More

    ಕೇಂದ್ರ ಬಜೆಟ್​ 2020: ಏರಿಕೆಯೊಂದಿಗೆ ಎಚ್ಚರಿಕೆಯ ವಹಿವಾಟು ನಡೆಸುತ್ತಿರುವ ಸೆನ್ಸೆಕ್ಸ್​, ನಿಫ್ಟಿ

    ಮುಂಬೈ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಬೆಳಗ್ಗೆ ಕೇಂದ್ರ ಬಜೆಟ್ 2020 ಮಂಡಿಸುತ್ತಿರುವ ವೇಳೆ ಷೇರುಪೇಟೆ ಸೂಚ್ಯಂಕಗಳಾದ ಸೆನ್ಸೆಕ್ಸ್​(ಬಾಂಬೆ ಸ್ಟಾಕ್ ಎಕ್ಸ್​ಚೇಂಜ್) ಮತ್ತು ನಿಫ್ಟಿ (ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​) ಎಚ್ಚರಿಕೆಯ ವಹಿವಾಟು ಮುಂದುವರಿಸಿವೆ.

    ಬೆಳಗ್ಗಿನ ಸೆಷನ್​ನಲ್ಲಿ 450ಕ್ಕೂ ಹೆಚ್ಚು ಅಂಶಗಳ ಚೇತರಿಕೆ ದಾಖಲಿಸಿದ ಸೆನ್ಸೆಕ್ಸ್​ ಬಳಿಕ 30.84 ಅಂಶ(0.09%) ಏರಿಕೆಯೊಂದಿಗೆ 40,754.33 ಅಂಶದಲ್ಲಿ 11.30ರ ವೇಳೆಗೆ ವಹಿವಾಟು ಮುಂದುವರಿಸಿತ್ತು. ಇದೇ ರೀತಿ, ನಿಫ್ಟಿ 10.35 ಅಂಶ ಏರಿಕೆ ದಾಖಲಿಸಿದ್ದು, 11,972.45ರಲ್ಲಿ ವಹಿವಾಟು ನಡೆಸಿತ್ತು.

    ಮುಂಗಡ ಪತ್ರ ಮಂಡಿಸುವ ಮುನ್ನ ಸೆನ್ಸೆಕ್ಸ್​ 150 ಅಂಶ ಏರಿಕೆಯೊಂದಿಗೆ ವಹಿವಾಟು ನಡೆಸುತ್ತಿತ್ತು. ಬಜೆಟ್ ಮಂಡನೆ ಆರಂಭಿಸುತ್ತಿದ್ದಂತೆ ಭಾರತದ ಆರ್ಥಿಕತೆ ಬಲಿಷ್ಠವಾಗಿದೆ ಎಂದು ಹೇಳುತ್ತಿದ್ದಂತೆ ಮಾರುಕಟ್ಟೆ ಚೇತರಿಕೆ ತೋರಿ ಮುನ್ನುಗ್ಗಿದೆಯಾದರೂ ಎಚ್ಚರಿಕೆಯ ವಹಿವಾಟು ಮುಂದುವರಿಸಿದೆ.

    ಸೆನ್ಸೆಕ್ಸ್ ಪಟ್ಟಿಯಲ್ಲಿ ಮಾರುತಿ, ಎಚ್​ಯುಎಲ್​, ಬಜಾಜ್ ಫೈನಾನ್ಸ್​, ಅಲ್ಟ್ರಾಟೆಕ್ ಸಿಮೆಂಟ್​, ಟಿಸಿಎಸ್​, ಏಷ್ಯನ್ ಪೇಂಟ್ಸ್​, ಬಜಾಜ್ ಆಟೋ ಷೇರುಗಳು ಏರಿಕೆ ದಾಖಲಿಸಿದ್ದರೆ, ಪವರ್​ಗ್ರಿಡ್​, ಎನ್​ಟಿಪಿಸಿ, ಟೆಕ್​ಮಹೀಂದ್ರಾ, ಟಾಟಾ ಸ್ಟೀಲ್​, ಒಎನ್​ಜಿಸಿ ಷೇರುಗಳು ನಷ್ಟ ಅನುಭವಿಸಿವೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts