More

    ಪ್ರಜ್ಞಾಹೀನ ಬಾಲಕನ ಶಸ್ತ್ರಚಿಕಿತ್ಸೆಗೆ ಬೇಕಿದೆ ನೆರವು

    ಅಥಣಿ: ಕೂಲಿ ಮಾಡಿ ಬದುಕು ಕಟ್ಟಿಕೊಂಡಿದ್ದ ವಿಧವೆಯೊಬ್ಬರು ರಸ್ತೆ ಅಪಘಾತದಲ್ಲಿ ಗಾಯೊಗೊಂಡು ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ತನ್ನ ಮಗನನ್ನು ಉಳಿಸಿಕೊಳ್ಳಲು ನೆರವಿಗಾಗಿ ಅಂಗಲಾಚುತ್ತಿದ್ದಾರೆ.

    ಘಟನೆ ಹಿನ್ನೆಲೆ: ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದ ಬಾಲಕ ವಿಶಾಲ ಹನುಮಂತ ಬಿರಾದಾರ (14) ಕಳೆದ ಡಿ. 13ರಂದು ರಸ್ತೆ ದಾಟುವಾಗ ಕಾರು ಹಾಯ್ದು ತೀವ್ರ ಗಾಯಗೊಂಡಿದ್ದಾನೆ. ಈತನ ತಂದೆ ನಿಧನರಾಗಿದ್ದು, ತಾಯಿ ಲಕ್ಕವ್ವನ ಆಶ್ರಯದಲ್ಲಿ ಬೆಳೆಯುತ್ತಿದ್ದಾನೆ.

    ರಾಯಬಾಗ ತಾಲೂಕಿನ ಹಾರೂಗೇರಿಯ ಬೇಥಲ್ ಫೌಂಡೇಷನ್ ವತಿಯಿಂದ ನಡೆಯುತ್ತಿರುವ ಅನಾಥಶ್ರಮ ಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದ. 2 ತಿಂಗಳ ಹಿಂದೆ ಇದೇ ಗ್ರಾಮದಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಅಪಘಾತಕ್ಕೀಡಾಗಿ ಪ್ರಜ್ಞೆ ಕಳೆದುಕೊಂಡಿದ್ದಾನೆ. ತಲೆಗೆ ತೀವ್ರ ಗಾಯವಾಗಿರುವುದರಿಂದ ಮಹಾರಾಷ್ಟ್ರದ ಸಾಂಗಲಿಯ ಭಾರತಿ ವಿದ್ಯಾಪೀಠ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಿದುಳಿನ ಒಂದು ಭಾಗವನ್ನು ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿ ಹೊಟ್ಟೆಯ ಭಾಗದಲ್ಲಿ ಶೇಖರಿಸಿಟ್ಟು ಚಿಕಿತ್ಸೆ ನೀಡುತ್ತಿದ್ದಾರೆ. ಫೆ. 17ರಂದು ಹೊಟ್ಟೆಯ ಭಾಗದಲ್ಲಿಟ್ಟಿರುವ ಮಿದುಳನ್ನು ಮತ್ತೆ ತಲೆಯ ಭಾಗದಲ್ಲಿ ಕಸಿ ಮಾಡಿ ಚಿಕಿತ್ಸೆ ನೀಡುವುದಾಗಿ ವೈದ್ಯರು ಹೇಳಿದ್ದಾರೆ. ಇದಕ್ಕೆ ಸುಮಾರು 4 ಲಕ್ಷ ರೂ. ವೆಚ್ಚವಾಗಲಿದ್ದು, ಚಿಕಿತ್ಸೆಗೆ ಹಣ ಹೊಂದಿಸಲು ಬಾಲಕನ ತಾಯಿ ಲಕ್ಕವ್ವ ಸಂಕಟ ಪಡುತ್ತಿದ್ದಾಳೆ.

    ಬ್ಯಾಂಕ್ ಖಾತೆ ನಂ.: ಬಾಲಕನ ಚಿಕಿತ್ಸೆಗೆ ಸರ್ಕಾರ, ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಸಹಾಯ ಹಸ್ತ ಚಾಚುವುದು ಅವಶ್ಯವಿದೆ. ಚಿಕಿತ್ಸೆಗೆ ನೆರವು ನೀಡಲು ಬಾಲಕನ ತಾಯಿ ಲಕ್ಕವ್ವ ವಿನಂತಿಸಿದ್ದಾಳೆ. ನೆರವು ನೀಡ ಬಯಸುವವರು ತಾಯಿ ಮತ್ತು ಬಾಲಕನ ಜಂಟಿ ಹೆಸರಿನಲ್ಲಿರುವ ಕರ್ನಾಟಕ ಬ್ಯಾಂಕ್ ಖಾತೆ ನಂ. 2732500100064501ಗೆ ಹಣ ಸಂದಾಯ ಮಾಡಬಹುದು. ಮೊಬೈಲ್ ನಂ. 9449131699 ಮೂಲಕ ಅವರ ಕುಟುಂಬವನ್ನು ಸಂಪರ್ಕಿಸಬಹುದಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts