More

    ರಾಜ್ಯ ಬಜೆಟ್​-2020: ತೋಟಗಾರಿಕಾ ಕೃಷಿ ಪದ್ಧತಿಗೆ ವರ್ಗಾವಣೆಗೊಳ್ಳುವ ಸಣ್ಣ, ಅತಿ ಸಣ್ಣ ರೈತರಿಗೆ ಗರಿಷ್ಠ 10,000 ರೂ.ವರೆಗೆ ನೆರವು

    ಬೆಂಗಳೂರು: ಅಂತರ್ಜಲ ಸ್ಥಿತಿ ಗಂಭೀರವಾಗಿರುವ ರಾಜ್ಯ ದ 76 ತಾಲೂಕುಗಳಲ್ಲಿ ಮಳೆ ನೀರಿನ ಕೊಯ್ಲು ಮತ್ತು ಜಲ ಸಂರಕ್ಷಣಾ ಚಟುವಟಿಕೆಗಳಿಗಾಗಿ 4.75 ಲಕ್ಷ ಹೆಕ್ಟೇರುಗಳಿಗಾಗಿ 100 ಜಲಾನಯನ ನಿರ್ವಹಣಾ ಯೋಜನೆಗಳನ್ನು ಮಂಜೂರು ಮಾಡಿದ್ದಾಗಿ ಯಡಿಯೂರಪ್ಪನವರು ಬಜಟ್​ ಮಂಡನೆ ವೇಳೆ ತಿಳಿಸಿದರು.

    ಅಲ್ಲದೆ, ಮುಂದಿನ ಮೂರು ವರ್ಷಗಳಲ್ಲಿ ನಾಲ್ಕು ಲಕ್ಷ ಹೆಕ್ಟೇರುಗಳಲ್ಲಿನ 810 ಅತಿ ಸಣ್ಣ ಜಲಾನಯನ ಪ್ರದೇಶಗಳಲ್ಲಿ ಜಲಾಮೃತ ಯೋಜನೆ ಅನುಷ್ಠಾನ ಮಾಡಲಾಗುವುದು ಎಂದು ಘೋಷಿಸಿದರು.

    ತೋಟಗಾರಿಕಾ ಬೆಳೆಗಳ ಕೊಯ್ಲೋತ್ತರ ಅಸಮರ್ಪಕ ನಿರ್ವಹಣೆ ಮತ್ತು ಶೀತಲಗೃಹಗಳ ಕೊರತೆಯಿಂದ ಉಂಟಾಗುತ್ತಿರುವ ನಷ್ಟವನ್ನು ತಪ್ಪಿಸಲು ಬೇಡಿಕೆಯಿರುವ ಜಿಲ್ಲೆಗಳ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ, ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದಲ್ಲಿ 5000 ಮೆಟ್ರಿಕ್​ ಟನ್​ ಸಾಮರ್ಥ್ಯದ 10 ಶೀತಲ ಗೃಹಗಳನ್ನು 75 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

    ಹೊಸದಾಗಿ ತೋಟಗಾರಿಕಾ ಕೃಷಿ ಪದ್ಧತಿಗೆ ವರ್ಗಾವಣೆಗೊಳ್ಳುವ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಪ್ರತಿ ಹೆಕ್ಟೇರ್​ಗೆ 5000 ರೂ.ನಿಂದ 10,000 ರೂ.ವರೆಗೆ ನೆರವು ನೀಡಲಾಗುವುದು, ಹಾಪ್​ಕಾಮ್ಸ್​ಗಳನ್ನು ಬಲಪಡಿಸಲು ಕ್ರಮ ಕೈಗೊಳ್ಳಲಾಗುವುದು, ಕೊಳೆತು ಹೋಗಬಹುದಾದ ಹೂವು, ತರಕಾರಿಗಳನ್ನು ಬೆಂಗಳೂರಿನಿಂದ ದೆಹಲಿ, ಮುಂಬೈ ಹಾಗೂ ತಿರುವನಂತಪುರಕ್ಕೆ ಸಾಗಿಸಲು ಕೇಂದ್ರ ಸರ್ಕಾರದ ಕೃಷಿ ರೈಲ್​ ಯೋಜನೆಯ ಸೌಲಭ್ಯದ ಬಳಕೆ ಮಾಡಿಕೊಳ್ಳಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts