ಉಡುಪಿ ಕೊಲೆ ಪ್ರಕರಣ; ಹಂತಕನ ಚಾಣಾಕ್ಷತನಕ್ಕೆ ಪೊಲೀಸ್​ ಅಧಿಕಾರಿಗಳೇ ಶಾಕ್!

Udupi Murder
Published on

ಉಡುಪಿ: ನವೆಂಬರ್ 12ರಂದು ಉಡುಪಿಯ ನೇಜಾರಿನಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಚಾಣಾಕ್ಷತನಕ್ಕೆ ಪೊಲೀಸ್​ ಅಧಿಕಾರಿಗಳೇ ಶಾಕ್​ ಆಗಿದ್ದು, ಹಂತಕನಿಗಾಗಿ ಪೊಲೀಸರು ಐದು ತಂಡಗಳನ್ನು ರಚಿಸಿ ಬಲೆ ಬೀಸಿದ್ದಾರೆ.

ನವೆಂಬರ್ 12ರಂದು ಉಡುಪಿಯ ನೇಜಾರಿನಲ್ಲಿ ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಹತ್ಯೆ ಮಅಡಿದ ಬಳಿಕ ಆರೋಪಿ ಎಸ್ಕೇಪ್​ ಆಗಲು ನಾಲ್ಕು ವಾಹನಗಳನ್ನು ಬಳಿಸಿಕೊಂಡಿದ್ದು, ಇದರಿಂದ ಆರೋಪಿಯನ್ನು ಕಂಡುಹಿಡಿಯಲು ಪೊಲೀಸರಿಗೆ ಇದುವರೆಗೂ ಸಾಧ್ಯವಾಗಿಲ್ಲ. ಇದೀಗ ಪೊಲೀಸರು ಟೆಜ್ನಿಕಲ್​ ಎವಿಡೆನ್ಸ್​ ಆಧಾರದ ಮೇಲೆ ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.

Udupi Murder

ಇದುವರೆಗೂ ಸಿಸಿ ಕ್ಯಾಮರಾ ಫೂಟೇಜ್ ಹೊರತುಪಡಿಸಿ ಬೇರೆ ಯಾವುದೇ ಸುಳಿವು ಪೋಲಿಸರಿಗೆ ಸಿಕ್ಕಿಲ್ಲ. ಸಾಕಷ್ಟು ಸಿಸಿಟಿವಿ ಫೋಟೇಜ್ ಸಿಕ್ಕರು ಆರೋಪಿಯ ಪತ್ತೆ ಮಾಡಲು ಪೊಲೀಸರಿಂದ ಸಾಧ್ಯವಾಗಿಲ್ಲ. ಹೀಗಾಗಿ ಪೊಲೀಸರು ಅಕ್ಕ ಪಕ್ಕದ ಜಿಲ್ಲೆಗಳಲ್ಲಿಯೂ ತನಿಖೆ ನಡೆಸುತ್ತಿದ್ದಾರೆ.

ನಾಲ್ವರ ಕಗ್ಗೊಲೆ ಘಟನೆಯಲ್ಲಿ ಚಾಕು ಇರಿತಕ್ಕೊಳಗಾಗಿದ್ದ ಹಾಜಿರಾ ಎನ್ನುವ ಮಹಿಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ನವೆಂಬರ್ 12ರಂದು ಹಾಜಿರಾ ಸಹ ದುಷ್ಕರ್ಮಿ ಎರಡು ಕಡೆ ಚಾಕು ಇರಿದು ಪರಾರಿಯಾಗಿದ್ದ. ಇದೀಗ ಚಿಕತ್ಸೆ ಪಡೆದು ಮಣಿಪಾಲ ಕೆ.ಎಂಸಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಪೊಲೀಸರು ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net