More

    ಹಲವೆಡೆ ಬಸವ ಜಯಂತಿ ಸಂಭ್ರಮ

    ಚಿತ್ರದುರ್ಗ: ಬಸವ ಜಯಂತಿ ಅಂಗವಾಗಿ ವೀರಶೈವ ಸಮಾಜ, ಪ್ರಥಮ್ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಚಿತ್ರದುರ್ಗದಲ್ಲಿ ಶುಕ್ರವಾರ ರಕ್ತದಾನ ಶಿಬಿರ ನಡೆಯಿತು.

    ಕಲ್ಕೆರೆ ಮಠದ ಬಸವಲಿಂಗ ಶ್ರೀ, ಜಿಲ್ಲಾ ರೆಡ್‌ಕ್ರಾಸ್ ಉಪ ಸಭಾಪತಿ ಅರುಣ್‌ಕುಮಾರ್, ಕಡ್ಲೆಗುದ್ದು ಪ್ರೌಢಶಾಲೆಯ ಮುಖ್ಯಶಿಕ್ಷಕ ಮಹೇಶ್, ಕೀರ್ತಿಕುಮಾರ್, ಚಂದ್ರಕಲಾ, ದೀಪಿಕಾ ಇತರರಿದ್ದರು. ಎ.ಜಿ.ಸುರೇಂದ್ರಬಾಬು ರಕ್ತದಾನ ಮಾಡಿದರು.

    ತಾಲೂಕಿನ ದೊಡ್ಡಸಿದ್ಧವ್ವನಹಳ್ಳಿಯಲ್ಲಿ ಬಸವ ಜಯಂತಿ ಅಂಗವಾಗಿ ಸಿಂಗರಿಸಿದ ಎತ್ತಿನ ಗಾಡಿಯಲ್ಲಿ ವಿಶ್ವಗುರು ಬಸವೇಶ್ವರರ ಭಾವಚಿತ್ರ ಪ್ರತಿಷ್ಠಾಪಿಸಿದ ನಂತರ ಜರುಗಿದ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

    ಬಚ್ಚಬೋರನಹಟ್ಟಿ ಗ್ರಾಮದ ಬಸವಣ್ಣ ದೇಗುಲದ ಮುಂಭಾಗದಲ್ಲಿ ಎತ್ತುಗಳಿಗೆ ಸಾಮೂಹಿಕವಾಗಿ ಪೂಜೆ ಸಲ್ಲಿಸಿ, ಬಸವ ಜಯಂತಿ ಆಚರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts