More

    ಇಂದಿನಿಂದ ಹಲವು ರೈಲು ಸಂಚಾರ ವ್ಯತ್ಯಯ: ಕೆಳಸೇತುವೆ ಕಾಮಗಾರಿ ಹಿನ್ನೆಲೆ; ನೈಋತ್ಯ ರೈಲ್ವೆಯಿಂದ ಮಾಹಿತಿ

    ನಗರದ ಮಹಾವೀರ ವೃತ್ತದಿಂದ ಪೇಟೆ ಬೀದಿವರೆಗೆ ರೈಲ್ವೆಯ ಲೆವಲ್ ಕ್ರಾಸ್ ಗೇಟ್-73ರ ಕೆಳ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದರಿಂದ ಜು.17ರಿಂದ 31ರವರೆಗೆ ಹಲವು ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ.

    ಈ ಸಂಬಂಧ ಪ್ರಕಟಣೆ ಹೊರಡಿಸಿರುವ ಹುಬ್ಬಳ್ಳಿಯ ನೈಋತ್ಯ ರೈಲ್ವೆ, ಕಾಮಗಾರಿ ಸಂದರ್ಭದಲ್ಲಿ ರೈಲುಗಳ ಸಂಚಾರ ಸಾಧ್ಯವಿಲ್ಲದ ಕಾರಣ ರದ್ದು, ಭಾಗಶಃ ರದ್ದು, ಮಾರ್ಗ ಅಥವಾ ಸಮಯದ ಬದಲಾವಣೆ ಹಾಗೂ ಮಾರ್ಗಮಧ್ಯೆ ನಿಯಂತ್ರಣಕ್ಕೆ ಕ್ರಮ ವಹಿಸಲಾಗಿದೆ. ಪ್ರಮುಖವಾಗಿ, ಜು. 22ರಂದು ಮೈಸೂರಿನಿಂದ ರಾತ್ರಿ ವೇಳೆ ಪ್ರಾರಂಭಿಸುವ 06269 ಸಂಖ್ಯೆಯ ಮೈಸೂರು-ಸರ್ ಎಂ.ವಿಶ್ವೇಶ್ವರಯ್ಯ ಟರ್ವಿುನಲ್ ಬೆಂಗಳೂರು ಎಕ್ಸ್​ಪ್ರೆಸ್ ರೈಲು ಸಂಚಾರ ರದ್ದುಗೊಳಿಸಲಾಗಿದೆ.

    06255 ಸಂಖ್ಯೆಯ ಕೆಎಸ್​ಆರ್ ಬೆಂಗಳೂರು-ಮೈಸೂರು ಮೆಮು ರೈಲನ್ನು ಜು.17 ಮತ್ತು 22ರಂದು ಮದ್ದೂರು-ಮೈಸೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ. ಈ ರೈಲು ಮದ್ದೂರಿನಲ್ಲಿ ಪ್ರಯಾಣ ಕೊನೆಗೊಳಿಸಲಿದೆ. 06560 ಸಂಖ್ಯೆಯ ಮೈಸೂರು-ಕೆಎಸ್​ಆರ್ ಬೆಂಗಳೂರು ಮೆಮು ರೈಲನ್ನು ಜು.17 ಮತ್ತು 22ರಂದು ಮೈಸೂರು-ಮದ್ದೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ. ಈ ರೈಲು ಮದ್ದೂರು ನಿಲ್ದಾಣದಿಂದ ಹೊರಡಲಿದೆ.

    06267 ಸಂಖ್ಯೆಯ ಅರಸೀಕೆರೆ-ಮೈಸೂರು ಎಕ್ಸ್​ಪ್ರೆಸ್ ವಿಶೇಷ ರೈಲನ್ನು ಜು.22ರಂದು ಹಾಸನ-ಮೈಸೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ. ಈ ರೈಲು ಹಾಸನದಲ್ಲಿ ಪ್ರಯಾಣ ಕೊನೆಗೊಳಿಸಲಿದೆ. 06559 ಸಂಖ್ಯೆಯ ಕೆಎಸ್​ಆರ್ ಬೆಂಗಳೂರು-ಮೈಸೂರು ಮೆಮು ರೈಲನ್ನು ಜು.26 ಮತ್ತು 31ರಂದು ಮದ್ದೂರು-ಮೈಸೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ. ಈ ರೈಲು ಮದ್ದೂರು ನಿಲ್ದಾಣದಲ್ಲಿ ಪ್ರಯಾಣ ಕೊನೆಗೊಳಿಸಲಿದೆ. 06256 ಸಂಖ್ಯೆಯ ಮೈಸೂರು-ಕೆಎಸ್​ಆರ್ ಬೆಂಗಳೂರು ಮೆಮು ಜು.26 ಮತ್ತು 31ರಂದು ಮೈಸೂರು- ಮದ್ದೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ. ಈ ರೈಲು ಮದ್ದೂರು ನಿಲ್ದಾಣದಿಂದ ಹೊರಡಲಿದೆ.

    ಯಾವ ರೈಲಿನ ಮಾರ್ಗ ಬದಲಾವಣೆ?: ಜು.22 ಮತ್ತು 30ರಂದು ಸರ್ ಎಂ.ವಿಶ್ವೇಶ್ವರಯ್ಯ ಟರ್ವಿುನಲ್ ಬೆಂಗಳೂರಿನಿಂದ ಪ್ರಾರಂಭವಾಗುವ 16585 ಸಂಖ್ಯೆಯ ರೈಲು ಸರ್ ಎಂ.ವಿಶ್ವೇಶ್ವರಯ್ಯ ಟರ್ವಿುನಲ್ ಬೆಂಗಳೂರು-ಮಂಗಳೂರು ಸೆಂಟ್ರಲ್ ಎಕ್ಸ್​ಪ್ರೆಸ್ ರೈಲು ಸರ್ ಎಂ.ವಿಶ್ವೇಶ್ವರಯ್ಯ ಟರ್ವಿುನಲ್ ಬೆಂಗಳೂರು, ಬಾನಸವಾಡಿ, ಹೆಬ್ಬಾಳ, ಯಶವಂತಪುರ ಎ ಕ್ಯಾಬಿನ್, ಚಿಕ್ಕಬಾಣಾವರ, ನೆಲಮಂಗಲ, ಹಾಸನ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಹೀಗಾಗಿ ಬೆಂಗಳೂರು ಕಂಟೋನ್​ವೆುಂಟ್, ಕೆಎಸ್​ಆರ್ ಬೆಂಗಳೂರು, ಕೆಂಗೇರಿ, ರಾಮನಗರ, ಚನ್ನಪಟ್ಟಣ, ಮಂಡ್ಯ, ಮೈಸೂರು, ಕೃಷ್ಣರಾಜನಗರ ಮತ್ತು ಹೊಳೆನರಸೀಪುರ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.

    ಜೋಕೊವಿಕ್​ ಪ್ರಾಬಲ್ಯಕ್ಕೆ ತಡೆ; ಅಲ್ಕರಾಜ್​ಗೆ ಚೊಚ್ಚಲ ವಿಂಬಲ್ಡನ್​ ಕಿರೀಟ

    VIRAL VIDEO| ಈ ನಂದಿ ವಿಗ್ರಹ ನಿಜಕ್ಕೂ ನೀರು ಕುಡಿಯುತ್ತಿದೆಯಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts