More

    ಶಿಕ್ಷಕರ ಸಮಸ್ಯೆಗಳ ಅರ್ಥ ಮಾಡಿಕೊಂಡಿರುವೆ: ಎಂಎಲ್​ಸಿ ಪ್ರಕಾಶ ಹುಕ್ಕೇರಿ ಹೇಳಿಕೆ

    ಸಿಂದಗಿ: ನನಗೆ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರ ಜತೆ ಒಳ್ಳೆಯ ಸಂಬಂಧವಿದೆ. ರಾಜ್ಯದ ಶಿಕ್ಷಕರ ಜ್ವಲಂತ ಸಮಸ್ಯೆಗಳನ್ನು ಕ್ಷೇತ್ರದ ಹಿರಿಯರಾದ ಬಸವರಾಜ ಹೊರಟ್ಟಿ ಅವರೊಂದಿಗೆ ಒಡಗೂಡಿ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸುವುದಾಗಿ ವಿಧಾನ ಪರಿಷತ್ ನೂತನ ಸದಸ್ಯ ಹುಕ್ಕೇರಿ ಭರವಸೆ ನೀಡಿದರು.

    ಪಟ್ಟಣದ ತಾಲೂಕು ಶಿಕ್ಷಕ ಪ್ರಸಾರ ಮಂಡಳಿಯಿಂದ ಸೋಮವಾರ ಪ್ರಕಾಶ ಹುಕ್ಕೇರಿ ಅವರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

    ಎಂ.ಪಿ, ಎಂಎಲ್‌ಎ ಹಾಗೂ ಎಂಎಲ್ಸಿ ಆಗಿರುವೆ. ಶಿಕ್ಷಕರ ಕ್ಷೇತ್ರದ ಸಮಸ್ಯೆಗಳ ಸಂಪೂರ್ಣ ಅರಿವು ನನಗಿದೆ. ಪೆನ್ಷನ್, 1995ರ ನಂತರದ ಶಿಕ್ಷಣ ಸಂಸ್ಥೆಗಳನ್ನು ಅನುದಾನಕ್ಕೊಳಪಡಿಸುವ ಬಗ್ಗೆ ಚರ್ಚಿಸಲಾಗುವುದು. ನಾನು ಗೆಲ್ಲುವವರೆಗೂ ಪಕ್ಷದ ಅಭ್ಯರ್ಥಿ, ಗೆದ್ದ ನಂತರ ಪಕ್ಷಾತೀತವಾಗಿ ದಕ್ಕಿದ ಅಧಿಕಾರಕ್ಕೆ ಅರ್ಥ ಕಲ್ಪಿಸುವಲ್ಲಿ ದಕ್ಷ ಕರ್ತವ್ಯ ನಿಭಾಯಿಸುವೆ. ಶಿಕ್ಷಕರ ಸಮಸ್ಯೆಗಳ ತುರ್ತು ಪರಿಹಾರಕ್ಕೆ ನಾಲ್ಕು ಜನ ಆಪ್ತ ಸಹಾಯಕರನ್ನು ನೇಮಿಸಿಕೊಂಡಿರುವೆ. ಶಿಕ್ಷಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವಲ್ಲಿ ನಿರತನಾಗಿರುವೆ ಎಂದರು.

    ಸಂಸ್ಥೆ ಚೇರ್ಮನ್ ಅಶೋಕ ಮನಗೂಳಿ ಮಾತನಾಡಿ, ಸರಳ, ಆದರ್ಶದ ರಾಜಕಾರಣಿ ಹುಕ್ಕೇರಿ ಅವರ ರಾಜನೀತಿಗಳು ಯುವ ರಾಜಕಾರಣಿಗಳಿಗೆ ಪೂರಕವಾಗಿವೆ. ಮತಕ್ಷೇತ್ರದ ಪ್ರತಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರ ಹಲವಾರು ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸುವಲ್ಲಿ ಮುಂದಾಗಬೇಕು ಎಂದು ಮನವಿ ಮಾಡಿದರು.
    ಶಿಕ್ಷಣ ಸಂಘ, ಸಂಸ್ಥೆ ಮತ್ತು ಸಂಘಟನೆಗಳ ಪದಾಧಿಕಾರಿಗಳು ಹುಕ್ಕೇರಿ ಅವರನ್ನು ಸನ್ಮಾನಿಸಿದರು. ವೇದಿಕೆಯಲ್ಲಿ ಎಲ್ಲ ಶಿಕ್ಷಕರ ಪರವಾಗಿ ಶಿಕ್ಷಕ ರವಿ ಬಿರಾದಾರ ಅವರನ್ನು ಸನ್ಮಾನಿಸಿದರು.

    ಶಿವಪ್ಪಗೌಡ ಬಿರಾದಾರ, ಅಶೋಕ ವಾರದ, ವಿಶ್ವನಾಥ ಬಿರಾದಾರ, ಶಂಕರಗೌಡ ಬಿರಾದಾರ, ಮಲ್ಲಣ್ಣ ಸಾಲಿ, ವಿಶ್ವನಾಥಗೌಡ ಪಾಟೀಲ, ಶಿರುಗೌಡ ದೇವರಮನಿ, ಭೀಮಾಶಂಕರ ನೆಲ್ಲಗಿ, ಯೋಗೆಪ್ಪಗೌಡ ಪಾಟೀಲ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts