More

    ಕೇಂದ್ರ ಸಚಿವಾಲಯದ ಮೇಲೂ ಕರೊನಾ ನೆರಳು?! ತನಗೆ ತಾನೇ ನಿರ್ಬಂಧ ಹೇರಿಕೊಂಡ ಸಚಿವ

    ನವದೆಹಲಿ: ಕರೊನಾ ವೈರಸ್​ ದೇಶ ವಿದೇಶಗಳಲ್ಲಿ ತನ್ನ ಯಮರೂಪ ದರ್ಶನ ಮಾಡಿಸುತ್ತಿದೆ. ದೇಶದಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಇದೀಗ ಕೇಂದ್ರ ಸಚಿವಾಲಯದಲ್ಲೂ ಕರೊನಾ ನೆರಳು ಕಾಣಿಸಿರುವ ಶಂಕೆ ವ್ಯಕ್ತವಾಗಿದೆ. ಕೇಂದ್ರ ಸಚಿವ ವಿ.ಮುರುಳೀಧರನ್ ನಡೆಸಿದ್ದ ಸಭೆಯಲ್ಲಿ ಕರೊನಾ ಸೋಂಕಿತ ವೈದ್ಯನೊಬ್ಬ ಪಾಲ್ಗೊಂಡಿದ್ದ ಮಾಹಿತಿ ತಿಳಿದುಬಂದಿದ್ದು, ಇದೀಗ ಸಚಿವ ತಮಗೆ ತಾವೇ ನಿರ್ಭಂದವನ್ನು ಹೇರಿಕೊಂಡಿದ್ದಾರೆ.

    ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಮುರುಳೀಧರನ್​ ಕಳೆದ ವಾರ ಕೇರಳದ ತಿರುವನಂತಪುರಂನಲ್ಲಿರುವ ಶ್ರೀ ಚಿತ್ರ ತಿರುನಾಳ್​​ ಇನ್​ ಸ್ಟಿಟ್ಯೂಟ್​ ಫಾರ್​ ಮೆಡಿಕಲ್​ ಸೈನ್ಸ್​ ಮತ್ತು ಟೆಕ್ನಾಲಜಿಯಲ್ಲಿ ಸಭೆ ನಡೆಸಿದ್ದರು. ಆ ಸಭೆಯಲ್ಲಿ ಭಾಗವಹಿಸಿದ ವೈದ್ಯರೊಬ್ಬರಲ್ಲಿ ಕರೊನಾ ವೈರಸ್​ ಇರುವುದು ಭಾನುವಾರದಂದು ಧೃಡವಾಗಿದೆ. ಆದ ಕಾರಣ ತಮ್ಮನ್ನು ತಾವು ಸಮಾಜದಿಂದ ಪ್ರತ್ಯೇಕವಾಗಿಸಿಕೊಳ್ಳುವ ನಿರ್ಧಾರ ತೆಗೆದುಕೊಂಡಿರುವ ಸಚಿವ ವಿ.ಮುರುಳೀಧರನ್​ ಸದ್ಯ ಯಾರನ್ನೂ ನೇರವಾಗಿ ಸಂಪರ್ಕಿಸುತ್ತಿಲ್ಲ.

    ಕರೊನಾ ಸೋಂಕು ಧೃಡವಾಗಿರುವ ವೈದ್ಯ ಸ್ಪೇನ್​ನಿಂದ ಮಾರ್ಚ್​ 1 ರಂದು ಬಂದಿದ್ದ. ಬಂದಾಗ ಆತನನ್ನು ತಪಾಸಣೆ ನಡೆಸಲಾಗಿದ್ದು ಆತನಲ್ಲಿ ಯಾವುದೇ ರೋಗ ಗುಣಲಕ್ಷಣವಿಲ್ಲದಿರುವುದಾಗಿ ತಿಳಿಸಲಾಗಿತ್ತು. ಎರಡು ದಿನಗಳ ಕಾಲ ಆತ ಆಸ್ಪತ್ರೆಯಲ್ಲಿ ಕೆಲಸ ಮಾಡಿದ್ದ. ಅದಾದ ನಂತರ ಮಾರ್ಚ್​ 13ರಂದು ಆತನ ಆರೋಗ್ಯ ಹದಗೆಟ್ಟಿದ್ದು 15ರಂದು ಕರೊನಾ ಇರುವುದು ಧೃಡವಾಗಿದೆ. (ಏಜೆನ್ಸೀಸ್​)

    ಚರ್ಚ್​ನಲ್ಲೇ ಹಬ್ಬಿತು ಕರೊನಾ! ಪಾದ್ರಿ ಮಾಡಿದ ಕೆಲಸದಿಂದಾಗಿ 46 ಜನರು ಕರೊನಾಕ್ಕೆ ತುತ್ತು

    ಪ್ರತ್ಯೇಕ ಕೊಠಡಿಗಳಲ್ಲಿರುವ ಕರೊನಾ ಸೋಂಕಿತರಿಗೆ ಕೇರಂ ಬೋರ್ಡ್​, ಟಿವಿ, ಇಂಟರ್​ನೆಟ್​ ಸೌಲಭ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts