More

    ದೇಶದ ಸಂಸ್ಕೃತಿ ಅರಿತುಕೊಳ್ಳಿ

    ಗೋಣಿಕೊಪ್ಪ: ಭಾರತದ ಶ್ರೀಮಂತ ಇತಿಹಾಸವುಳ್ಳ ಸಂಸ್ಕೃತಿಯನ್ನು ಯುವಜನಾಂಗ ವಿದ್ಯಾರ್ಥಿ ದೆಸೆಯಲ್ಲಿ ಅರಿತುಕೊಳ್ಳಬೇಕು. ಆ ಮೂಲಕ ನಮ್ಮ ಸಂಸ್ಕೃತಿ ಅಚ್ಚಳಿಯದೆ ಉಳಿಸುವ ಜವಾಬ್ದಾರಿ ಯುವ ಸಮುದಾಯದ ಮೇಲಿದೆ ಎಂದು ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕರೆ ನೀಡಿದರು.

    ಗೋಣಿಕೊಪ್ಪಲು ಕಾಲ್ಸ್ ವಿದ್ಯಾಸಂಸ್ಥೆಯಲ್ಲಿ ಭಾನುವಾರ ಆಯೋಜಿಸಿದ್ದ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ದೇಶದ ಪರಂಪರೆಯನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ವಿದ್ಯಾರ್ಥಿ ಜೀವನವದಲ್ಲಿ ಕೇವಲ ಶಿಕ್ಷಣವಲ್ಲದೆ, ಸಾಮಾಜಿಕ ಹಾಗೂ ಇತರ ಸಮಾಜಮುಖಿ ಕಾರ್ಯಗಳಲ್ಲೂ ತೊಡಗಿಸಿಕೊಳ್ಳಬೇಕು. ವಿದ್ಯಾರ್ಥಿ ದೆಸೆಯಲ್ಲಿ ಗಳಿಸಿದ ವಿದ್ವತ್ತನ್ನು ಮುಂದಿನ ದಿನಗಳಲ್ಲಿ ಸಮಾಜಕ್ಕೆ ಹಾಗೂ ಮುಂದಿನ ಪೀಳಿಗೆಗೆ ತಿಳಿಸುವ ಬಹುದೊಡ್ಡ ಜವಾಬ್ದಾರಿ ಯುವ ಜನಾಂಗದ ಮೇಲಿದೆ. ಪಾಲಕರು ನೀಡಿರುವ ಸ್ವಾತಂತ್ರೃವನ್ನು ನಿಮ್ಮ ಇಚ್ಚೆಯ ಅನುಗುಣವಾಗಿ ಸರಿಯಾದ ರೀತಿಯಲ್ಲಿ ಪಾಲಿಸುವ ಮೂಲಕ ಹೆಚ್ಚಿನ ಗೌರವ ನೀಡುವಂತಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

    ಶಾಲೆಯ ಅಧ್ಯಕ್ಷ ದತ್ತ ಕರುಂಬಯ್ಯ, ಮ್ಯಾನೇಜಿಂಗ್ ಟ್ರಸ್ಟಿ ಅಶ್ವಿನಿ ನಾಚಪ್ಪ, ಪ್ರಾಂಶುಪಾಲೆ ಬಾಚಟ್ಟಿರ ಗೌರಮ್ಮ ನಂಜಪ್ಪ, ಮಾನ್ಯಾ ಅಕ್ಕಮ್ಮ, ಶ್ರೀಶ್ ತಿಮ್ಮಯ್ಯ, ಆರವ್ ಪೊನ್ನಪ್ಪ, ಅಂಜನಿ ಅಪ್ಪಯ್ಯ, ಸೌರಪ್ ಪೊನ್ನಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts