More

    ಭೂಗತ ಪಾತಕಿ ರವಿ ಪೂಜಾರಿಯ ಸೆನೆಗಲ್ ಸುಳಿವಿನ ರಹಸ್ಯ ಬಯಲು: ಕೋಳ ತೊಡಿಸಿದ್ದು ಹೋಳಿ ವಿಡಿಯೋ!

    ಬೆಂಗಳೂರು: ವಿದೇಶದಲ್ಲಿದ್ದುಕೊಂಡೇ ಭಾರತದ ಭೂಗತ ಲೋಕದಲ್ಲಿ ವ್ಯವಹಾರ ನಡೆಸುತ್ತಿದ್ದ ರವಿ ಪೂಜಾರಿಯ ಸುಳಿವನ್ನು ಪೊಲೀಸರಿಗೆ ಕೊಟ್ಟಿದ್ದು ‘ಹೋಳಿ ಹಬ್ಬ’ದ ಸಣ್ಣ ವಿಡಿಯೋ! ಈತನನ್ನು ಸೆನೆಗಲ್​ನಿಂದ ಬಂಧಿಸಿ ಕರೆತಂದ ಪೊಲೀಸ್ ತಂಡದ ಮುಖ್ಯಸ್ಥ, ಎಡಿಜಿಪಿ ಅಮರ್ ಕುಮಾರ್ ಪಾಂಡೆ ಈ ಅಚ್ಚರಿ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

    ನಕಲಿ ಪಾಸ್​ಪೋರ್ಟ್ ಬಳಸಿ ಉಗಾಂಡಕ್ಕೆ ತೆರಳಿದ್ದ ರವಿ ಪೂಜಾರಿ ದಕ್ಷಿಣ ಆಫ್ರಿಕಾದಲ್ಲಿ ನೆಲೆ ಕಂಡುಕೊಂಡಿದ್ದ. ಅಲ್ಲಿಂದಲೇ ದೇಶದ ಪೊಲೀಸರಿಗೆ 30 ವರ್ಷಗಳ ಕಾಲ ಕಾಡಿದ್ದ. 2018ರ ಜು.18ರಂದು ಅಂದಿನ ಡಿಜಿಪಿ ನೀಲಮಣಿ ಎನ್. ರಾಜು ನನ್ನನ್ನು ಕಚೇರಿಗೆ ಕರೆದು ರವಿ ಪೂಜಾರಿಯನ್ನು ಬಂಧಿಸುವ ಜವಾಬ್ದಾರಿ ನೀಡಿದರು. ಮಾರನೇ ದಿನವೇ ಆತನ ವಿರುದ್ಧ ದಾಖಲಾಗಿದ್ದ 97 ಪ್ರಕರಣಗಳ ದಾಖಲೆ ಪಡೆದು ಪರಿಶೀಲಿಸಿದಾಗ ಇಂಟರ್​ನೆಟ್ ಕರೆಗಳ ಮೂಲಕ ಬೆದರಿಕೆ ಒಡ್ಡಿದ್ದ. ತನಿಖಾಧಿಕಾರಿಗಳು ಕರೆಗಳ ವಿಶ್ಲೇಷಣೆ ನಡೆಸಿದಾಗ ಎಲ್ಲವೂ ವಿವಿಧ ದೇಶಗಳ ಲೋಕೇಷನ್ ತೋರಿಸುತ್ತಿದ್ದವು. ಕರೆಗಳ ಧ್ವನಿ ಮಾದರಿ ನೋಡಿದಾಗ ಮೂರು ಧ್ವನಿಗಳೂ ಒಂದೇ ಎಂಬುದು ಖಚಿತವಾಯಿತು. ನಂತರದಲ್ಲಿ, 1994ರಲ್ಲಿ ಮುಂಬೈ ಪೊಲೀಸರು ಕೊಲೆ ಪ್ರಕರಣದಲ್ಲಿ ಆತನ ಕಪು್ಪ ಬಿಳುಪು ಫೋಟೋ ಮತ್ತು ಬೆರಳಚ್ಚು ಸಂಗ್ರಹಿಸಿರುವುದು ಲಭ್ಯವಾಯಿತು. ಈ ವೇಳೆ ‘ಹೋಳಿ ಹಬ್ಬ’ದ ವಿಡಿಯೋ ಸಿಕ್ಕಿತು. ಅದನ್ನು ಇಟ್ಟುಕೊಂಡು ತನಿಖೆ ನಡೆಸಿದಾಗ ಆ ಪ್ರದೇಶ ಆಸ್ಟ್ರೇಲಿಯಾವೋ ಅಥವಾ ದಕ್ಷಿಣ ಆಫ್ರಿಕಾವೋ ಎಂಬುದನ್ನು ಅಂತಿಮ ಮಾಡಲು ಕಷ್ಟವಾಯಿತು. ಪೂರಕ ದಾಖಲೆ, ತಾಂತ್ರಿಕ ಸಹಾಯದಿಂದ ದಕ್ಷಿಣ ಆಫ್ರಿಕಾ ಎಂದು ಖಚಿತವಾಗಿ ಕೇಂದ್ರದ ತನಿಖಾ ಸಂಸ್ಥೆಗಳನ್ನು ಸಂಪರ್ಕ ಮಾಡಿ ಅಂತಿಮವಾಗಿ 2019ರ ಜ. 19ರಂದು ರವಿ ಪೂಜಾರಿಯನ್ನು ಜೈಲಿಗೆ ಕಳುಹಿಸಲು ಯಶಸ್ವಿಯಾದೆವು ಎಂದು ಪಾಂಡೆ ವಿವರಿಸಿದ್ದಾರೆ.

    ಸೆನೆಗಲ್ ಅಚ್ಚುಮೆಚ್ಚು: ಬುರ್ಕಿನಾ ಫಾಸೋ ಮತ್ತು ಸೆನೆಗಲ್ ರವಿ ಪೂಜಾರಿಗೆ ನೆಲೆಯೂರಲು ಪೂರಕವಾಗಿತ್ತು. ಅಲ್ಲಿನ ಜನ 2006ರಲ್ಲಿ ಪ್ರಸಾರವಾಗುತ್ತಿದ್ದ ಹಿಂದಿ ‘ವೈದೇಹಿ’ ಧಾರಾವಾಹಿ ಪಾತ್ರಗಳ ಬಗ್ಗೆ ಮಾತನಾಡುತ್ತಾರೆ. ಬಾಲಿವುಡ್ ನಟ-ನಟಿಯರು ಎಂದರೆ ಅಚ್ಚುಮೆಚ್ಚು. ಇದನ್ನೇ ರವಿ ಪೂಜಾರಿ ಬಂಡವಾಳ ಮಾಡಿಕೊಂಡು ಸಮಾಜಸೇವಕನಾಗಿ ಸ್ಥಳೀಯರ ಮನಗೆದ್ದಿದ್ದ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts