More

    ನೇತ್ರದಾನ, ದೇಹ ದಾನದ ಮೂಲಕ ತಾಯಿಯ ಇಚ್ಛೆ ಪೂರೈಸಿದ ಕೇಂದ್ರ ಆರೋಗ್ಯ ಸಚಿವ

    ನವದೆಹಲಿ: ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ ಅವರ ತಾಯಿ ಸ್ನೇಹಲತಾ ಗೋಯೆಲ್ ಭಾನುವಾರ ನಿಧನರಾಗಿದ್ದಾರೆ. ತಾಯಿಯ ಇಚ್ಛೆಯನುಸಾರ ನೇತ್ರದಾನ ಮತ್ತು ದೇಹದಾನವನ್ನೂ ಮಾಡಲಾಗಿದೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ ಸಚಿವರು.

    ಮನೆಯಲ್ಲಿ ತಾಯಿ ದಿಢೀರನೆ ಕುಸಿದ ಕೂಡಲೇ ಅವರನ್ನು ದೆಹಲಿಯ ಆಲ್​ಇಂಡಿಯಾ ಇನ್​ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್​(ಏಮ್ಸ್​)ಗೆ ದಾಖಲಿಸಲಾಗಿದೆ. ಆದರೆ, ಅವರನ್ನು ಉಳಿಸಿಕೊಳ್ಳಲಾಗಲಿಲ್ಲ. ನಿನ್ನೆ ಬೆಳಗ್ಗೆ 8.50ಕ್ಕೆ ನಿಧನರಾದರು. ಅವರ ಇಚ್ಛೆಯನುಸಾರ ಏಮ್ಸ್​ನಲ್ಲೇ ನೇತ್ರದಾನ ಮಾಡಲಾಗಿದೆ. ಅವರ ಶರೀರವನ್ನು ನಿನ್ನೆ ಅಪರಾಹ್ನ ಮೌಲಾನಾ ಆಜಾದ್ ಮೆಡಿಕಲ್ ಕಾಲೇಜಿಗೆ ದಾನ ಮಾಡಲಾಗಿದೆ ಎಂದು ಟ್ವೀಟ್​ನಲ್ಲಿ ಅವರು ತಿಳಿಸಿದ್ದಾರೆ.

    ಇದನ್ನೂ ಓದಿ: ಪತ್ನಿ ಸಂಸಾರ ಮಾಡದೇ ತವರಿಗೆ ಹೋಗಿ ಕೂತಿದ್ದಾಳೆ, ವಾಪಸ್‌ ಬರಲು ಏನು ಮಾಡಲಿ?

    ಸ್ನೇಹಲತಾ ಅವರಿಗೆ ಕಾರ್ಡಿಯಾಕ್ ಅರೆಸ್ಟ್ ಆದ ಕಾರಣ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ 89 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾರಣಗಳಿಂದಾಗಿ ಉಳಿದ ಅಂಗಾಂಗ ದಾನ ಮಾಡಲಾಗಿಲ್ಲ. ಸ್ನೇಹಲತಾ ಅವರ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿ, ಕಂಬನಿ ಮಿಡಿದಿದ್ದಾರೆ. (ಏಜೆನ್ಸೀಸ್)

    ಪ್ರೀತಿಯ ಅಮ್ಮನ ಕಣ್ಣುಗಳನ್ನು ದಾನ ಮಾಡಿದ ಸಚಿವ ಡಾ. ಹರ್ಷವರ್ಧನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts