More

    ಹೊಟ್ಟೆನೋವು ತಾಳಲಾರದೆ ಮಹಿಳೆ ನೇಣಿಗೆ ಶರಣು

    ಕಿಕ್ಕೇರಿ: ಸಮೀಪದ ಹೆಗ್ಗಡಹಳ್ಳಿ ಗ್ರಾಮದ ಮಹಿಳೆ ಹೊಟ್ಟೆನೋವು ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಹೆಗ್ಗಡಹಳ್ಳಿ ಗ್ರಾಮದ ಪ್ರಸನ್ನ ಅವರ ಪತ್ನಿ ಅಶ್ವಿನಿ(25) ನೇಣಿಗೆ ಶರಣಾದವರು. ಇವರಿಗೆ ಪತಿ, ಪುತ್ರ ಇದ್ದಾರೆ. ಒಂದು ವರ್ಷದಿಂದ ಆಗಿಂದಾಗ್ಗೆ ಹೊಟ್ಟೆನೋವು ಬರುತ್ತಿತ್ತು. ಸಾಕಷ್ಟು ಕಡೆ ಚಿಕಿತ್ಸೆ ಪಡೆದರೂ ಪ್ರಯೋಜನವಾಗಿರಲಿಲ್ಲ. ಗುರುವಾರ ಸಂಜೆ ಮನೆಯಲ್ಲಿ ಫ್ಯಾನಿಗೆ ವೇಲು ಹಾಕಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಗೆ ಬಂದ ಪತಿ ನೋಡಲಾಗಿ ಪತ್ನಿ ನೇಣು ಬಿಗಿದುಕೊಂಡಿರುವುದು ಗೊತ್ತಾಗಿದೆ. ಕೂಡಲೇ ಆಕೆಯನ್ನು ಕೆಳಗಿಳಿಸಿ ಕೆ.ಆರ್.ಪೇಟೆ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

    ಮೃತರ ತಾಯಿ ಬೊಮ್ಮೇಗೌಡನ ಕೊಪ್ಪಲು ಗ್ರಾಮದ ಗೌರಮ್ಮ ಕಿಕ್ಕೇರಿ ಪೊಲೀಸರಿಗೆ ದೂರು ನೀಡಿದ್ದಾರೆ. ಕಿಕ್ಕೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಮೃತರ ದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ವಾರಸುದಾರರಿಗೆ ಹಸ್ತಾಂತರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts