More

    ಕುವೈತ್ ಕನ್ನಡ ಕೂಟದ ಅಧ್ಯಕ್ಷರಾಗಿ ಅನಂತ ಮಂಗಲಗಿ ಆಯ್ಕೆ

    ಬೆಂಗಳೂರು: ಜನವರಿ 26, 2024ರಂದು ಕುವೈತ್‌ನ ICSK ಶಾಲೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ 2024ರ ಹೊಸ ಕಾರ್ಯಕಾರಿ ಸಮಿತಿಯ ಆಯ್ಕೆಗೆ ಚುನಾವಣೆ ನಡೆಯಿತು ಮತ್ತು ಸರ್ವ ಸದಸ್ಯರ ಸಮ್ಮತಿಯೊಂದಿಗೆ ಕಾರ್ಯಕಾರಿ ಸಮಿತಿಯನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

    ಇದನ್ನೂ ಓದಿ: ಸಮಂತಾ ರುತ್ ಪ್ರಭು ‘ಟೇಕ್ 20’ ಪಾಡ್‌ಕಾಸ್ಟ್; ಮೊದಲ ಸಂಚಿಕೆಯಲ್ಲಿ ಚರ್ಚೆಯಾದ ವೈಯಕ್ತಿಕ ವಿಚಾರಗಳು

    ಕುವೈತ್ ಕನ್ನಡ ಕೂಟದ ಇಸವಿ 2024ಕ್ಕೆ 40 ವರ್ಷದ ಹರ್ಷದ ಸಂಭ್ರಮ. ಈ ಮೈಲಿಗಲ್ಲಿಗಲ್ಲಿನ ಯಶಸ್ಸು ಅದರ ಗೌರವಾನ್ವಿತ ಸದಸ್ಯರ ಬದ್ಧತೆ, ದೃಢತೆ ಮತ್ತು ಒಗ್ಗಟ್ಟಿಗೆ ಪುರಾವೆಯಾಗಿದೆ. ಈ ನೂತನ ನಾಯಕತ್ವದ ಚುಕ್ಕಾಣಿ ಹಿಡಿದು ಕುವೈತ್ ಕನ್ನಡ ಕೂಟದ ಅಧ್ಯಕ್ಷರಾಗಿ ಆಯ್ಕೆಯಾಗಿರುವವರು ಶ್ರೀಯುತ ಅನಂತ ಮಂಗಲಗಿ.

    ಮಂಗಲಗಿ ಅವರು ಕಳೆದ ಒಂದೂವರೆ ದಶಕದಿಂದ ಕೂಟದಲ್ಲಿ ಸಕ್ರಿಯರಾಗಿದ್ದು ಸಮುದಾಯದ ಸೇವೆ ಮತ್ತು ಕನ್ನಡ ಭಾಷೆ, ಸಂಸ್ಕೃತಿಯ ಪ್ರಚಾರ ಮಾಡುವಲ್ಲಿ ಪ್ರತಿಬದ್ಧರಾಗಿದ್ದಾರೆ. ಇವರು ಹಲವಾರು ಉಪಸಮಿತಿಗಳಲ್ಲಿ ನಿರ್ವಸಿಹಿದ ನಾಯಕತ್ವ ಮತ್ತು ಅಗಾಧವಾದ ಅನುಭವದಿಂದ ಕೂಟವನ್ನು ಮತ್ತಷ್ಟು ಬಲಪಡಿಸುವದರಲ್ಲಿ ಸಹಕಾರಿಯಾಗಲಿದೆ. ಉಪಾಧ್ಯಕ್ಷರ ಪಾತ್ರವನ್ನು ಶ್ರೀ ಪ್ರವೀಣ್ ಕುಮಾರ್ ಶೆಟ್ಟಿ ಶಾನ್ಕಟ್ ಅವರು ವಹಿಸಲಿದ್ದಾರೆ. ಕನ್ನಡಕ್ಕಾಗಿ ಅವರ ಸಮರ್ಪಣೆ ಕೂಟದ ವಿಶ್ವಾಸ ಮತ್ತು ಬೆಂಬಲವನ್ನು ಗಳಿಸಿದೆ. ಏಕತೆ ಮತ್ತು ಸೌಹಾರ್ದತೆಯನ್ನು ಬೆಳೆಸುವ ಅವರ ಉತ್ಸಾಹವು ಕೂಟದ ಚಟುವಟಿಕೆಗಳನ್ನು ಉತ್ತೇಜಿಸುವ ಭರವಸೆ ನೀಡುತ್ತದೆ.

    ಇದನ್ನೂ ಓದಿ: ಸ್ಟಾರ್​​ ನಟಿಯರ ಮಧ್ಯೆ ನಿಂತಿರುವ ಈತ ಯಾರು ಗೊತ್ತೇ? ಫೋಟೋ ನೋಡಿದ್ರೆ ಖಂಡಿತ ತಿಳಿಯಲ್ಲ, ಸುದ್ದಿ ಓದಿ!

    ಕಾರ್ಯದರ್ಶಿ ಸ್ಥಾನವನ್ನು ಶ್ರೀ ಚೇತನ್ ಚೆಲುವರಾಜ್ ಅವರಿಗೆ ನೀಡಲಾಗಿದೆ, ಅವರನ್ನು ಸಾಂಸ್ಥಿಕ ಕೌಶಲ್ಯ, ಪರಿಣಾಮಕಾರಿ ಸಂವಹನ ಮತ್ತು ಬದ್ಧತೆಗಾಗಿ ಗುರುತಿಸಲಾಗಿದೆ. ಕೂಟದ ಕಾರ್ಯಚಟುವಟಿಕೆಗಳು ಮತ್ತು ಕಾರ್ಯಕ್ರಮಗಳು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುವಲ್ಲಿ ಶ್ರೀ ಚೆಲುವರಾಜ್ ಅವರ ಪಾತ್ರ ನಿರ್ಣಾಯಕವಾಗಲಿದೆ. ಕೂಟದ ಆರ್ಥಿಕ ಉಸ್ತುವಾರಿಯ ಜವಾಬ್ದಾರಿಯನ್ನು ನಿಭಾಹಿಸುವ ಖಜಾಂಚಿ ಸ್ಥಾನವನ್ನು ಶ್ರೀ ಶರಣಗೌಡ ಪಾಟೀಲ್ ಅವರಿಗೆ ವಹಿಸಿದರು. ಶ್ರೀ ಪಾಟೀಲ್ ಅವರ ಆರ್ಥಿಕ ಕುಶಾಗ್ರಮತಿಯು ಕೂಟದ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸುವಲ್ಲಿ ಮತ್ತು ಕೂಟದ ಆರ್ಥಿಕ ಸ್ಥಿರತೆ ಮತ್ತು ಸಮಗ್ರತೆಯನ್ನು ಖಾತ್ರಿಪಡಿಸುವುದರಲ್ಲಿ ಸಹಕಾರಿಯಾಗಲಿದೆ.

    ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪ್ರತಿಯೊಬ್ಬ ಪದಾಧಿಕಾರಿಗಳು ಪಡೆದ ಸರ್ವಾನುಮತದ ಬೆಂಬಲ ಈ ಚುನಾವಣೆಯನ್ನು ವಿಶಿಷ್ಟವಾಗಿಸಿದೆ. ಸದಸ್ಯರು ಪ್ರದರ್ಶಿಸುವ ಏಕತೆಯು ಕುವೈತ್ ಕನ್ನಡ ಕೂಟದ ದೂರದೃಷ್ಟಿಯನ್ನು ಪ್ರತಿಬಿಂಬಿಸುತ್ತದೆ ಮತ್ತು ಪ್ರತಿಯೊಬ್ಬರ ಸಹಯೋಗ ಮತ್ತು ಪ್ರಗತಿಗೆ ಬಲವಾದ ಅಡಿಪಾಯವನ್ನು ಪ್ರತಿನಿಧಿಸುತ್ತದೆ.

    ಸ್ಟಾರ್​​ ನಟಿಯರ ಮಧ್ಯೆ ನಿಂತಿರುವ ಈತ ಯಾರು ಗೊತ್ತೇ? ಫೋಟೋ ನೋಡಿದ್ರೆ ಖಂಡಿತ ತಿಳಿಯಲ್ಲ, ಸುದ್ದಿ ಓದಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts