More

    ವಿಶೇಷ ಅಲಂಕಾರದಲ್ಲಿ ವಿಠ್ಠಲ- ರುಕ್ಮಿಣಿ

    ಉಮದಿ (ಮಹಾರಾಷ್ಟ್ರ): ವೈಕುಂಠ ಹಾಗೂ ಮೋಕ್ಷದಾ ಏಕಾದಶಿ ನಿಮಿತ್ತ ವೈಷ್ಣವ ಭಕ್ತರಿಗೆ ಭೂ ವೈಕುಂಠವಾದ ಪಂಢರಪುರದ ಶ್ರೀ ವಿಠ್ಠಲ- ರುಕ್ಮಿಣಿ ದೇವಿ ವಿಶೇಷ ಪೋಷಾಕುಗಳಲ್ಲಿ ಅಲಂಕೃತಗೊಂಡು ಭಕ್ತರಿಗೆ ದರ್ಶನ ನೀಡಿದರು. ಶುಕ್ರವಾರ ಪಂಢರಿನಗರಕ್ಕೆ ಭಕ್ತ ವತ್ಸಲನಾದ ಶ್ರೀ ಪಾಂಡುರಂಗನ ದರ್ಶನಕ್ಕಾಗಿ ಸಾವಿರಾರು ಭಕ್ತರು ಆಗಮಿಸಿ, ದರ್ಶನ ಪಡೆದುಕೊಂಡರು. ರಾತ್ರಿಯಿಡೀ ಮಂದಿರದಲ್ಲಿ ಹರಿಭಜನೆ ಹಾಗೂ ನಾಮಸ್ಮರಣೆ ನಡೆಯಲಿದೆ.
    ವೈಕುಂಠ ಏಕಾದಶಿ ಸನಾತನ ಧರ್ಮಾನುಯಾಯಿಗಳು ಶ್ರದ್ಧಾ ಭಕ್ತಿಗಳಿಂದ ವಿಷ್ಣುವನ್ನು ಪೂಜಿಸುವ ಮಹತ್ವದ ದಿನ. ಚಾಂದ್ರಮಾನ ಪುಷ್ಯಮಾಸ ಶುಕ್ಲಪಕ್ಷದಂದು ಬರುವ ಈ ಏಕಾದಶಿ ಅತ್ಯಂತ ಶ್ರೇಷ್ಠ. ಈ ದಿನ ವೈಕುಂಠ (ವಿಷ್ಣುಲೋಕ, ಸ್ವರ್ಗದ) ಬಾಗಿಲು ತೆರೆದಿರುವ ದಿನ ಎಂಬ ಪ್ರತೀತಿ ಇರುವುದರಿಂದ ಅಂದು ವಿಷ್ಣು, ವೆಂಕಟೇಶ್ವರ ಹಾಗೂ ವಿಠ್ಠಲ (ಪಾಂಡುರಂಗ) ದೇವಾಲಯ ದರ್ಶನ ಅತ್ಯಂತ ಮಹತ್ವ ಪಡೆದುಕೊಂಡಿದೆ. ಈ ದಿನ ವಿಷ್ಣು ದೇವಾಲಯಗಳಲ್ಲಿ ದರ್ಶನ ಪಡೆದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts