್ತು. ಈ ಹಿನ್ನಲೆಯಲ್ಲಿ ಪಂಚಾಯಿತಿ ಕಾರ್ಯಾಲಯಕ್ಕೆ ಭೇಟಿ ನೀಡಿ ಸ್ಥಳೀಯ ಮುಖಂಡರ ಸಭೆ ನಡೆಸಿ ಮಾಹಿತಿ ಪಡೆದು ಮಾತನಾಡಿದರು. ಸಾರ್ವಜನಿಕರ ಅಹವಾಲುಗಳನ್ನು ಲಿಖಿತ ರೂಪದಲ್ಲಿ ನೀಡಿದ್ದಲ್ಲಿ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೆ ವಾರದಲ್ಲಿ ಒಮ್ಮೆ ಹೊಳೆಹೊನ್ನೂರು ಪಪಂಗೆ ಭೇಟಿ ನೀಡಿ ಪರಿಶೀಲನೆ ಮಾಡಲಾಗುತ್ತದೆ ಎಂದರು.
    ಪಪA ಮುಖ್ಯಾಽಕಾರಿ ಬಸವರಾಜ್, ಸ್ಥಳೀಯ ಮುಖಂಡರಾದ ಆರ್.ಉಮೇಶ್, ಎಂ.ಹರೀಶ್ ಕುಮಾರ್, ಎಚ್.ಜಿ.ವೆಂಕಟೇಶ್, ರಮೇಶ್, ಪಿ.ಶಂಕರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts