More

    ಉಗಾರಿ ಜಲಸೇವೆಗೆ ಜನರ ಮೆಚ್ಚುಗೆ

    ಸಂಬರಗಿ: ಸಮೀಪದ ಮಲಾಬಾದ ಗ್ರಾಮದಲ್ಲಿ ಜನರು ನೀರಿಗಾಗಿ ಎದುರಿಸುತ್ತಿರುವ ಸಮಸ್ಯೆ ಮನಗಂಡ ಗ್ರಾಪಂ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಬೀರಪ್ಪ ಉಗಾರಿ ಅವರು ಸ್ವಂತ ಖರ್ಚಿನಲ್ಲಿ ಜಲ ಪೂರೈಸುವ ಮೂಲಕ ಜನರ ಮನಗೆದ್ದಿದ್ದಾರೆ.

    ಒಂದು ತಿಂಗಳಿಂದ ಗ್ರಾಮದಲ್ಲಿ ನೀರಿನ ಸಮಸ್ಯೆ ಇದ್ದು, ಈ ಕುರಿತು ತಾಲೂಕಾಡಳಿತಕ್ಕೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಸಮಸ್ಯೆ ಬಗೆಹರಿದಿಲ್ಲ. ಗ್ರಾಮಸ್ಥರ ಮನವಿ ಮೇರೆಗೆ ಉಗಾರಿ ಅವರು ಮಹಾರಾಷ್ಟ್ರದ ಜತ್ತ ತಾಲೂಕಿನ ಡಪ್ಲಾಪುರ ಗ್ರಾಮದಿಂದ ತೋಟದಬಾವಿ ಹಾಗೂ ಕೊಳವೆ ಬಾವಿಯಿಂದ ಪ್ರತಿ ಟ್ಯಾಂಕರ್‌ಗೆ 4,500 ನೀಡಿ ಗ್ರಾಮಸ್ಥರಿಗೆ ನೀರು ಪೂರೈಕೆ ಮಾಡುತ್ತಿದ್ದಾನೆ.

    ಟ್ಯಾಂಕರ್ ಸುಮಾರು 25,000 ಲೀಟರ್ ಸಾಮರ್ಥ್ಯ ಹೊಂದಿದೆ. ಉಗಾರಿ ಸೇವೆಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗ್ರೇಡ್-2 ತಹಸೀಲ್ದಾರ್ ಬಸವರಾಜ ಹೊಸ್ಕೇರಿ ಅವರನ್ನು ಸಂಪರ್ಕಿಸಿದಾಗ, ನೀರಿನ ಸಮಸ್ಯೆ ಇರುವ ಪ್ರತಿ ಗ್ರಾಮಕ್ಕೆ ಟ್ಯಾಂಕರ್ ಶೀಘ್ರ ಪ್ರಾರಂಭಿಸಲಾಗುವುದು.

    ನೀರಿನ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಗ್ರಾಮಸ್ಥರಿಗೆ ಟ್ಯಾಂಕರ್ ಆರಂಭಿಸಿದರೆ ಅನುಕೂಲವಾಗುತ್ತದೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts