More

    ವಿಶ್ವವಿದ್ಯಾಲಯಗಳು ವಾರ್ಷಿಕ ಶೇ.10 ಶುಲ್ಕ ಹೆಚ್ಚಳಕ್ಕೆಶಿಫಾರಸು

    ಬೆಂಗಳೂರು ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳು ಪ್ರತಿ ವರ್ಷ ಶೇ.10 ಅಥವಾ 2 ವರ್ಷಗಳಿಗೆ ಶೇ.20ರಿಂದ 25 ರಷ್ಟು ಶುಲ್ಕ ಹೆಚ್ಚಳ ಮಾಡಬಹುದು ಮತ್ತು ರಾಜ್ಯದ ಎಲ್ಲ ವಿವಿಗಳು ಏಕರೂಪದ ಪರೀಕ್ಷೆ ಮತ್‌ಉತ ಪರೀಕ್ಷಾ ಸಿಬ್ಬಂದಿಗೂ ಏಕರೂಪದ ಸಂಭಾವನೆ ನೀಡಬೇಕೆಂದು ಉನ್ನತ ಶಿಕ್ಷಣ ಪರಿಷತ್ತು ನೇಮಿಸಿದ್ದ ಉಪ ಸಮಿತಿಗಳು ಶಿಫಾರಸು ಮಾಡಿವೆ.

    ರಾಜ್ಯದ ಉನ್ನತ ಶಿಕ್ಷಣ ಇಲಾಖೆ ಅಧಿನದಲ್ಲಿರುವ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ-2000 ಅಡಿ ನಿಯಂತ್ರಿಸಲ್ಪಡುವ, ಸಂಯೋಜಿಸುವ ಹಾಗು ಏಕಾತ್ಮಕ ವಿಶ್ವವಿದ್ಯಾಲಯಗಳು ಸರ್ಕಾರಿ ಏಕರೂಪ ಪ್ರವೇಶಾತಿ ಶುಲ್ಕ, ಪರೀಕ್ಷಾ ಶುಲ್ಕ ಮತ್ತು ಪರೀಕ್ಷಾ ಕಾರ್ಯ ನಿರ್ವಹಿಸುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ನೀಡುವ ಸಂಭಾವನೆ/ಭತ್ಯೆಗಳನ್ನು ಶಿಾರಸಲು ಮಾಡಲು ನೇಮಿಸಿದ್ದ ಸಮಿತಿಯು ವರದಿ ನೀಡಿದೆ.

    ವಿವಿಧ ಕೊರ್ಸ್‌ಗಳಿಗೆ ಏಕರೂಪ ವಿದ್ಯಾರ್ಥಿ ಶುಲ್ಕ ಹಾಗು ಏಕರೂಪದ ಪರೀಕ್ಷಾ ಸಂಭಾವನೆಯನ್ನು ನಿಗದಿಪಡಿಸಲು ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿ ಡಾ. ಲಿಂಗರಾಜ ಗಾಂಧಿ ಮತ್ತು ಪರೀಕ್ಷಾ ವ್ಯವಸ್ಥೆಗಳನ್ನು ಸುವ್ಯವಸ್ಥಿತಗೊಳಿಸುವ ಕುರಿತು ರಾಯಚೂರು ವಿವಿ ಕುಲಪತಿ ಡಾ. ಹರೀಶ್ ರಾಮಸ್ವಾಮಿ ನೇತೃತ್ವದ ಉಪ ಸಮಿತಿಗಳು ವರದಿ ನೀಡಿವೆ.

    ಕೆಲವು ವಿಶ್ವವಿದ್ಯಾಲಯಗಳು ವಿಧಿಸುವ ಕೋರ್ಸ್‌ವಾರು ಹೆಚ್ಚಿನ ಶುಲ್ಕಗಳನ್ನಿ ವಿಧಿಸುತ್ತಿರುವುದು ಆರ್ಥಿಕ ದುರ್ಬಲ ವರ್ಗದ ವಿದ್ಯಾರ್ಥಿಗಲಿಗೆ ಉನ್ನತ ಶಿಕ್ಷಣವು ಕೈಗೆಟುಕದಂತಾಗಿ ರಾಜ್ಯದ ಸರ್ಕಾರಿ ವಿವಿಗಳ ಮೂಲ ಆಶಯ ಹಾಗೂ ಉದ್ದೇಶಗಳಿಗೆ ಹಿನ್ನಡೆಯುಂಟಾಗಿದೆ.

    ಇದರ ಜತೆಗೆ ವಿಶ್ವವಿದ್ಯಾಲಯಗಳು ಅನಿಯಮಿತವಾಗಿ ಬೋಧನಾ ಶುಲ್ಕ, ಪರೀಕ್ಷಾ ಶುಲ್ಕ ಹಾಗೂ ಇತರೆ ವಿದ್ಯಾರ್ಥಿ ಶುಲ್ಕಗಳನ್ನು ಹೆಚ್ಚಿಸುತ್ತಿರುವುದು ಸಹ ಸರ್ಕಾರದ ಗಮನಕ್ಕೆ ಬಂದಿದೆ. ಹಲವು ವಿವಿಗಳು ಬೋಧನಾ ಶುಲ್ಕಕ್ಕಿಂತ ಹೆಚ್ಚಿನ ಪರೀಕ್ಷಾ ಶುಲ್ಕವನ್ನು ವಿಧಿಸುತ್ತಿವೆ. ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸದಿದ್ದರೂ ಕ್ರೀಡಾ ಶುಲ್ಕಗಳನ್ನು ವಸೂಲಿ ಮಾಡುತ್ತಿವೆ. ಈ ಎಲ್ಲ ಕಾರಣಗಳಿಂದ ಶುಲ್ಕಗಳಲ್ಲಿ ಏಕರೂಪತೆ ತರುವುದು ಹಾಗೂ ವಿದ್ಯಾರ್ಥಿ ಶುಲ್ಕ ನಿಗದಿ ಹಾಗೂ ಸ್ವೀಕೃತಿ ವಿಧಿಯನ್ನು ವ್ಯವಸ್ಥಿತಿಗೊಳಿಸುವುದಾಗಿದೆ.

    ಏಕರೂಪದ ಸಮಯ, ಶುಲ್ಕ ನಿಗದಿ:

    ಪರೀಕ್ಷಾ ಪ್ರಕ್ರಿಯೆಯಲ್ಲಿ ಮೌಲ್ಯಮಾನ ಹಾಗೂ ಲಿತಾಂಶಗಳ ಪ್ರಕಟಣೆಗಾಗಿ ವಿವಿಗಳು ಅನಿರ್ದಿಷ್ಟ ಹಾಗೂ ದೀರ್ಘ ಸಮಯವನ್ನು ವ್ಯಯಿಸುತ್ತಿರುವ ಹಿನ್ನೆಲೆಯಲ್ಲಿ ಏಕರೂಪದ ಕಾಲಮಿತಿ ನಿಗದಿ ಮಾಡಬೇಕು. ಪರೀಕ್ಷಾ ಕಾರ್ಐದಲ್ಲಿ ತೊಡಗುವ ಸಿಬ್ಬಂದಿಗೆ ಏಕರೂಪದ ಸಂಭಾವನೆಯನ್ನು ನಿಗದಿ ಮಾಡಬೇಕು ಎಂಬ ಶಿಾರಸುಗಳನ್ನು ಮಾಡಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts