More

    20 ಮಂದಿಗೆ ಸೋಂಕು, 69 ಮಂದಿ ಡಿಸ್ಚಾರ್ಜ್

    ಉಡುಪಿ: ಜಿಲ್ಲೆಯಲ್ಲಿ ಹೊರ ರಾಜ್ಯದಿಂದ ಬಂದ 20 ಮಂದಿಯಲ್ಲಿ ಕರೊನಾ ಸೋಂಕು ಪತ್ತೆಯಾಗಿದೆ.
    ಪಾಸಿಟಿವ್ ಬಂದವರನ್ನು ನಿಗದಿತ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಇದರಲ್ಲಿ 17 ಮಂದಿ ಮಹಾರಾಷ್ಟ್ರದಿಂದ, ಒಬ್ಬರು ತಮಿಳುನಾಡು, ಒಬ್ಬರು ಉತ್ತರ ಪ್ರದೇಶದಿಂದ ಬಂದವರಾಗಿದ್ದಾರೆ. ಇನ್ನೊಂದು ಪಾಸಿಟಿವ್ ಪ್ರಕರಣ ಸ್ಥಳೀಯವಾಗಿದ್ದು, ಮಹಾರಾಷ್ಟ್ರದಿಂದ ಜೂನ್ 8ರಂದು ಬಂದಿದ್ದ 51 ವರ್ಷದ ಪಾಸಿಟಿವ್ ವ್ಯಕ್ತಿಗೆ ಸಂಪರ್ಕವಾಗಿದ್ದ 53 ವರ್ಷದ ವ್ಯಕ್ತಿ ಸೋಂಕು ತಗುಲಿದೆ. 20 ಮಂದಿಯಲ್ಲಿ 14 ಪುರುಷರು, 5 ಮಹಿಳೆಯರು, 4 ವರ್ಷದ ಬಾಲಕನಿದ್ದಾನೆ.

    15 ಮಂದಿ ಕುಂದಾಪುರ, ಮೂವರು ಉಡುಪಿಯವರಾದರೆ, ಇಬ್ಬರು ಕಾರ್ಕಳದವರು ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. ಭಾನುವಾರ 69 ಮಂದಿ ಸೋಂಕಿತರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ.

    44 ಮಂದಿಯದು ನೆಗೆಟಿವ್ ರಿಪೋರ್ಟ್ : ಜಿಲ್ಲೆಯಲ್ಲಿ ಭಾನುವಾರ 44 ಮಂದಿಯ ವರದಿ ನೆಗೆಟಿವ್ ಬಂದಿದೆ. ತೀವ್ರ ಉಸಿರಾಟ ಸಮಸ್ಯೆ 3, ಕೋವಿಡ್ ಲಕ್ಷಣಗಳು 5, ಕೋವಿಡ್ ಸಂಪರ್ಕ 4, ಇಲ್‌ನೆಸ್‌ಗೆ ಸಂಬಂಧಿಸಿ 9, ಹಾಟ್‌ಸ್ಪಾಟ್ ಪ್ರದೇಶಗಳಿಂದ ಬಂದ 56 ಮಂದಿ ಸೇರಿದಂತೆ ಒಟ್ಟು 77 ಮಂದಿಯ ಮಾದರಿಯನ್ನು ಸಂಗ್ರಹಿಸಲಾಗಿದೆ. ಇನ್ನೂ 103 ಮಂದಿಯ ವರದಿ ಬರಲು ಬಾಕಿ ಇದೆ. ಈವರೆಗೆ ಒಟ್ಟು 789 ಮಂದಿ ಡಿಸ್ಚಾರ್ಜ್ ಆಗಿದ್ದು, 235 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts