More

    ಕರೊನಾ ಲಸಿಕೆ ಸಂಶೋಧನೆಯಲ್ಲಿ ರಷ್ಯಾ ಮುಂಚೂಣಿಗೆ ಬಂದಿದ್ದಕ್ಕೆ ಇದೇ ಕಾರಣವೇ?

    ನವದೆಹಲಿ: ಕರೊನಾ ಲಸಿಕೆ ಸಂಶೋಧನೆಗೆ ಜಗತ್ತಿನಲ್ಲೆಡೆ ಇನ್ನಿಲ್ಲದ ಪೈಪೋಟಿ ನಡೆಯುತ್ತಿದೆ. ಕನಿಷ್ಠ 14 ಕಂಪನಿಗಳು ಮಾನವರ ಮೇಲೆ ಪ್ರಯೋಗ ನಡೆಸುತ್ತಿವೆ. ತಾವೇ ಮೊದಲು ಲಸಿಕೆ ಕಂಡುಹಿಡಿಯಬೇಕೆಂಬ ಹಪಾಹಪಿ ಎಲ್ಲದ್ದಾಗಿದೆ.

    ಆಗಸ್ಟ್​ 15ಕ್ಕೆ ಲಸಿಕೆಯನ್ನು ರೋಗಿಗಳ ಬಳಕೆಗೆ ಮುಕ್ತಗೊಳಿಸುವುದಾಗಿ ರಷ್ಯಾ ಹೇಳಿಕೊಂಡಿದೆ. ಆದರೆ, ಬೇರೆ ದೇಶಗಳ ಲಸಿಕೆ ಸಂಶೋಧನಾ ಮಾಹಿತಿಯನ್ನು ರಷ್ಯಾ ಕದಿಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ರಷ್ಯಾ ವಿರುದ್ಧ ಬ್ರಿಟನ್​​, ಅಮೆರಿಕ ಹಾಗೂ ಕೆನಡಾ ಕೆಂಡ ಕಾರಿವೆ.

    ಇದನ್ನೂ ಓದಿ; ನೀರು, ಪಿಪಿಇ ಕಿಟ್​ ಕೇಳಿದ ನರ್ಸ್​ಗಳಿಗೆ ವಾಟ್ಸ್ಯಾಪ್​​ನಲ್ಲಿಯೇ ವಜಾ ಆದೇಶ ಕಳುಹಿಸಿದ್ರು…! 

    ಕೋಜಿ ಬೀರ್​ ಎಂದೇ ಕರೆಯಲಾಗುವ ಎಪಿಟಿ29 ಗುಂಪು ರಷ್ಯಾ ಗುಪ್ತಚರ ಘಟಕದ ಭಾಗವಾಗಿದ್ದು, ಕರೊನಾ ಲಸಿಕೆ ಸಂಶೋಧನೆಯಲ್ಲಿ ತೊಡಗಿರುವ ಪ್ರಯೋಗಾಲಯ ಹಾಗೂ ಸಂಸ್ಥೆಗಳ ಮೇಲೆ ಹ್ಯಾಕಿಂಗ್​ ನಡೆಸುತ್ತಿದೆ ಎಂದು ಹೇಳಲಾಗಿದೆ.

    ನಿರಂತರವಾಗಿ ಆನ್​ಲೈನ್​ ದಾಳಿ ನಡೆಸುತ್ತಿರುವುದರ ಹಿಂದೆ ಕರೊನಾ ಲಸಿಕೆ ಸಂಶೋಧನೆಯ ಮಾಹಿತಿ ಕದಿಯುವ ಉದ್ದೇಶ ಅಡಗಿದೆ ಹೊರತು ಸಂಶೋಧನೆಗೆ ಅಡ್ಡಿಪಡಿಸುವುದಲ್ಲ ಎಂದು ಬ್ರಿಟನ್ನಿನ ನ್ಯಾಷನಲ್​ ಸೈಬರ್​ ಸೆಕ್ಯುರಿಟಿ ಸೆಂಟರ್​ನ ಗುಪ್ತಚರ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಸಂಶೋಧನೆಗೆ ಸಂಬಂಧಿಸಿದ ಮಾಹಿತಿ ಕಳ್ಳತನ ಮಾಡಲಾಗಿದೆ ಎಂಬುದು ಖಚಿತವಾಗಿಲ್ಲ. ಆದರೆ, ಗೌಪ್ಯವಾಗಿರುವ ಮಾಹಿತಿ ಹ್ಯಾಕರ್​ಗಳ ಕೈಸೇರಿಲ್ಲ ಎಂದು ಹೇಳಲಾಗಿದೆ.

    ಇದನ್ನೂ ಓದಿ; ಗುಣಲಕ್ಷಣಗಳಿಲ್ಲದವರಿಂದ ಕರೊನಾ ಹರಡುವುದಿಲ್ಲ; ವಿಶ್ವ ಆರೋಗ್ಯ ಸಂಸ್ಥೆ ಅಧಿಕಾರಿಯಿಂದಲೇ ಹೇಳಿಕೆ; ಇಲ್ಲಿದೆ ಫ್ಯಾಕ್ಟ್​ಚೆಕ್​ 

    ಕೋಜಿ ಬೀರ್​ ರಷ್ಯಾ ಗುಪ್ತಚರ ಇಲಾಖೆ ಜತೆಗೆ ಕಾರ್ಯನಿರ್ವಹಿಸುವ ಹ್ಯಾಕಿಂಗ್​ ತಂಡವಾಗಿದೆ ಎಂದು ಅಮೆರಿಕ ಗುರುತಿಸಿದೆ. 2016ರಲ್ಲಿ ಅಮೆರಿಕ ಅಧ್ಯಕ್ಷರ ಚುನಾವಣೆಗೂ ಮುನ್ನ ಡೆಮಾಕ್ರೆಟಿಕ್​ ಪಕ್ಷದ ಈಮೇಲ್​ ಹ್ಯಾಕ್​ ಮಾಡಿ ಮಾಹಿತಿ ಕದ್ದಿತ್ತು. ಇನ್ನೊಂದು ಗುಂಪು ಫ್ಯಾನ್ಸಿ ಬೀರ್​ ಕೂಡ ರಷ್ಯಾದ್ದೇ ಆಗಿದೆ.

    ಕರೊನಾ ನಿಗ್ರಹಕ್ಕೆ ‘ಎರಡಲಗಿನ ಕತ್ತಿ’; ವರ್ಷಾನುಗಟ್ಟಲೇ ಸಿಗಲಿದೆ ಕೋವಿಡ್​ನಿಂದ ರಕ್ಷಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts