More

    27 ಲಕ್ಷ ರೂ. ಕೊಟ್ಟು ಖರೀದಿಸುವಂಥದ್ದು ಏನಿದೆ ಈ ಟಗರಿನಲ್ಲಿ?!

    ಉಮದಿ (ಮಹಾರಾಷ್ಟ್ರ): ಒಂದು ಟಗರಿನ ಮಾರುಕಟ್ಟೆ ಬೆಲೆ ಹೆಚ್ಚೆಂದರೆ ಎಷ್ಟಿರಬಹುದು? 20 ಸಾವಿರ, 50 ಸಾವಿರ…? ನಮ್ಮ ಕಲ್ಪನೆ ನಿಲುಕುವುದು ಅಷ್ಟಕ್ಕೇ. ಆದರೆ ಮಹಾರಾಷ್ಟ್ರದ ಸಾಂಗೋಲಾದಲ್ಲಿನ ಚಾಂದೋಲಿ ವಸ್ತಿಯಲ್ಲಿರುವ ಈ ಟಗರಿಗೆ 27 ಲಕ್ಷ ರೂ.! ಅದಕ್ಕಿಂತಲೂ ಅಧಿಕ ಬೆಲೆ ಕೊಟ್ಟು ಖರೀದಿಸುವುದಕ್ಕೂ ಜನ ಸಿದ್ಧರಿದ್ದಾರಂತೆ!

    ಹಲವು ವರ್ಷಗಳಿಂದ ಕುರಿ ಹಾಗೂ ಮೇಕೆಗಳನ್ನು ಸಾಕುತ್ತಿರುವ ಬಾಬು ಮೆಟಕರಿ ದಂಪತಿ, ಆಕರ್ಷಕ ಮೈಕಟ್ಟು ಹೊಂದಿರುವ ಈ ಟಗರನ್ನು ಎರಡು ವರ್ಷಗಳಿಂದ ಬೆಳೆಸಿದ್ದಾರೆ. ಅದಕ್ಕೆ ಪ್ರೀತಿಯಿಂದ ‘ಸರ್ಚಾ’ ಎಂದು ಹೆಸರಿಟ್ಟಿದ್ದಾರೆ. ಇಷ್ಟು ದೊಡ್ಡ ಮೊತ್ತದ ಬೇಡಿಕೆ ಬಂದರೂ ಮಾರಾಟ ಮಾಡಲು ಈ ದಂಪತಿ ನಿರಾಕರಿಸಿದ್ದಾರೆ. ಇದನ್ನೂ ಓದಿ: ಅಭಿಮಾನಿಗೆ ಸಹಾಯಹಸ್ತ ಚಾಚಿದ ಟೆನಿಸ್​ ತಾರೆ ಬೌಚಾರ್ಡ್​!

    ಏಕಿಷ್ಟು ಬೆಲೆ?: ವಿಶೇಷ ಮೈಕಟ್ಟು ಹೊಂದಿರುವ ಈ ಟಗರಿನಿಂದ ಜನಿಸುವ ಕುರಿಗಳ ಮಾಂಸ ಬೇರೆ ಕುರಿಗಳಿಗೆ ಹೋಲಿಕೆ ಮಾಡಿದರೆ ಹೆಚ್ಚು ರುಚಿಕರವಾಗಿರುತ್ತದೆಯಂತೆ. ಸಂತಾನೋತ್ಪತ್ತಿಯ ಸಲುವಾಗಿ ಈ ಟಗರು ಬಳಕೆಯಾಗುವುದರಿಂದ ಸಹಜವಾಗಿಯೇ ಅದರ ಬೇಡಿಕೆ ಹೆಚ್ಚುತ್ತಿದೆ ಎನ್ನುತ್ತಾರೆ ಸೊಲ್ಲಾಪುರದ ಪಶುವೈದ್ಯಾಧಿಕಾರಿ ಡಾ. ಬಬನ ಕಾಂಬಳೆ.

    ‘‘ಹಲವು ವರ್ಷಗಳಿಂದ ಕುರಿ ಸಾಕಣೆ ಮಾಡುತ್ತಿದ್ದೇವೆ. ಎರಡು ವರ್ಷಗಳ ಹಿಂದೆ ಜನಿಸಿರುವ ಟಗರಿನಲ್ಲಿ ವಿಶೇಷ ಇರುವುದು ತಿಳಿದು ಕಾಳಜಿ ವಹಿಸಿ ಬೆಳೆಸಿದ್ದೇವೆ. ಈಗ ಮಾರುಕಟ್ಟೆಯಲ್ಲಿ ಅದಕ್ಕೆ ಬೇಡಿಕೆ ಬಂದಿರುವುದು ಸಂತಸ ತಂದಿದೆ’’ ಎನ್ನುತ್ತಾರೆ ಟಗರಿನ ಮಾಲೀಕ ಬಾಬು ಬಾಪು ಮೆಟಕರಿ. ‘‘ಮಾಲಪುರ ಜಾತಿಗೆ ಸೇರಿರುವ ಈ ಟಗರು ಗಿಣಿ ಮೂಗು ಹೊಂದಿರುವುದು ವಿಶೇಷ. ಇಂಥ ಟಗರಿನಲ್ಲಿ ರೋಗ ನಿರೋಧಕ ಶಕ್ತಿ ಅಧಿಕವಾಗಿದ್ದು, ಇದರಿಂದ ಜನಿಸುವ ಕುರಿಗಳು ಸದೃಢವಾಗಿರುತ್ತವೆ’’ ಎನ್ನುತ್ತಾರೆ ಪಶುವೈದ್ಯ ಡಾ. ಪ್ರಶಾಂತ ದೇಶಮುಖ್.

    ಇದನ್ನೂ ಓದಿ: ಹಲವು ದಾಖಲೆ ಬರೆದ ವಿಂಡೀಸ್​ ನಾಯಕ ಹೋಲ್ಡರ್​

    ‘‘ಇಂಥ ಟಗರಿನಿಂದ ಜನಿಸುವ ಕುರಿಗಳಿಂದ ಉತ್ತಮ ತುಪ್ಪಳ ಪಡೆಯಬಹುದು. ಕುರಿಗಳ ದೇಹವು ಬೇಗನೆ ಬೆಳವಣಿಗೆ ಹೊಂದುವುದರಿಂದ ಕಡಿಮೆ ಅವಧಿಯಲ್ಲಿ ಹೆಚ್ಚು ಆದಾಯ ಪಡೆಯಬಹುದು. ಅಷ್ಟೇ ಅಲ್ಲದೆ, ಅಧಿಕ ಹಾಲು ನೀಡುತ್ತವೆ. ಅದಕ್ಕೆ ಗಿಣಿ ಮೂಗು ಇರುವುದರಿಂದ ಅತ್ಯಧಿಕ ಬೆಲೆಗೆ ಖರೀದಿಸಲು ವ್ಯಾಪಾರಿಗಳು ಮುಂದಾಗುತ್ತಿದ್ದಾರೆ’’ ಎಂಬುದು ಸೋನ್ಯಾಳ ಕುರಿ ವ್ಯಾಪಾರಿ ದಗಡು ಗಾರಳೆ ಅವರ ಅಭಿಪ್ರಾಯ.

    ಗಂಗೂಲಿ ಬರ್ತ್​ಡೇಗೆ ಶುಭ ಹಾರೈಸಿ ಟ್ರೋಲ್​ಗೆ ಒಳಗಾದ ನಟಿ ನಗ್ಮಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts