More

    ಉಡುಪಿಯಲ್ಲಿ ಮೂವರಿಗೆ ಪಾಸಿಟಿವ್, ಸೋಂಕಿತರ ಸಂಖ್ಯೆ 50ಕ್ಕೆ ಏರಿಕೆ

    ಉಡುಪಿ: ಜಿಲ್ಲೆಯಲ್ಲಿ ಶುಕ್ರವಾರವೂ ಕರೊನಾ ಹಾವಳಿ ಮುಂದುವರಿದಿದ್ದು, ಜಿಲ್ಲಾಡಳಿತ ಸಾಯಂಕಾಲ ಸ್ವೀಕರಿಸಿದ ವರದಿಯಲ್ಲಿ ಮೂರು ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಈ ಮೂವರೂ ಪ್ರಥಮ ಮತ್ತು ದ್ವಿತೀಯ ಹಂತದಲ್ಲಿ 498 ಮಂದಿಗೆ ಸಂಪರ್ಕವಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

    ಮುಂಬೈನಿಂದ ಆಗಮಿಸಿದ್ದ 55 ವರ್ಷದ ಪತಿ, 48 ವರ್ಷದ ಪತ್ನಿ, ಜತೆಗೆ ಆಗಮಿಸಿದ್ದ 31 ವರ್ಷದ ಯುವಕನಿಗೆ ಕೋವಿಡ್ ದೃಢಪಟ್ಟಿದೆ. ಜಿಲ್ಲೆಯ ಬೈಂದೂರು ತಾಲೂಕಿನವರಾದ ಇವರು ಮೇ 11ರಂದು ಜಿಲ್ಲೆಗೆ ಆಗಮಿಸಿ ಹೋಟೆಲ್ ಕ್ವಾರಂಟೈನ್‌ನಲ್ಲಿದ್ದರು.

    ಮೂವರು ಪ್ರಥಮ ಹಂತದಲ್ಲಿ 319 ಮಂದಿಗೆ, ದ್ವಿತೀಯ ಹಂತದಲ್ಲಿ 179 ಮಂದಿಯನ್ನು ಸಂಪರ್ಕವಾಗಿದ್ದಾರೆ ಎನ್ನಲಾಗಿದೆ. ಸಂಪರ್ಕಿತರೆಲ್ಲರೂ ಕ್ವಾರಂಟೈನ್ ವ್ಯವಸ್ಥೆಯಲ್ಲೇ ಇದ್ದು, ಇವರೆಲ್ಲರ ಗಂಟಲ ದ್ರವ ಮಾದರಿ ಸಂಗ್ರಹಕ್ಕೆ ಆರೋಗ್ಯ ಇಲಾಖೆ ತಯಾರಿ ನಡೆಸಿದೆ. ಜಿಲ್ಲೆಯಲ್ಲಿ ಇಲ್ಲಿವರೆಗಿನ ಸೋಂಕಿತರ ಸಂಖ್ಯೆ 50ಕ್ಕೆ ಏರಿಕೆಯಾಗಿದೆ.

    1082 ಮಾದರಿ ಸಂಗ್ರಹ: ಜಿಲ್ಲೆಯಲ್ಲಿ ಶುಕ್ರವಾರ 157 ಮಂದಿಯ ಶಂಕಿತ ಕರೊನಾ ಪ್ರಕರಣಗಳ ವರದಿ ನೆಗೆಟಿವ್ ಬಂದಿದೆ. ಉಸಿರಾಟದ ತೊಂದರೆ 9, ಇಲ್‌ನೆಸ್ 25, ಕೋವಿಡ್-19 ಸಂಪರ್ಕ 22, ಹಾಟ್‌ಸ್ಪಾಟ್‌ನಿಂದ ಬಂದವರು 1026 ಮಂದಿ ಸೇರಿದಂತೆ ಒಟ್ಟು 1082 ಮಂದಿಯ ಮಾದರಿಯನ್ನು ಶುಕ್ರವಾರ ಸಂಗ್ರಹಿಸಲಾಗಿದೆ. ಇನ್ನೂ 2409 ಮಂದಿಯ ವರದಿ ಬರಲು ಬಾಕಿ ಇದೆ. ಐಸೊಲೇಶನ್ ವಾರ್ಡ್‌ನಿಂದ 16 ಮಂದಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts