More

    ಉಜ್ಜಿನಿ ಶ್ರೀ ಮರುಳಸಿದ್ಧೇಶ್ವರ ಸ್ವಾಮಿಯ ರಥೋತ್ಸವ


    ಉಜ್ಜಿನಿ: ಜೀವನ್ಮುಕ್ತಿಯ ಪುಣ್ಯತಾಣ ಉಜ್ಜಿನಿಯ ಸದ್ಧರ್ಮ ಪೀಠದ ಆಚರಣೆಯಲ್ಲಿ ಬಹುಮುಖ್ಯವಾದದ್ದು ಶ್ರೀ ಮರುಳಸಿದ್ಧೇಶ್ವರ ಸ್ವಾಮಿ ರಥೋತ್ಸವ ಹಾಗೂ ತೈಲಾಭಿಷೇಕ.

    ಏ. 25 ರಂದು ಶ್ರೀ ಜಗದ್ಗುರು ದಾರುಕಾಚಾರ್ಯ ಜಯಂತಿ ಹಾಗೂ ಶ್ರೀ ಜಗದ್ಗುರು ಮರುಳಸಿದ್ಧೇಶ್ವರ ಸ್ವಾಮಿಯ ಮಹಾರಥೋತ್ಸವ ನಡೆಯಲಿದ್ದು, ನಾಡಿನ ಲಕ್ಷಕ್ಕೂ ಅಧಿಕ ಭಕ್ತರು ಕಣ್ತುಂಬಿಕೊಳ್ಳಲಿದ್ದಾರೆ.

    ಶ್ರೀ ದಾರುಕಾಚಾರ್ಯರ ಜಯಂತಿ ಯುಗಮಾನೋತ್ಸವ

    ಶಿವಾಚಾರ್ಯರು, ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ವಿವಿಧ ಜಾನಪದ ಕಲಾಮೇಳದೊಂದಿಗೆ ಶ್ರೀ ಮರುಳಸಿದ್ಧೇಶ್ವರ ಸ್ವಾಮಿಯ ಉತ್ಸವಮೂರ್ತಿ ಹಾಗೂ ಪ್ರಸ್ತುತ ಶ್ರೀ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಸಾನ್ನಿಧ್ಯದಲ್ಲಿ ಸಾಲಂಕೃತ ವರ್ಣರಂಜಿತ ಭವ್ಯರಥೋತ್ಸವ ನಡೆಯಲಿದೆ.

    ಸಂಜೆ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಶ್ರೀ ದಾರುಕಾಚಾರ್ಯರ ಜಯಂತಿ ಯುಗಮಾನೋತ್ಸವ ಅತ್ಯಂತ ಅರ್ಥಪೂರ್ಣವಾಗಿ ನಡೆಯಲಿದೆ.

    ಇದನ್ನೂ ಓದಿ: ಸಮಾಜಕ್ಕೆ ವೀರಶೈವ ಮಠಗಳ ಕೊಡುಗೆ ಅಪಾರ; ಉಜ್ಜಿನಿ ಸದ್ಥರ್ಮ ಪೀಠದ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಪ್ರತಿಪಾದನೆ

    ಗೋಪುರದ ಶಿಖರಕ್ಕೆ ತೈಲಾಭಿಷೇಕ

    ಏ. 26 ರಂದು ಸಂಜೆ ನಾಲ್ಕು ಗಂಟೆಗೆ ಶ್ರೀ ಮರುಳಸಿದ್ಧೇಶ್ವರ ಸ್ವಾಮಿ ದೇವಾಲಯದ ಗೋಪುರದ ಶಿಖರಕ್ಕೆ ತೈಲಾಭಿಷೇಕವನ್ನು ನೆರವೇರಿಸಲಾಗುತ್ತದೆ. ಏ. 27ರಂದು ಜಂಗಮ ವಟುಗಳಿಗೆ ಹಾಗೂ ವೀರಶೈವ ಧರ್ಮ ಸಂಸ್ಕೃತಿ ಪ್ರಚಾರ ಮಾಡುವ ವೀರಮಾಹೇಶ್ವರರಿಗೆ ನಾಡಿನ ಹರ-ಗುರು-ಚರಮೂರ್ತಿಗಳ ಸಮ್ಮುಖ, ಶಿವಾಚಾರ್ಯರ ನೇತೃತ್ವದಲ್ಲಿ ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮ ಮತ್ತು ಧರ್ಮೋಪದೇಶ ಶಾಸ್ತ್ರೋಕ್ತವಾಗಿ ನೆರವೇರಲಿದೆ.

    ಉಜ್ಜಿನಿ ಶ್ರೀ ಮರುಳಸಿದ್ಧೇಶ್ವರ ಸ್ವಾಮಿಯ ರಥೋತ್ಸವ

    ಉಜ್ಜಿನಿ ಮರುಳಸಿದ್ಧೇಶ್ವರ ನಮ್ಮ ಮನೆ ದೇವರು. ನಂಬಿದವರನ್ನು ಸದಾ ಕಾಯುವ ಆರಾಧ್ಯ ದೈವ. ಶ್ರೀ ಮರುಳ ಸಿದ್ಧೇಶ್ವರರು ಮತ್ತು ಜಗದ್ಗುರು ಶ್ರೀ ಸಿದ್ಧಲಿಂಗ ಶಿವಾಚಾರ್ಯ ಭಗವತ್ದಾದರು ಸರ್ವರನ್ನೂ ಹರಸಲಿ.
    | ಎಂ.ಮಲ್ಲಿಕಾರ್ಜುನ, ಕಾರ್ಯದರ್ಶಿ, ಶ್ರೀ ಜಗದ್ಗುರು ಧಾರಕಾಚಾರ್ಯ ಶಿಕ್ಷಣ ಸಂಸ್ಥೆ, ಕೊಟ್ಟೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts