More

    ಉಡುಪಿ ಪೊಲೀಸರಿಂದ ಕೋವಿಡ್ ಸಹಾಯವಾಣಿ

    ಉಡುಪಿ:  ಉಡುಪಿ ನಗರ, ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರತಿವಾರ್ಡ್, ಗ್ರಾಮ ವ್ಯಾಪ್ತಿಯಲ್ಲಿ ಟಾಸ್ಕ್‌ಫೋರ್ಸ್ ಸಮಿತಿಯನ್ನು ವ್ಯವಸ್ಥಿತವಾಗಿ ಕಾರ್ಯಚರಿಸಲು ಕೋವಿಡ್ ಸಹಾಯವಾಣಿ ಆರಂಭಿಸಲಾಗಿದ್ದು, ನಗರ ಠಾಣೆ ಪೊಲೀಸರು ಮಾದರಿ ಕಾರ್ಯಕ್ಕೆ ಮುಂದಾಗಿದ್ದಾರೆ.
    ಠಾಣಾ ವ್ಯಾಪ್ತಿ ಗ್ರಾಮಗಳಲ್ಲಿ ಪೊಲೀಸ್ ಇಲಾಖೆ ವತಿಯಿಂದ ನಗರ ಠಾಣೆ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಪಿ. ನೇತೃತ್ವದಲ್ಲಿ ಅಪರಾಧ ವಿಭಾಗದ ಪಿಎಸ್‌ಐ ವಾಸಪ್ಪ ನಾಯಕ್ ಹಾಗೂ ಪೊಲೀಸ್ ಬೀಟ್ ಉಸ್ತುವಾರಿ ಎಎಸ್‌ಐಗಳಾದ ನಾರಾಯಣ್, ಹರೀಶ್, ಅರುಣ್, ವಿಜಯ್, ಜಯಕರ್ ಹಾಗೂ ಶಶಿಧರ್ ಸಹಭಾಗಿತ್ವದಲ್ಲಿ ಠಾಣೆಯ ಎಲ್ಲ ಸಿಬ್ಬಂದಿ ಒಳಗೊಂಡು ಪ್ರತಿ ಗ್ರಾಮದಲ್ಲಿ ಕೋವಿಡ್ ಸಹಾಯವಾಣಿ ಪ್ರಾರಂಭಿಸುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮಗಳಲ್ಲಿ ವಾರ್ಡ್ ಮಟ್ಟದ ಸಭೆಗಳನ್ನು ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಅದರಂತೆ ಟಾಸ್ಕ್‌ಫೋರ್ಸ್‌ನಲ್ಲಿರುವ ಬೀಟ್ ಪೊಲೀಸ್, ನಗರಸಭೆಯಿಂದ ನೇಮಕಗೊಂಡ ಸಮಿತಿ ಸದಸ್ಯರು, ಸ್ಥಳೀಯ ಜನಪ್ರತಿನಿಧಿಗಳು, ಆಶಾ ಕಾರ್ಯಕರ್ತೆಯರು, ಗ್ರಾಮಲೆಕ್ಕಿಗರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸ್ಥಳೀಯ ಸಂಘ ಸಂಸ್ಥೆಗಳು, ಸಮಾಜ ಸೇವಕರು, ಉತ್ಸಾಹಿ ಯುವಕರು, ಸ್ಥಳೀಯ ವೈದ್ಯರು ತಂಡದಲ್ಲಿದ್ದಾರೆ.

    ಎಲ್ಲೆಲ್ಲಿ ಕೋವಿಡ್ ಸಹಾಯ ಕೇಂದ್ರ ?
    ಮೂಡನಿಡಂಬೂರು ಗ್ರಾಮದ ಬನ್ನಂಜೆ ನಾರಾಯಣಗುರು ಸಭಾಭವನ, ಶಿರಿಬೀಡುವಿನಲ್ಲಿರುವ ಸರಸ್ವತಿ ಶಾಲೆ, ಶಿವಳ್ಳಿ ಗ್ರಾಮದ ಶಾರದ ಕಲ್ಯಾಣಮಂಟಪ, ದೊಡ್ಡಣಗುಡ್ಡೆ ಜನತಾ ವ್ಯಾಯಾಮ ಶಾಲೆಯಲ್ಲಿ, 76 ಬಡಗುಬೆಟ್ಟು ಗ್ರಾಮದ ಚಿಟ್ಪಾಡಿಯಲ್ಲಿರುವ ವಿಜಯವೀರ ಸಂಘ ಹಾಗೂ ಮಿಷನ್ ಕಂಪೌಂಡ್‌ನಲ್ಲಿರುವ ಯುಬಿಎಂಸಿ ಶಾಲೆ ಕೊಠಡಿಯಲ್ಲಿ, ಅಂಬಲಪಾಡಿ ಗ್ರಾಮದ ಅಂಬಲಪಾಡಿ ಯುವಕ ಮಂಡಲದಲ್ಲಿ, ಕೊರಂಗ್ರಪಾಡಿಯ ನಂದಗೋಕುಲ ಯುವಕ ಮಂಡಲದಲ್ಲಿ, ಕುತ್ಪಾಡಿಯ ನವಚೇತನ ಯುವಕ ಮಂಡಲದ ಕಚೇರಿಯಲ್ಲಿ ಹಾಗೂ ಕೊರಂಗ್ರಪಾಡಿಯ ನಂದಗೋಕುಲ ಯುವಕ ಮಂಡಲದ ಕಚೇರಿಯಲ್ಲಿ ಕೋವಿಡ್ ಸಹಾಯಕೇಂದ್ರ ಪ್ರಾರಂಭಿಸಲಾಗಿದೆ. ಪ್ರತಿಕೇಂದ್ರಕ್ಕೂ ಸಂಪರ್ಕ ಸಂಖ್ಯೆ ನೀಡಿದ್ದು, ಸ್ಥಳೀಯವಾಗಿ ಇದನ್ನು ಪ್ರಚಾರ ಮಾಡಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts