More

    ಮಾನವಸಹಿತ ಗಗನಯಾನ ಮತ್ತೊಂದು ವರ್ಷ ಮುಂದಕ್ಕೆ

    ಬೆಂಗಳೂರು: ಮಾನವಸಹಿತ ಗಗನಯಾನಕ್ಕೆ ಮುನ್ನುಡಿಯಾಗಿ ಮಾನವರಹಿತ ಆದರೂ ಯಂತ್ರಮಾನವ ಸಹಿತ ಪ್ರಾಯೋಗಿಕ ಉಪಗ್ರಹ ಉಡಾವಣೆ 2020ರಲ್ಲಿ ಆಗುವುದು ಅನುಮಾನವಾಗಿದೆ. ಬಹುಶಃ ಈ ಯೋಜನೆ 2021ರಲ್ಲಿ ಕೈಗೂಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮಾನವಸಹಿತ ಗಗನಯಾನದ ಭಾರತದ ಕನಸು ಮತ್ತೊಂದು ವರ್ಷ ಮುಂದಕ್ಕೆ ಹೋಗಿದೆ.

    ಸರ್ಕಾರ ಕೊಟ್ಟಿರುವ ಯೋಜನೆಯ ಪ್ರಕಾರ ಮಾನವರಹಿತ ಗಗನಯಾನ ಈ ವರ್ಷದ ಕಾರ್ಯಕ್ರಮ ಪಟ್ಟಿಯಲ್ಲಿ ಇಲ್ಲ. ಸದ್ಯಕ್ಕೆ ಉಪಗ್ರಹಗಳ ಉಡಾವಣೆಗೆ ಮಾತ್ರವೇ ಆದ್ಯತೆ ನೀಡಲಾಗಿದೆ. ಬಹುಶಃ ಮಾನವರಹಿತ ಗಗನಯಾನದ ಪ್ರಾಯೋಗಿಕ ಉಪಗ್ರಹ ಉಡಾವಣೆಯನ್ನು ಮುಂದಿನ ವರ್ಷಕ್ಕೆ ಮುಂದೂಡಿರಬಹುದು. ಇದರಿಂದಾಗಿ ಮಾನವಸಹಿತ ಗಗನಯಾನ ಕೂಡ ಒಂದು ವರ್ಷ ಮುಂದಕ್ಕೆ ಅಂದರೆ 2022ಕ್ಕೆ ಮುಂದಕ್ಕೆ ಹೋಗಿರುವ ಸಾಧ್ಯತೆ ಇದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋದ ವಿಜ್ಞಾನಿಯೊಬ್ಬರು ಹೇಳಿದ್ದಾರೆ.

    ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, 2020ರ ಕೊನೆಯಲ್ಲಿ ಮಾನವರಹಿತ ಆದರೆ, ವ್ಯೋಮಾಮಿತ್ರ ಎಂಬ ಯಂತ್ರಮಾನವ ಸಹಿತ ಪ್ರಾಯೋಗಿಕ ಉಪಗ್ರಹ ಉಡಾವಣೆ ಆಗಬೇಕಿತ್ತು. ಆದರೆ, ಕೋವಿಡ್​-19 ಪಿಡುಗಿನ ಹಿನ್ನೆಲೆಯಲ್ಲಿ ಪ್ರಾಯೋಗಿಕ ಉಪಗ್ರಹ ಉಡಾವಣೆಗೂ ಅಡಚಣೆ ಉಂಟಾಗಿದೆ.

    ಗಗನಯಾನಕ್ಕಾಗಿ ಸಿದ್ಧತೆ ನಡೆಸುತ್ತಿರುವ ಇಸ್ರೋದ ಯೋಜನೆ ಪ್ರಕಾರ ಮಾನವಸಹಿತ ಗಗನಯಾನಕ್ಕೂ ಮುನ್ನ ಮಾನವರಹಿತವಾಗಿ ಎರಡು ಬಾರಿ ಉಪಗ್ರಹದ ಪ್ರಾಯೋಗಿಕ ಉಡಾವಣೆ ಮಾಡಬೇಕಿದೆ. ಹೀಗೆ ಮಾಡುವುದರಿಂದ, ಉಪಗ್ರಹದಲ್ಲಿರುವ ಎಲ್ಲ ವ್ಯವಸ್ಥೆಗಳ ಕುರಿತು ಸಮಗ್ರ ಅಧ್ಯಯನ ನಡೆಸಲು ಅನುಕೂಲವಾಗಲಿದೆ. ಮೊದಲನೇ ಪ್ರಾಯೋಗಿಕ ಉಪಗ್ರಹ ಮುಂದೂಡಿಕೆಯಾಗಿದೆ ಎಂದರೆ, 2021ರಲ್ಲೇ ಆ ಎರಡು ಪ್ರಾಯೋಗಿಕ ಉಡಾವಣೆಯಾಗಿ, ಸಮಗ್ರ ಅಧ್ಯಯನ ನಡೆಸಿದ ಬಳಿಕ 2022ರಲ್ಲಿ ಮಾನವಸಹಿತ ಗಗನಯಾನದ ಕನಸು ನನಸಾಗಬಹುದು ಎಂದು ಅಂದಾಜಿಸಲಾಗಿದೆ.

    ಇದನ್ನೂ ಓದಿ: ಸಶಕ್ತ ರಾಷ್ಟ್ರ ನಿರ್ಮಾಣಕ್ಕೆ ಮೋದಿ ನಾಯಕತ್ವ ಅಗತ್ಯ: ಬಿಜೆಪಿ ರಾಜ್ಯ ವಕ್ತಾರ ಅಶ್ವತ್ಥನಾರಾಯಣ ಗೌಡ ಹೇಳಿಕೆ

    ಈ ಬಗ್ಗೆ ಮಾಹಿತಿ ನೀಡಿರುವ ಇಸ್ರೋ ಅಧ್ಯಕ್ಷ ಕೆ. ಶಿವನ್​, ಮಾನವರಹಿತ ಗಗನಯಾನದಲ್ಲಿ ಯಂತ್ರಮಾನವ ಸಹಿತ 2 ಪ್ರಾಯೋಗಿಕ ಉಪಗ್ರಹ ಉಡಾವಣೆಯನ್ನು ಮಾಡಲು ಉದ್ದೇಶಿಸಲಾಗಿದೆ. ಆದರೆ, ಸದ್ಯದ ಪರಿಸ್ಥಿತಿ ನೋಡಿದರೆ, ಅದು ಈ ವರ್ಷ ಸಾಧ್ಯವಾಗಲಿದೆ ಎಂದು ಹೇಳಲಾಗದು. ಮುಂಬರುವ ತಿಂಗಳುಗಳಲ್ಲಿನ ಪರಿಸ್ಥಿತಿ ಅವಲೋಕಿಸಿ, ನಂತರ ಈ ಬಗ್ಗೆ ಏನು ಮಾಡಬೇಕು ಎಂಬುದನ್ನು ನಿರ್ಧರಿಸಲಾಗುವುದು. ಕೋವಿಡ್​-19 ಪರಿಸ್ಥಿತಿ ಹೀಗೇ ಮುಂದುವರಿದರೆ, ನಮ್ಮೆಲ್ಲ ಯೋಜನೆಗಳ ವೇಳಾಪಟ್ಟಿಯನ್ನು ಪರಿಷ್ಕರಿಸುವುದು ಅನಿವಾರ್ಯವಾಗಲಿದೆ ಎಂದರು.

    ಹಾಗಾಗಿ, ಈ ವರ್ಷದ ಆರಂಭದಲ್ಲಿ ಉಡಾವಣೆ ಮಾಡಲು ಉದ್ದೇಶಿಸಿದ್ದ ಗಿಸ್ಯಾಟ್​-1 ಸೇರಿ ಒಟ್ಟು 6 ಉಪಗ್ರಹಗಳ ಉಡಾವಣೆ ಮಾಡಲು ವೇಳಾಪಟ್ಟಿಯನ್ನು ಹಾಕಿಕೊಳ್ಳಲಾಗಿದೆ. ಈ ವೇಳಾಪಟ್ಟಿಯನ್ನು ಮುಂಬರುವ ದಿನಗಳಲ್ಲಿ ಬಹಿರಂಗಪಡಿಸಲಾಗುವುದು ಎಂದು ಹೇಳಿದರು.
    ಇದೇ ವೇಳೆ ಗಗನಯಾನಕ್ಕಾಗಿ ಆಯ್ಕೆ ಮಾಡಲಾಗಿರುವ ನಾಲ್ವರು ಬಾಹ್ಯಾಕಾಶಯಾಣಿಗಳು ರಷ್ಯಾದಲ್ಲಿ ತರಬೇತಿ ಮುಂದುವರಿಸಿದ್ದಾರೆ. ಕೋವಿಡ್​-19 ಪಿಡುಗು ಹಿನ್ನೆಲೆಯಲ್ಲಿ ತರಬೇತಿ ತಾತ್ಕಾಲಿಕವಾಗಿ ನಿಲುಗಡೆಯಾಗಿತ್ತಾದರೂ ಈಗ ಅದು ಮುಂದುವರಿದಿದೆ.

    ಚಂದ್ರಯಾನ-3 ಕೂಡ ಮುಂದಕ್ಕೆ: ಈ ವರ್ಷದ ಕೊನೆಯಲ್ಲಿ ಅಥವಾ 2021ರ ಜನವರಿಯಲ್ಲಿ ಕೈಗೊಳ್ಳಲು ಉದ್ದೇಶಿಸಲಾಗಿದ್ದ ಚಂದ್ರಯಾನ-3 ಯೋಜನೆ ಕೂಡ ಮುಂದಕ್ಕೆ ಹೋಗಿದೆ. ಈ ಯೋಜನೆಯು ಚಂದ್ರಯಾನ-2 ರೀತಿಯದ್ದೇ ಆಗಿರುತ್ತದೆ. ಈ ಯೋಜನೆಯ ವಿವರಗಳು ಈಗಾಗಲೆ ಅಂತಿಮವಾಗಿದ್ದು, ಸಿದ್ಧತೆಗಳು ಆರಂಭವಾಗಿದೆ ಎಂದು ಇಸ್ರೋ ಮೂಲಗಳು ತಿಳಿಸಿವೆ.

    ರಾಜ್ಯದಲ್ಲಿ 6 ಮತ್ತು 7ನೇ ತರಗತಿ ಮಕ್ಕಳಿಗೂ ಆನ್​ಲೈನ್​​ ಕ್ಲಾಸ್​ ಇರಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts