More

    ವಿಶ್ವ ಗುರು ಬಸವಣ್ಣನ ಜಯಂತಿ ಅದ್ದೂರಿ ಆಚರಣೆ

    ವಿಜಯಪುರ: ಮಹಾ ಮಾನವತಾವಾದಿ, ವಿಶ್ವಕ್ಕೆ ಮೊಟ್ಟ ಮೊದಲ ಬಾರಿಗೆ ಸಂಸತ್ ಪರಿಕಲ್ಪನೆ ಪರಿಚಯಿಸಿದ, ಸಮ ಸಮಾಜ ನಿರ್ಮಾಣದ ಕನಸು ಹೊತ್ತು ಭಕ್ತಿ ಚಳುವಳಿ ರೂಪಿಸಿದ ಮಹಾತ್ಮ ಬಸವೇಶ್ವರರ ಜಯಂತಿಯನ್ನು ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.

    ನಗರ ಸೇರಿದಂತೆ ಜಿಲ್ಲಾದ್ಯಂತ ಶುಕ್ರವಾರ ಮಹಾತ್ಮ ಬಸವೇಶ್ವರರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ರೈತರು ಎತ್ತುಗಳ ಮೆರವಣಿಗೆ, ಬಂಡಿಯಾತ್ರೆ ಮೂಲಕ ಬಸವ ಜಯಂತಿ ಆಚರಿಸಿದರು. ದಾಸೋಹದ ಮೂಲಕ ಗಮನ ಸೆಳೆದರು. ಕೆಲವರು ಕಾಯಕ ತತ್ವದ ಬಗ್ಗೆ ಉಪನ್ಯಾಸ ನೀಡಿದರಲ್ಲದೇ ಪರಿಸರ ಸ್ವಚ್ಛತೆ, ಸಸಿ ನೆಡುವುದು ಸೇರಿದಂತೆ ವಿವಿಧ ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಬಸವ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದರು.

    ಮಹಾತ್ಮ ಬಸವೇಶ್ವರರ ವೃತ್ತಗಳು ಬಣ್ಣದ ದೀಪಗಳಿಂದ, ಬಣ್ಣದ ಕಾರಂಜಿ, ಕೇಸರಿ ಧ್ವಜ, ಬ್ಯಾನರ್‌ಗಳಿಂದ ಅಲಂಕೃತಗೊಂಡಿದ್ದವು. ಕೆಲವೆಡೆ ರಂಗೋಲಿಯ ಚಿತ್ತಾರ ಅರಳಿಸಲಾಗಿತ್ತು. ಮಕ್ಕಳು ಬಸವೇಶ್ವರರ ಛದ್ಮವೇಷ ಧರಿಸಿ ಕಂಗೊಳಿಸಿದರು. ಎಲ್ಲೆಡೆ ವಚನಗಳ ಪಠಣ ಜೋರಾಗಿತ್ತು. ಕೆಲವರು ಮೌಢ್ಯ ನಿವಾರಣೆ ಕಾರ್ಯಕ್ರಮ ರೂಪಿಸಿ ಜನರಲ್ಲಿ ಜಾಗೃತಿ ಮೂಡಿಸಿದರು. ಸಾಮಾಜಿಕ ಜಾಲತಾಣಗಳು ಸಂಪೂರ್ಣ ಬಸವಮಯವಾಗಿದ್ದವು. ನೃತ್ಯ, ಗಾಯನ, ಉಪನ್ಯಾಸ, ವಿಚಾರಗೋಷ್ಠಿಗಳು ಬಸವ ಜಯಂತಿಯ ಕಳೆ ಹೆಚ್ಚಿಸಿದವು.

    ಕಾಂಗ್ರೆಸ್ ಕಚೇರಿಯಲ್ಲಿ ಆಚರಣೆ

    ನಗರದ ಕೋರ್ಟ್ ವೃತ್ತದ ಬಳಿಯಿರುವ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪ ಸಮರ್ಪಣೆ ಮೂಲಕ ಬಸವ ಜಯಂತಿ ಆಚರಿಸಲಾಯಿತು.

    ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಪುಷ್ಪ ಸಮರ್ಪಿಸಿ ಬಸವೇಶ್ವರರ ತತ್ವ-ಸಂದೇಶದ ಕುರಿತು ಮಾತನಾಡಿದರು.
    ಮಾಜಿ ಶಾಸಕ ರಾಜು ಆಲಗೂರ, ಉಪಾಧ್ಯಕ್ಷ ವೈಜನಾಥ ಕರ್ಪೂರಮಠ, ಚಾಂದಸಾಬ ಗಡಗಲಾವ, ಡಾ.ಗಂಗಾಧರ ಸಂಬಣ್ಣಿ, ರಾಮನಗೌಡ ಬಗಲಿ, ಸುಭಾಷ ಕಾಲೇಬಾಗ, ಜಮೀರಅಹ್ಮದ ಬಕ್ಷಿ, ಮೀರಾಸಾಬ ಮುಲ್ಲಾ, ಸಾಹೇಬಗೌಡ ಬಿರಾದಾರ, ವಸಂತ ಹೊನಮೊಡೆ, ಚನಬಸಪ್ಪ ನಂದರಗಿ, ಹಾಜಿಲಾಲ ದಳವಾಯಿ, ಎಂ.ಎಂ. ಮುಲ್ಲಾ, ದೇಸು ಚವಾಣ್, ಮಲ್ಲಿಕಾರ್ಜುನ ಪರಸಣ್ಣವರ, ಸಂತೋಷ ಬಾಲಗಾಂವಿ, ಅಬ್ದುಲ್‌ಪೀರಾ ಜಮಖಂಡಿ, ಅಜಿತ ಸಿಂಗೆ, ಡಾ.ಎಂ.ಆರ್. ಗುರಿಕಾರ, ಎ.ಆರ್. ಕಂಬಾಗಿ, ಗುಲಾಬ ಚವಾಣ್, ಮಹಾದೇವ ಜಾಧವ, ಸಣ್ಣಪ್ಪ ತಳವಾರ, ಪರಶುರಾಮ ಹೊಸಮನಿ, ಶಂಕರಸಿಂಗ ಹಜೇರಿ, ಅಕ್ಬರ್ ನದಾಫ್, ಬಿ.ಎಸ್. ಗಸ್ತಿ ಮತ್ತಿತರರಿದ್ದರು.

    ಬುರಣಾಪುರದ ಮಲ್ಲಿಕಾರ್ಜುನ ದೇವಾಲಯ

    ತಾಲೂಕಿನ ಬುರಣಾಪುರದ ಮಲ್ಲಿಕಾರ್ಜುನ ದೇವಾಲಯದಲ್ಲಿ ಬಸವ ಜಯಂತಿ ನಿಮಿತ್ಯವಾಗಿ ಸಾಮೂಹಿಕವಾಗಿ ಇಂಷ್ಟಲಿಂಗ ಪೂಜೆ ನೆರವೇರಿಸಲಾಯಿತು.
    ಧರ್ಮದರ್ಶಿ ಲಕ್ಷ್ಮಣ ಶಿವಶರಣರ ನೇತೃತ್ವದಲ್ಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರಕ್ಕೆ ಸಹಸ್ರನಾಮಾವಳಿಯ ಮಹಾ ಶಿವಪೂಜೆ ನಡೆದು ವಿಶ್ವಶಾಂತಿಗಾಗಿ 63 ಶಿವಶರಣರ ಸಾಮೂಹಿಕ ಇಷ್ಟಲಿಂಗ ಪೂಜೆ ನೆರವೇರಿತು. ಮುದ್ದು ಮಕ್ಕಳಿಂದ ಬಸವ ನಾಮಾವಳಿ ವಚನ ಪಠಣ, ಅಕ್ಕನ ಬಳಗದವರಿಂದ ಶಿವಭಜನೆ, ಶಿವಚಿಂತನೆ ನಡೆದು ಮಹಾಮಂಗಳಾರತಿಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
    ಬಸಯ್ಯ ಹಿರೇಮಠ, ಸೋಮಯ್ಯ ಮಠಪತಿ, ಹಣಮಂತ ತ. ಪುಟ್ಟಿ, ನಾಗಪ್ಪ ಆಹೇರಿ, ಸಂಗವ್ವ ನುಚ್ಚಿ, ದೇವಕ್ಕಿ ದಳವಾಯಿ, ಸಾಯವ್ವ ನುಚ್ಚಿ, ವಿಜಯಲಕ್ಷ್ಮಿ ಹಿರೇಮಠ, ಬೌರಮ್ಮ ಹಿರೇಮಠ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts