More

    ಮಲ್ಪೆ ಮೀನುಗಾರರಿಗೆ ಬಂಪರ್ !: ಬಲೆಗೆ ಬಿತ್ತು 13 ಕ್ವಿಂಟಾಲ್‌ ಪಾಂಪ್ಲೆಟ್


    ಉಡುಪಿ: ಕರಾವಳಿ ಭಾಗದಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ ನಡೆಸುವ ಮೀನುಗಾರರ ಒಂದು ಗುಂಪಿಗೆ ಬಂಪರ್ ಮೀನುಗಾರಿಕೆಯಾಗಿದೆ. ಮಲ್ಪೆ ಸಮೀಪದ ತೊಟ್ಟಂ ಪರಿಸರದಲ್ಲಿ ಕೈರಂಪಣಿ ಬಲೆಗಳ ಮೂಲಕ ಮೀನು ಹಿಡಿಯುತ್ತಿದ್ದ 40 ಮಂದಿಯ ಮೀನುಗಾರರ ತಂಡಕ್ಕೆ ರಾಶಿರಾಶಿ ಪಾಂಪ್ಲೆಟ್(ಮಾಂಜಿ) ಮೀನು ದೊರೆತಿದೆ. ಶುಕ್ರವಾರ ಬೆಳಗ್ಗೆ ಎಂದಿನಂತೆ ಮೀನುಗಾರಿಕೆಯಲ್ಲಿ ತೊಡಗಿದ್ದ ಮೀನುಗಾರರಿಗೆ ಹೆಚ್ಚಿನ ಸಂಖ್ಯೆಯಲ್ಲಿದ್ದ ಪಾಂಪ್ಲೆಟ್ ಮೀನು ಬಲೆಗೆ ಬಿದ್ದಿದೆ.

    ಕಡಲತೀರದಲ್ಲಿ ಉದ್ದದ ಬಲೆಯಲ್ಲಿ ಸಿಲುಕಿದ್ದ ಮೀನನನ್ನು ಬೇರ್ಪಡಿಸಿದಾಗ 13 ಕ್ವಿಂಟಾಲ್ ಮೀನು ಲಭ್ಯವಾಗಿದೆ. ಸಣ್ಣ ಪಾಂಪ್ಲೆಟ್ ಮೀನು ಇದಾಗಿದ್ದು, ಕೆ.ಜಿ.ಗೆ 320 ರೂಪಾಯಿಯಂತೆ ಮಾರಾಟವಾಗಿ 4 ಲಕ್ಷ ರೂ. ದೊರೆತಿದೆ ಎಂದು ಮಲ್ಪೆ ಮೀನುಗಾರರು ತಿಳಿಸಿದ್ದಾರೆ. ಇಲ್ಲಿನ ಬಹುತೇಕ ಬಡ ಸಾಂಪ್ರದಾಯಿಕ ಮೀನುಗಾರರು ಕಳೆದ ಎರಡು ಮೂರು ವರ್ಷಗಳಿಂದ ಉತ್ತಮ ಮೀನುಗಾರಿಕೆ ಇಲ್ಲದೆ ನಿರಾಸೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts