ರಾಜ್ಯಾಧ್ಯಕ್ಷರ ವಿರುದ್ಧ ಅನಗತ್ಯ ಆರೋಪ: ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಆರೋಪ

20 ಎಸ್ಕೆಪಿ 4b
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ವಿರುದ್ಧ ಸುಳ್ಳು ಆರೋಪ ಮಾಡಿರುವವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಸಂಘದ ಪದಾಧಿಕಾರಿಗಳು ಶಿಕಾರಿಪುರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು. ಎಚ್.ಡಿ.ಮಧುಕೇಶ್ವರ್, ರಾಮಚಂದ್ರ, ವಿಶ್ವನಾಥ್, ಪುರುಷೋತ್ತಮ ಇತರರಿದ್ದರು.
Published on

ಶಿಕಾರಿಪುರ: ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ವಿರುದ್ಧ ಸುಳ್ಳು ಆರೋಪ ಮಾಡಿರುವವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಸಂಘದ ಪದಾಧಿಕಾರಿಗಳು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಸಂಘದ ತಾಲೂಕು ಅಧ್ಯಕ್ಷ ಎಚ್.ಡಿ.ಮಧುಕೇಶ್ವರ್ ಮಾತನಾಡಿ, ಅಧ್ಯಕ್ಷರ ವಿರುದ್ಧ ವಿನಾಕಾರಣ ಸುಳ್ಳು ಆರೋಪ ಮಾಡಲಾಗಿದೆ. ಕೂಡಲೆ ದೂರುದಾರರ ಮೇಲೆ ಕ್ರಮ ಜರುಗಿಸಲು ಸರ್ಕಾರಕ್ಕೆ ಶಿಫಾರಸು ಮಾಡುವಂತೆ ತಹಸೀಲ್ದಾರ್ ಬಳಿ ಮನವಿ ಮಾಡಿದರು.
ಕಾರ್ಯದರ್ಶಿ ಬಸನಗೌಡ, ಖಜಾಂಚಿ ರಾಮಚಂದ್ರ, ರಾಜ್ಯ ಪರಿಷತ್ ಸದಸ್ಯ ವಿಶ್ವನಾಥ್, ಪುರುಷೋತ್ತಮ, ಹರ್ಷ, ಜ್ಯೋತಿ ಕಿರಣ್, ಹನುಮಂತಪ್ಪ, ವಿರೂಪಾಕ್ಷಪ್ಪ, ನಾಗರಾಜ್ ನಾಯಕ್, ಪಾಪಯ್ಯ, ಮಂಜಪ್ಪ, ಸುರೇಶ್, ಎಂ.ಜಿ.ಪ್ರಕಾಶ್, ಚೆನ್ನೇಶಪ್ಪ, ರಾಜಶೇಖರ್, ಚಂದ್ರಶೇಖರಪ್ಪ, ನಾಗರಾಜ್, ಮುರಡೇಶ, ರಾಜೀವ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net