More

    ಇಂಗ್ಲೆಂಡ್ ಪ್ರಧಾನಿ ಭಾರತ ಪ್ರವಾಸ ರದ್ದು

    ನವದೆಹಲಿ : ಭಾರತದಲ್ಲಿ ಕರೊನಾ ಪ್ರಕರಣಗಳು ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಬ್ರಿಟೀಷ್​ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಭಾರತ ಭೇಟಿ ರದ್ದಾಗಿದೆ. ಜಾನ್ಸನ್​ ಅವರು ಏಪ್ರಿಲ್​ 25 ಮತ್ತು 26 ರಂದು ಭಾರತ ಪ್ರವಾಸ ಕೈಗೊಳ್ಳುವುದು ಈ ಮುನ್ನ ನಿಗದಿಯಾಗಿತ್ತು.

    “ಹಾಲಿ ಕರೊನಾ ಸನ್ನಿವೇಶದ ದೃಷ್ಟಿಯಿಂದ ಪರಸ್ಪರ ಸಮ್ಮತಿಯೊಂದಿಗೆ ಇಂಗ್ಲೆಂಡ್ ಪ್ರಧಾನಿ ಜಾನ್ಸನ್ ಅವರು ಮುಂದಿನ ವಾರ ಭಾರತದಕ್ಕೆ ಆಗಮಿಸುವುದಿಲ್ಲ ಎಂದು ನಿರ್ಧಾರವಾಗಿದೆ” ಎಂದು ವಿದೇಶಾಂಗ ಸಚಿವಾಲಯದ ಅಧಿಕೃತ ವಕ್ತಾರ ಅರಿಂದಂ ಬಾಗ್ಚಿ ಹೇಳಿದ್ದಾರೆ.

    ಇದನ್ನೂ ಓದಿ: ರಾಜಧಾನಿಯಲ್ಲಿ ಒಂದು ವಾರ ಲಾಕ್​ಡೌನ್ ; ‘ಇಷ್ಟು ಕೇಸ್ ಬಂದರೆ ಆರೋಗ್ಯ ವ್ಯವಸ್ಥೆ ಕುಸಿದೀತು’ ಎಂದ ಸಿಎಂ

    “ಪರಿವರ್ತಿತ ಭಾರತ-ಯು.ಕೆ. ಸಂಬಂಧದ ಬಗೆಗಿನ ಯೋಜನೆಗಳನ್ನು” ಪ್ರಾರಂಭಿಸಲು ಮುಂದಿನ ದಿನಗಳಲ್ಲಿ ಉಭಯ ಸರ್ಕಾರಗಳು ವರ್ಚುವಲ್ ಸಭೆಗಳನ್ನು ನಡೆಸಲಿವೆ. “ಭಾರತ-ಇಂಗ್ಲೆಂಡ್ ಪಾಲುದಾರಿಕೆಯನ್ನು ತನ್ನ ಪೂರ್ಣ ಸಾಮರ್ಥ್ಯಕ್ಕೆ ಕೊಂಡೊಯ್ಯುವುದಕ್ಕೆ ಉಭಯ ನಾಯಕರೂ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಈ ನಿಟ್ಟಿನಲ್ಲಿ ನಿಕಟ ಸಂಪರ್ಕದಲ್ಲಿರಲು ಇಚ್ಛಿಸುತ್ತಾರೆ. ಮತ್ತು ಇದೇ ವರ್ಷ ನಂತರದಲ್ಲಿ ವೈಯಕ್ತಿಕ ಸಭೆ ನಡೆಸಲು ಎದುರು ನೋಡುತ್ತಾರೆ” ಎಂದು ಬಾಗ್ಚಿ ಹೇಳಿದ್ದಾರೆ.

    ಈ ವರ್ಷ ಜಾನ್ಸನ್ ತಮ್ಮ ಭಾರತ ಪ್ರವಾಸವನ್ನು ರದ್ದುಗೊಳಿಸುತ್ತಿರುವುದು ಇದು ಎರಡನೇ ಬಾರಿ. ಇದಕ್ಕೂ ಮೊದಲು, ಇಂಗ್ಲೆಂಡಿನಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಜನವರಿ 26 ರ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಬೇಕಿದ್ದ ಜಾನ್ಸನ್, ತಮ್ಮ ಪ್ರವಾಸವನ್ನು ರದ್ದುಗೊಳಿಸಿದ್ದರು. ಜೂನ್​ನಲ್ಲಿ ಇಂಗ್ಲೆಂಡಿನಲ್ಲಿ ನಡೆಯಲಿರುವ ಜಿ -7 ರಾಷ್ಟ್ರಗಳ ಶೃಂಗಸಭೆಗಿಂತ ಮೊದಲು ಭಾರತಕ್ಕೆ ಭೇಟಿ ನೀಡುವ ಭರವಸೆ ನೀಡಿದ್ದರು. (ಏಜೆನ್ಸೀಸ್)

    ಕರೊನಾ ಎಮರ್ಜೆನ್ಸಿ : ದೇಶದ ವೈದ್ಯರು, ಔಷಧಿ ಕಂಪೆನಿಗಳೊಂದಿಗೆ ಮೋದಿ ಸಭೆ

    ‘ದೆಹಲಿ ಪೊಲೀಸರು ಚಕ್ರವರ್ತಿಗಳಂತೆ ವರ್ತಿಸುತ್ತಿದ್ದಾರೆ’ ಎಂದ ದೀಪ್ ಸಿಧು ವಕೀಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts