More

    ಸರಳ‌ವಾಗಿ ನಡೆದ ಉಡುಪಿ ಕೃಷ್ಣಾಪುರ ಪರ್ಯಾಯ ಮೆರವಣಿಗೆ

    ಉಡುಪಿ : ಕೋವಿಡ್ ಹಿನ್ನೆಲೆಯಲ್ಲಿ ಸರಳ, ಸಾಂಪ್ರದಾಯಿಕವಾಗಿ 251ನೇ ಪರ್ಯಾಯ ಮೆರವಣಿಗೆ ನಡೆಯಿತು.

    ಮೆರವಣಿಗೆಯಲ್ಲಿ ಕೃಷ್ಣಾಪುರ ಪರ್ಯಾಯ ಸಮಿತಿಯ ಕೇವಲ 6 ಟ್ಯಾಬ್ಲೋಗಳಿಗೆ ಮತ್ತು ವಾದ್ಯ ತಂಡಗಳಿಗೆ ಅವಕಾಶ ನೀಡಲಾಗಿತ್ತು. ಜಾನಪದ ತಂಡಗಳ ಪ್ರದರ್ಶನ ಇರಲಿಲ್ಲ.

    ಮಂಗಳವಾರ ಮುಂಜಾನೆ 3.30ಕ್ಕೆ ಆರಂಭಗೊಂಡ ಗಂಟೆಗೆ ಆರಂಭಗೊಂಡ ಮೆರವಣಿಗೆ ರಥಬೀದಿಗೆ ತಲುಪುವಾಗ 4.30 ಗಂಟೆಯಾಗಿತ್ತು. ಪ್ರತಿವರ್ಷ ಸುಮಾರು 6 ಗಂಟೆಗೆ ತಲುಪುತ್ತಿದ್ದ ಮೆರವಣಿಗೆ ಈ ಬಾರಿ ಕಲಾತಂಡಗಳ ಪ್ರದರ್ಶನವಿರದ ಹಿನ್ನೆಲೆಯಲ್ಲಿ ವೇಗವಾಗಿ ಮತ್ತು ಅಚ್ಚುಕಟ್ಟಾಗಿ ಸಾಗಿತು.

    ಕಾಪು ದಂಡತೀರ್ಥದಲ್ಲಿ ಸ್ನಾನ ಮುಗಿಸಿ, 3 ಗಂಟೆಯ ವೇಳೆಗೆ ಜೋಡುಕಟ್ಟೆಗೆ ಆಗಮಿಸಿದ ಪರ್ಯಾಯ ಶ್ರೀಗಳು ಅಲ್ಲಿ ಪಟ್ಟದ ದೇವರಿಗೆ ಪೂಜೆ ಸಲ್ಲಿಸಿದರು. ಬಳಿಕ ಮೆರವಣಿಗೆ ಆರಂಭಗೊಂಡಿತು. ವಿವಿಧ ಮಠಗಳ ಯತಿಗಳು ಜೋಡುಕಟ್ಟೆಯಲ್ಲಿ ಬ್ಯಾಂಡ್ ವಾದ್ಯ, ಚೆಂಡೆ ತಂಡಗಳ ಪ್ರದರ್ಶನ ವೀಕ್ಷಿಸಿದರು.

    *ಮೆರವಣಿಗೆಯಲ್ಲಿ ಏನೇನಿದ್ದವು: ಈ ಬಾರಿಯ ಪರ್ಯಾಯ ಮೆರವಣಿಗೆಯಲ್ಲಿ ಮುಂಚೂಣಿಯಲ್ಲಿ‌ ತಟ್ಟಿರಾಯ ಸಾಗಿದರೆ, ಹಿಂದಿನಿಂದ ಬಿರುದಾವಳಿ, ವೇದಘೋಷ, ಇಸ್ಕಾನ್ ಭಜನಾ ತಂಡ, ಕುಂಭಾಶಿ  ಡೋಲು, ಬ್ಯಾಂಡ್ ಸೆಟ್, ಕೊಂಬು ವಾದನ ತಂಡ, ಕೇರಳ ಚೆಂಡೆ, ಪಂಚ ವಾದ್ಯ ವಾದನ,ವಾದ್ಯ ಮೇಳ, ಶಂಖ ಜಾಗಟೆ, ದೊಂದಿ, ಇಬ್ಬರು ಬಾಲಕಿಯರ ಮರಗಾಲು ಕುಣಿತವಿತ್ತು.
    ಇದರ ಹಿಂದೆ ಮಠದ ವಾಲಗ, ವಾಹನದಲ್ಲಿರಿಸಿದ ಪಲ್ಲಕ್ಕಿಯಲ್ಲಿ ಕುಳಿತು ಮಠಾಧೀಶರುಗಳು ಅಲಂಕೃತ ವಾಹನ ಸಾಗಿದರು.

    ಸ್ವಾಮೀಜಿಗಳ ಹಿಂದಿನಿಂದ ಪರ್ಯಾಯ ಸಮಿತಿಯ ವಸುದೇವ ಕೃಷ್ಣ, ಗೀತೋಪದೇಶ ಕೃಷ್ಣಾರ್ಜುನ, ಜಾಂಬವಂತ ಕೃಷ್ಣ, ಗಜೇಂದ್ರ ಮೋಕ್ಷ, ಶೇಷ ಶಯನ ಲಕ್ಷ್ಮೀ ನಾರಾಯಣ, ಕಾಳಿಂಗ ಮರ್ಧನ, ಯಕ್ಷಗಾನ ಟ್ಯಾಬ್ಲೋಗಳು ಸಾಗಿದವು.

    ಪರ್ಯಾಯ ಶ್ರೀ ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಮುಂಚೂಣಿಯಲ್ಲಿ ಸಾಗಿದರು. ಇವರ ಹಿಂದೆ , ಪಲಿಮಾರು, ಪೇಜಾವರ,
    ಕಾಣಿಯೂರು, ಸೋದೆ ವಾದಿರಾಜ ಮಠ, ಪಲಿಮಾರು ಕಿರಿಯ ಪಟ್ಟ, ಶಿರೂರು ಮಠದ ಶ್ರೀಗಳಿದ್ದರು.
    ಪುತ್ತಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿ ಮೆರವಣಿಗೆಯಲ್ಲಿ ಭಾಗವಹಿಸಿರಲಿಲ್ಲ.
    ಸಾವಿರಾರು ಭಕ್ತರು ನಗರದುದ್ದಕ್ಕೂ ನಿಂತು ಮೆರವಣಿಗೆ ವೀಕ್ಷಿಸಿದರು. ಬೀದಿಯಲ್ಲಿ ಹಿಂದಿನಂತೆ ಒತ್ತಡದ ಜನಸಂಖ್ಯೆ ಇರಲಿಲ್ಲ. ಭಕ್ತರ ವಿರಳ ಓಡಾಟ ಕಂಡುಬಂತು.

    ಕಲ್ಪನಾ ವೃತ್ತದಿಂದ, ತೆಂಕಪೇಟೆ ರಸ್ತೆಯ ರಾಜಬೀದಿ ಮೂಲಕ ಪ್ರವೇಶ ಮಾಡಿದ ಮೆರವಣಿಗೆ‌ ರಥಬೀದಿಗೆ‌ ಸಾಗಿತು. ರಥಬೀದಿಯಲ್ಲಿ ಪಲ್ಲಕ್ಕಿಯಿಂದ ಇಳಿದ ಮಠಾಧೀಶರುಗಳು ಕಾಲ್ನಡಿಗೆಯಲ್ಲಿ ಬಂದು ಕನಕನ‌ ಕಿಂಡಿ‌ಯಲ್ಲಿ ಕೃಷ್ಣನ ದರ್ಶನ ಮಾಡಿ, ದೇಗುಲ ಪ್ರವೇಶಿಸಿದರು.‌
    ಪರ್ಯಾಯ ಮೆರವಣಿಗೆಯಲ್ಲಿ ವಿವಿಧ ರಾಜಕೀಯ-ಸಾಮಾಜಿಕ ಮುಖಂಡರೂ ಭಾಗವಹಿಸಿ, ಜೋಡುಕಟ್ಟೆಯಿಂದ ರಥಬೀದಿವರೆಗೆ ಕಾಲ್ನಡಿಗೆಯಲ್ಲಿ ಸಾಗಿದರು. ಸ್ವಯಂ ಸೇವಕರು ಕಾರ್ಯಕ್ರಮದ ಅಚ್ಚುಕಟ್ಟಾಗಿ ನಡೆಯಲು ಶ್ರಮಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts