More

    ಮಣ್ಣಿನಡಿ ಸಿಲುಕಿದ ಉಜಿರೆ ಯುವಕ

    ಕಳಸ/ಬೆಳ್ತಂಗಡಿ: ಮೂಡಿಗೆರೆ ಹಾಗೂ ಬೆಳ್ತಂಗಡಿ ತಾಲೂಕುಗಳ ಗಡಿ ಪ್ರದೇಶ ಎಳನೀರು ಸಮೀಪದ ಬಂಗಾರ್‌ಪಲ್ಕೆ ಅರಣ್ಯ ಪ್ರದೇಶದಲ್ಲಿರುವ ಜಲಪಾತದ ಅಂಚಿನ ಗುಡ್ಡ ಕುಸಿದು ಉಜಿರೆ ಮೂಲದ ಯುವಕ ಮಣ್ಣಿನಡಿ ಸಿಲುಕಿದ್ದಾನೆ.

    ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ನಾಲ್ವರು ಯುವಕರು ಜಲಪಾತ ನೋಡಲು ಅತ್ಯಂತ ಕಡಿದಾದ ಮತ್ತು ಅಷ್ಟೇ ಅಪಾಯಕಾರಿ ಸ್ಥಳವಾದ ಬಂಗಾರು ಪಲ್ಕೆ ಜಲಪಾತ ನೋಡಲು ತೆರಳಿದ್ದರು. ಜಲಪಾತದ ಬಳಿ ಹೋದಾಗ ಜಲಪಾತದ ಒಂದು ಅಂಚಿನ ಗುಡ್ಡ ಕುಸಿದಿದೆ. ಸ್ಥಳದಲ್ಲಿದ್ದ ಮೂವರು ಮಣ್ಣಿನಡಿ ಸಿಲುಕಿದ್ದರು. ಇದರಲ್ಲಿ ಇಬ್ಬರು ಪಾರಾಗಿದ್ದಾರೆ. ಉಜಿರೆ ಕಾಶಿಬೆಟ್ಟು ನಿವಾಸಿ ಯುವಕನೊಬ್ಬ ಮಣ್ಣಿನಡಿ ಸಿಲುಕಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ.
    ಸ್ಥಳಕ್ಕೆ ಯಾವುದೇ ವಾಹನಗಳು ತೆರಳುವುದಿಲ್ಲ.

    ಸ್ಥಳೀಯರು ಸಂಜೆಯವರೆಗೆ ರಕ್ಷಣಾ ಕಾರ್ಯ ನಡೆಸಿದ್ದಾರೆ. ಬಂಗಾರು ಪಲ್ಕೆ ಜಲಪಾತ ಅತ್ಯಂತ ಅಪಾಯ ಮತ್ತು ಅತಿ ಎತ್ತರದ ಸ್ಥಳವಾಗಿದೆ. ಈ ಪ್ರದೇಶ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿದೆ. ಇಲ್ಲಿಗೆ ನೂರಾರು ಮಂದಿ ಚಾರಣ ಕೈಗೊಳ್ಳುತ್ತಾರೆ. ಯಾವುದೇ ಅನಾಹುತ ನಡೆದರೂ ಗೊತ್ತಾಗದಷ್ಟು ಅಜ್ಞಾತ ಸ್ಥಳ. ಇಲ್ಲಿಗೆ ಪ್ರವಾಸಿಗರು ಬರುತ್ತಿರುವ ಬಗ್ಗೆ ಮಾಹಿತಿ ಇದ್ದರೂ ಅರಣ್ಯ ಇಲಾಖೆ ಯಾವುದೇ ನಿರ್ಬಂಧ ಹೇರಿರಲಿಲ್ಲ. ಇಲಾಖೆ ನಿರ್ಲಕ್ಷೃವೇ ಈ ದುರಂತಕ್ಕೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts