More

    ಜಿಲ್ಲೆಯ ಜನರ ನಿರೀಕ್ಷೆಗಳಿಗೆ ಬಜೆಟ್ ಪೆಟ್ಟು!

    ಜಿಲ್ಲಾ ಕೇಂದ್ರದ ಸೊಲ್ಲಿಲ್ಲಜಿಲ್ಲಾಸ್ಪತ್ರೆ ಬಗ್ಗೆ ಚಕರಾವಿಲ್ಲ

    ನೇಕಾರರ ಪರಿಗಣಿಸಿಲ್ಲ


    ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
    ಪ್ರಭಾವಿ ರಾಜಕಾರಣಿ ಕೆ.ಎಚ್.ಮುನಿಯಪ್ಪ ಉಸ್ತುವಾರಿ ಸಚಿವರಾಗಿ ಪ್ರತಿನಿಧಿಸುವ ಗ್ರಾಮಾಂತರ ಜಿಲ್ಲೆಗೆ ಈ ಬಾರಿಯ ಬಜೆಟ್‌ನಲ್ಲಿ ವಿಶೇಷ ಪ್ಯಾಕೇಜ್ ೋಷಣೆಯಾಗಲಿದೆ, ದಶಕಗಳ ಬೇಡಿಕೆಗಳಿಗೆ ಸ್ಪಂದನೆ ದೊರಕಲಿದೆ ಎಂಬ ಜಿಲ್ಲೆಯ ಜನರ ನಿರೀಕ್ಷೆಗಳಿಗೆ ಪೆಟ್ಟು ಬಿದ್ದಂತಾಗಿದೆ.
    ನಾಲ್ಕೂ ತಾಲೂಕುಗಳನ್ನೊಳಗೊಂಡಿರುವ ಜಿಲ್ಲೆಗೆ ಜಿಲ್ಲಾ ಕೇಂದ್ರ ೋಷಣೆಯಾಗಬಹುದೆಂಬ ನಿರೀಕ್ಷೆ, ಜಿಲ್ಲಾಸ್ಪತ್ರೆ ನಿರ್ಮಾಣದ ಕನಸು, ನೇಕಾರ ಉದ್ಯಮಕ್ಕೆ ವಿಶೇಷ ಒತ್ತು ನೀಡುವ ಭರವಸೆ, ಪ್ರವಾಸಿ ತಾಣಗಳ ಅಭಿವೃದ್ಧಿ, ಕಾವೇರಿ ನೀರಿನ ಸಂಪರ್ಕ, ಮೆಡಿಕಲ್ ಕಾಲೇಜು, ಕೈಗಾರಿಕಾ ಹಬ್ ಸೇರಿ ಬಹಳಷ್ಟು ಬೇಡಿಕೆಗಳಿಗೆ ಬಜೆಟ್‌ನಲ್ಲಿ ಮನ್ನಣೆ ಸಿಗಬಹುದೆಂಬ ನಿರೀಕ್ಷೆ ಹುಸಿಯಾಗಿದೆ. ಇದ್ಯಾವುದರ ಬಗ್ಗೆಯೂ ಚಕಾರವೆತ್ತದ ಸರ್ಕಾರ ಈ ಹಿಂದಿನ ಸರ್ಕಾರ ೋಷಿಸಿದ್ದ, ಚಾಲನಾ ಪರೀಕ್ಷಾ ಪಥ, ಸೀಜಿಂಗ್ ಯಾರ್ಡ್, ಸಿಗ್ನೇಚರ್ ಬ್ಯುಸಿನೆಸ್ ಪಾರ್ಕ್‌ಗಳ ಬಗ್ಗೆ ಆಯವ್ಯಯ ಮಂಡಿಸಿರುವುದು ತೀರ ನಿರಾಶೆ ಮೂಡಿಸಿದೆ.
    ಲೆಕ್ಕಾಚಾರ ತಲೆಗೆಳಗು: ಜಿಲ್ಲೆಯ ನಾಲ್ಕೂ ತಾಲೂಕುಗಳ ಪೈಕಿ ಮೂರು ತಾಲೂಕುಗಳಲ್ಲಿ ಕಾಂಗ್ರೆಸ್ ಶಾಸಕರೇ ಇದ್ದಾರೆ, ದೇವನಹಳ್ಳಿ ಶಾಸಕರಾಗಿರುವ ಕೆ.ಎಚ್.ಮುನಿಯಪ್ಪ ಉಸ್ತುವಾರಿ ಹೊಣೆಹೊತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಗೆ ಭರಪೂರ ಕೊಡುಗೆಗಳು ಸಿಗಲಿವೆ ಎಂಬ ಚರ್ಚೆ ಬಿರುಸು ಪಡೆದಿತ್ತು. ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರು ಅನುದಾನ ಬಿಡುಗಡೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರುತ್ತಿದ್ದರು. ಆದರೆ ಈ ಬಾರಿ ಮೂರು ತಾಲೂಕುಗಳಲ್ಲಿ ಕಾಂಗ್ರೆಸ್ ಶಾಸಕರೇ ಇದ್ದಾರೆ, ಕಾಂಗ್ರೆಸ್ ಸರ್ಕಾರವೂ ಇದೆ. ಆದರೆ ಅನುದಾನದ ಲೆಕ್ಕಚಾರದಲ್ಲಿ ಚೌಕಾಸಿ ಮುಂದುವರೆದಿದೆ. ಮುಂದಿನ ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆ ಲಿತಾಂಶದಲ್ಲಿ ಗ್ರಾಮಾಂತರ ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರಗಳು ನಿರ್ಣಾಯಕ ಪಾತ್ರ ವಹಿಸುವುದರಿಂದ ಜಿಲ್ಲೆಗೆ ಈ ಬಾರಿಯ ಬಜೆಟ್‌ನಲ್ಲಿ ವಿಶೇಷ ಅನುದಾನ ಹರಿದುಬರಲಿದೆ ಎಂಬ ಲೆಕ್ಕಾಚಾರ ಕೇಳಿಬಂದಿತ್ತು. ಆದರೆ ಇದೆಲ್ಲಾ ಲೆಕ್ಕಾಚಾರಗಳು ತಲೆಕೆಳಗಾಗಿವೆ.

    ಹಳಿ ಬದಲಿಸಿದ ಮೆಟ್ರೋ! ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಚಿವ ಎಂಟಿಬಿ ನಾಗರಾಜ್ ಕೆಆರ್‌ಪುರದಿಂದ ಹೊಸಕೋಟೆವರೆಗೆ ಮೆಟ್ರೋ ವಿಸ್ತರಣೆ ಕುರಿತು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮೇಲೆ ಸಾಕಷ್ಟು ಒತ್ತಡ ಹಾಕಿದ್ದರು. ಕೇಂದ್ರ ಮಂತ್ರಿಗಳಿಂದಲೂ ಗ್ರೀನ್ ಸಿಗ್ನಲ್ ಸಿಕ್ಕಿತ್ತು, ಅಂದಿನ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಕೂಡ ಇದಕ್ಕೆ ದನಿಗೂಡಿಸಿದ್ದರು. ಆದರೆ ಈ ಬಾರಿಯ ಕಾಂಗ್ರೆಸ್ ಬಜೆಟ್‌ನಲ್ಲಿ ಮೆಟ್ರೋ ಗುರಿ ದೇವನಹಳ್ಳಿ ಕಡೆಗೆ ಸಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೇವನಹಳ್ಳಿಯವರೆಗೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಮೆಟ್ರೋ ರೈಲು ಯೋಜನೆ ಆರಂಭಿಸಲು ಕಾರ್ಯಸಾಧ್ಯತಾ ವರದಿ ತಯಾರಿಸುವ ಬಗ್ಗೆ ಬಜೆಟ್‌ನಲ್ಲಿ ತಿಳಿಸಲಾಗಿದೆ. ಇದರಲ್ಲೂ ಸ್ಪಷ್ಟತೆ ಇಲ್ಲದಂತಾಗಿದ್ದು, ಜಿಲ್ಲೆಗೆ ಮೆಟ್ರೋ ವಿಸ್ತರಣೆ ಗಗನಕುಸುಮವಾಗಲಿದೆಯೇ ಎಂಬ ಶಂಕೆ ಮೂಡಿಸಿದೆ.
    ಘಾಟಿಗೆ ಪ್ರಾಧಿಕಾರ: ಮುಜರಾಯಿ ಇಲಾಖೆಯಲ್ಲಿ ಭರ್ಜರಿ ಪರಿವರ್ತನೆಗೆ ಮುನ್ನುಡಿ ಬರೆದಿರುವ ರಾಜ್ಯ ಸರ್ಕಾರ ವಿವಿಧ ದೇವಾಲಯಗಳ ಪ್ರಾಧಿಕಾರ ಸ್ಥಾಪನೆಗೆ ನಿರ್ಧರಿಸಿದೆ. ಮುಜರಾಯಿ ಸಚಿವ ರಾಮಲಿಂಗರೆಡ್ಡಿ ಪ್ರಯತ್ನಕ್ಕೆ ರಾಜ್ಯ ಸಂಪುಟವೂ ಗ್ರೀನ್ ಸಿಗ್ನಲ್ ನೀಡಿದೆ. ಅದರಲ್ಲಿ ದೊಡ್ಡಬಳ್ಳಾಪುರ ತಾಲೂಕು ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಈ ಮೂಲಕ ರಾಜ್ಯದ ಶ್ರೀಮಂತ ದೇಗುಲಗಳ ಪಟ್ಟಿಯಲ್ಲಿರುವ ಘಾಟಿಗೆ ಮತ್ತಷ್ಟು ಶ್ರೀಮಂತಿಗೆ ನೀಡಲು ಸಾಧ್ಯವಾಗಲಿದೆ.
    ಸ್ಯಾಟಲೈಟ್ ಬದಲು ಟೌನ್‌ಶ್ಿ: ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜಧಾನಿಯ ಗಡಿ ಹಂಚಿಕೊಂಡಿರುವ ಗ್ರಾಮಾಂತರ ಜಿಲ್ಲೆಯ ನಾಲ್ಕೂ ತಾಲೂಕುಗಳನ್ನು ಸ್ಯಾಟಲೈಟ್ ಟೌನ್ ಆಗಿ ಅಭಿವೃದ್ಧಿಪಡಿಸುವ ಇಂಗಿತ ವ್ಯಕ್ತವಾಗಿತ್ತು. ಕಾಂಗ್ರೆಸ್ ಸರ್ಕಾರದ ಬಜೆಟ್‌ನಲ್ಲಿ ಇವೇ ನಾಲ್ಕೂ ತಾಲೂಕುಗಳಿಗೆ ಟೌನ್‌ಶ್ಿ ಸ್ಪರ್ಶ ನೀಡುವ ೋಷಣೆಯಾಗಿದೆ.

    ೋಷಣೆಗಳು ನೇಪಥ್ಯಕ್ಕೆ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೆೇಂದ್ರ ಸ್ಥಾಪನೆ, ಬಹುಮಹಡಿ ಕಾರ್ಖಾನೆ ಪರಿಕಲ್ಪನೆಯ ಅವಶ್ಯಕ ಪ್ಲಗ್ ಆ್ಯಂಡ್ ಪ್ಲೇ ಮೂಲ ಸೌಲಭ್ಯ ರೂಪಿಸುವ ಯೋಜನೆ, ಕಾರಾಗೃಹ ನಿರ್ಮಾಣ, ಶೈತ್ಯಾಗಾರ ನಿರ್ಮಾಣ ಕುರಿತು ಕಳೆದ ಬಜೆಟ್‌ನಲ್ಲಿ ೋಷಣೆಗಳು ಹೊರಬಿದ್ದಿದ್ದವು. ಆದರೆ ಯಾವುದೂ ಕಾರ್ಯರೂಪಕ್ಕೆ ಬರಲಿಲ್ಲ. ಈ ಬಾರಿಯ ಬಜೆಟ್‌ನಲ್ಲಿ ಇವೆಲ್ಲವೂ ನೇಪಥ್ಯಕ್ಕೆ ಸರಿದಿವೆ.ದೇವನಹಳ್ಳಿ ಪಟ್ಟಣಕ್ಕೂ ಕಾವೇರಿ ನೀರು ಪೂರೈಕೆಯಾಬೇಕು, ಟಿಪ್ಪು ಕೋಟೆ ಅಭಿವೃದ್ಧಿ, ಕೆಂಪೇಗೌಡರ ಪೂರ್ವಿಕರು ನೆಲೆಸಿದ್ದ ಆವತಿ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಮೀಸಲಿಡಬೇಕು ಎಂಬ ಕೂಗಿಗೆ ಈ ಬಾರಿಯೂ ಸರ್ಕಾರ ಕಿವಿಯಾಗಿಲ್ಲ.

    ನೇಕಾರರಿಗೆ ತಣ್ಣೀರು: ರಾಜ್ಯದ ಹೆಚ್ಚಿನ ನೇಕಾರರಿರುವ ಜಿಲ್ಲೆಗಳ ಪೈಕಿ ಗ್ರಾಮಾಂತರ ಮುಂಚೂಣಿಯಲ್ಲಿದೆ ಲಕ್ಷಾಂತರ ಮಂದಿ ನೇಕಾರಿಕೆಯಲ್ಲಿ ಬದುಕು ಕಂಡುಕೊಂಡಿದ್ದಾರೆ. ಈ ಬಾರಿ ಬಜೆಟ್‌ನಲ್ಲಿ ನೇಕಾರರ ಕಲ್ಯಾಣ ನಿಧಿ ರಚನೆ, ಸೀರೆಗೆ ಬ್ರಾಂಡಿಂಗ್ ಸೇರಿ ಸಾಕಷ್ಟು ಯೋಜನೆಗಳು ೋಷಣೆಯಾಗಲಿವೆ ಎಂಬ ನಿರೀಕ್ಷೆ ನೇಕಾರರದ್ದಾಗಿತ್ತು. ಗುರುತಿನ ಚೀಟಿ, ಸಹಾಯಧನ, ಆವರ್ತ ನಿಧಿ ಮೀಸಲು, 20 ಎಚ್‌ಪಿ ವರೆಗೆ ಉಚಿತ ವಿದ್ಯುತ್ ಸೇರಿ ಹಲವು ಬೇಡಿಕೆಗಳನ್ನಿಟ್ಟುಕೊಂಡು ಕಾಯುತ್ತಿದ್ದ ನೇಕಾರ ಉದ್ಯಮಕ್ಕೆ ಬಜೆಟ್ ತಣ್ಣೀರೆರಚಿದೆ.ವಿಜಯಪುರ ತಾಲೂಕು ೋಷಣೆಯಾಗಬೇಕು, ಹೊಸಕೋಟೆ ಭಾಗದಲ್ಲಿ ಕೈಗಾರಿಕಾ ಹಬ್ ಸ್ಥಾಪನೆಯಾಗಬೇಕು, ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಬೇಕು., ದೊಡ್ಡಬಳ್ಳಾಪುರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಯಾಗಬೇಕು, ಮಧುರೆನಲ್ಲಿ ಭಗೀರಥ ಪೀಠ ಸ್ಥಾಪನೆಯಾಗಬೇಕೆಂಬ ಪ್ರಮುಖ ಬೇಡಿಕೆಗಳಿಗೆ ಸ್ಪಂದನೆ ಸಿಕ್ಕಿಲ್ಲ.

    ಜಿಲ್ಲೆಗೆ ದೊರಕಿದ್ದೇನು?

    1. ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಪ್ತನ್ನು ಉತ್ತೇಜಿಸಲು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ವಿಮಾನನಿಲ್ದಾಣದ ಸಮೀಪದ ಪೂಜೇನಹಳ್ಳಿಯಲ್ಲಿ ಆಹಾರ ಪಾರ್ಕ್ ಸ್ಥಾಪನೆ.
    2. ನೆಲಮಂಗಲ ಹಾಗೂ ಹೊಸಕೋಟೆ ತಾಲೂಕುಗಳಲ್ಲಿ 100 ಹಾಸಿಗೆ ಸಾಮರ್ಥ್ಯದ ಸರ್ಕಾರಿ ಆಸ್ಪತ್ರೆಗಳನ್ನು 280 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸುವುದು.
    3. ದೇವನಹಳ್ಳಿ, ಹೊಸಕೋಟೆ, ನೆಲಮಂಗಲ ಹಾಗೂ ದೊಡ್ಡಬಳ್ಳಾಪುರವನ್ನು ರಸ್ತೆ ಹಾಗೂ ರೈಲು ಸಂಪರ್ಕದ ಮೂಲಕ ಟೌನ್‌ಶ್ಿಗಳನ್ನಾಗಿ ಅಭಿವೃದ್ಧಿಪಡಿಸುವುದು.
    4. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೇವನಹಳ್ಳಿಯವರೆಗೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಮೆಟ್ರೋ ರೈಲು ಯೋಜನೆ ಆರಂಭಿಸಲು ಕಾರ್ಯಸಾಧ್ಯತಾ ವರದಿ ತಯಾರಿಸುವುದು.
    5. ದೇವನಹಳ್ಳಿಯ ವಿಮಾನನಿಲ್ದಾಣದ ಬಳಿ ನಿರ್ಮಾಣವಾಗುತ್ತಿರುವ ಸಿಗ್ನೇಚರ್ ಬ್ಯುಸಿನೆಸ್ ಪಾರ್ಕ್ ಮುಂದಿನ ದಿನಗಳಲ್ಲಿ 5000 ಕೋಟಿ ರೂ.ಹೂಡಿಕೆ ಆಕರ್ಷಿಸುವ ನಿರೀಕ್ಷೆ.
    6. ದೊಡ್ಡಬಳ್ಳಾಪುರ ತಾಲೂಕು ಶ್ರೀ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದ ಅಭಿವೃದ್ಧಿಗೆ ಪ್ರತ್ಯೇಕ ಅಭಿವೃದ್ಧಿ ಪ್ರಾಧಿಕಾರ ರಚಿಸುವುದು.
      7. ನೆಲಮಂಗಲದಲ್ಲಿ ಸ್ವಯಂ ಚಾಲಿತ ಚಾಲನ ಪರೀಕ್ಷಾ ಪಥ ಸ್ಥಾಪನೆ.
      8. ದೇವನಹಳ್ಳಿಯಲ್ಲಿ ಸೀಜಿಂಗ್‌ಯಾರ್ಡ್ ನಿರ್ಮಾಣ.
      9. ಬೆಂಗಳೂರಿನ ಉತ್ತರ ತಾಲೂಕಿನಲ್ಲಿ ಅತ್ಯಾಧುನಿಕ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಸಮುಚ್ಛಯವನ್ನೊಳಗೊಂಡ ಕ್ರೀಡಾನಗರ ಸ್ಥಾಪನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts