More

    IPL 2024: ಡೆಲ್ಲಿ ನೀರಸ ಬೌಲಿಂಗ್​ಗೆ ಕೋಚ್​​ ಪಾಂಟಿಂಗ್​ ಗರಂ

    ವಿಶಾಖಪಟ್ಟಣ: ಕೆಕೆಆರ್​ ವಿರುದ್ಧದ ಪಂದ್ಯದಲ್ಲಿ ಭಾರಿ ರನ್​ ಬಿಟ್ಟುಕೊಟ್ಟು 106 ರನ್​ಗಳಿಂದ ಶರಣಾದ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಮುಖ್ಯ ಕೋಚ್​ ರಿಕಿ ಪಾಂಟಿಂಗ್​, ತನ್ನ ತಂಡದ ಬೌಲಿಂಗ್​ ನಿರ್ವಹಣೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    “ಏನಾಯಿತು ಎಂದು ಹೇಳುವುದೇ ಈಗ ಕಠಿಣವೆನಿಸುತ್ತಿದೆ. ಪಂದ್ಯದ ಮೊದಲ ಇನಿಂಗ್ಸ್​ ನಮಗೆ ಸಾಕಷ್ಟು ಮುಜುಗರ ತಂದಿತು. ಅಷ್ಟೊಂದು ರನ್​ ಬಿಟ್ಟುಕೊಟ್ಟಿದ್ದು ನಿರಾಶಾದಾಯಕ. 17 ವೈಡ್​ ಎಸೆದೆವು. ನಮ್ಮ 20 ಓವರ್​ ಮುಗಿಸಲು 2 ಗಂಟೆ ಬೇಕಾಯಿತು. ಇದರಿಂದಾಗಿ ಓವರ್​ರೇಟ್​ನಲ್ಲಿ 2 ಓವರ್​ ಹಿಂದುಳಿದೆವು. ಇದರಿಂದಾಗಿ ಕೊನೇ 2 ಓವರ್​ ವೇಳೆ ಸರ್ಕಲ್​ ಹೊರಗೆ 4 ಫೀಲ್ಡರ್​ಗಳಷ್ಟೇ ಇರಬೇಕಾಯಿತು’ ಎಂದು ಪಾಂಟಿಂಗ್​ ಹೇಳಿದ್ದಾರೆ.

    ಕೆಕೆಆರ್​ ತಂಡದ 273 ರನ್​ ಸವಾಲಿಗೆ ಪ್ರತಿಯಾಗಿ ಡೆಲ್ಲಿ 17.2 ಓವರ್​ಗಳಲ್ಲಿ 166 ರನ್​ಗಳಿಗೆ ಸರ್ವಪತನ ಕಂಡಿತು. ಮಿಚೆಲ್​ ಸ್ಟಾರ್ಕ್​ (25ಕ್ಕೆ 2), ವೈಭವ್​ ಅರೋರ (27ಕ್ಕೆ 3) ಬಿಗಿ ದಾಳಿ ಎದುರು ಡೆಲ್ಲಿ 33 ರನ್​ಗಳಿಗೆ 4 ವಿಕೆಟ್​ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತು. ಬಳಿಕ ನಾಯಕ ರಿಷಭ್​ ಪಂತ್​ (55) ಮತ್ತು ಟ್ರಿಸ್ಟಾನ್​ ಸ್ಟಬ್ಸ್​ (54) ಬಿರುಸಿನ ಅರ್ಧಶತಕ ಬಾರಿಸಿದರೂ, ಸೋಲಿನ ಅಂತರ ತಗ್ಗಿಸಲಷ್ಟೇ ಶಕ್ತರಾದರು. ಭಾರಿ ಸೋಲಿನಿಂದ ಡೆಲ್ಲಿ ರನ್​ರೇಟ್​ಗೆ ಭಾರಿ ಹೊಡೆತ ಬಿದ್ದಿದ್ದು, ಅಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಕುಸಿದಿದೆ.

    *ಕ್ರಿಕೆಟ್​ನಲ್ಲಿ ಬ್ಯಾಟಿಂಗ್​ ಪ್ರಮುಖವಾದುದು. ಹೀಗಾಗಿ ನಾನು ಬ್ಯಾಟಿಂಗ್​ನಲ್ಲಿ ಹೆಚ್ಚಿನ ಕೊಡುಗೆ ನೀಡಲು ಬಯಸಿರುವೆ. ಜತೆಗೆ ಬೌಲಿಂಗ್​ಅನ್ನೂ ಆನಂದಿಸುತ್ತಿರುವೆ. ತಂಡಕ್ಕಾಗಿ ಆಡುವುದಷ್ಟೇ ನನ್ನ ಕೆಲಸ.
    |ಸುನೀಲ್​ ನಾರಾಯಣ್​, ಪಂದ್ಯಶ್ರೇಷ್ಠ

    2: ಕೆಕೆಆರ್​ ತಂಡ ಐಪಿಎಲ್​ನಲ್ಲಿ 2 ಬಾರಿ 100ಕ್ಕೂ ಅಧಿಕ ರನ್​ಗಳಿಂದ ಗೆದ್ದ ಮುಂಬೈ ಸಾಧನೆ ಸರಿಗಟ್ಟಿತು. ಆರ್​ಸಿಬಿ 4 ಬಾರಿ ಗೆದ್ದಿರುವುದು ದಾಖಲೆಯಾಗಿದೆ.

    *21: ಕೆಕೆಆರ್​ ತಂಡ ಐಪಿಎಲ್​ನಲ್ಲಿ 21ನೇ ಬಾರಿ 200 ಪ್ಲಸ್​ ಮೊತ್ತ ಪೇರಿಸಿತು. ಸಿಎಸ್​ಕೆ (29), ಆರ್​ಸಿಬಿ (24), ಮುಂಬೈ (23) ಮೊದಲ 3 ಸ್ಥಾನದಲ್ಲಿವೆ.

    IPL 2024: ಶಶಾಂಕ್​ ಶೈನಿಂಗ್​; ಗುಜರಾತ್​ ಎದುರು ಪಂಜಾಬ್​ಗೆ ರೋಚಕ ಜಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts