More

    31 ಮಂದಿಗೆ ಕರೊನಾ ಪಾಸಿಟಿವ್

    ಉಡುಪಿ: ಜಿಲ್ಲೆಯಲ್ಲಿ ಬುಧವಾರ 31 ಮಂದಿಗೆ ಕೋವಿಡ್-19 ದೃಢಪಟ್ಟಿದ್ದು, 236 ವರದಿ ನೆಗೆಟಿವ್ ಬಂದಿದೆ. ಒಟ್ಟು ಸೋಂಕಿತರ ಸಂಖ್ಯೆ 1421ಕ್ಕೆ ಏರಿಕೆಯಾಗಿದೆ.

    21 ಪುರುಷರು, 8 ಮಹಿಳೆಯರು, ಇಬ್ಬರು ಮಕ್ಕಳಿಗೆ ಪಾಸಿಟಿವ್ ಬಂದಿದೆ. ಇವರಲ್ಲಿ ಅಂತರ್‌ಜಿಲ್ಲಾ ಪ್ರಯಾಣದಿಂದ 9 ಮಂದಿಗೆ ಹಾಗೂ ಪಾಸಿಟಿವ್ ವ್ಯಕ್ತಿಗಳ ಸಂಪರ್ಕದಿಂದ 12 ಮಂದಿಗೆ ಸೋಂಕು ತಗುಲಿದೆ. ಮಹಾರಾಷ್ಟ್ರದಿಂದ ಆಗಮಿಸಿದ 7, ಅಬುಧಾಬಿಯಿಂದ ಬಂದ 1, ಮಸ್ಕತ್‌ನಿಂದ ಬಂದ ಇಬ್ಬರಿಗೆ ಪಾಸಿಟಿವ್ ಬಂದಿದೆ.

    20 ಮಂದಿ ಉಡುಪಿ, 7ಮಂದಿ ಕುಂದಾಪುರ, 4 ಮಂದಿ ಕಾರ್ಕಳ ತಾಲೂಕು ನಿವಾಸಿಗಳು. 7 ಮಂದಿ ಗುಣವಾಗಿದ್ದಾರೆ. ಕೋವಿಡ್ ಶಂಕಿತ 720 ಮಂದಿಯ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, 3080 ವರದಿ ನಿರೀಕ್ಷಿಸಲಾಗುತ್ತಿದೆ. ಇಲ್ಲಿವರೆಗೆ 1189 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 229 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಬ್ಯಾಂಕ್ ಸೀಲ್ ಡೌನ್: ಮಣಿಪಾಲದ ಬ್ಯಾಂಕೊಂದರ ಪ್ರಧಾನ ಕಚೆೇರಿ ಅಧಿಕಾರಿ ಬೆಂಗಳೂರಿಗೆ ತೆರಳಿದ್ದು, ಕರೊನಾ ಪಾಸಿಟಿವ್ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಿಂದ ಸೋಂಕಿಗೊಳಗಾಗಿದ್ದಾರೆ. ಬ್ಯಾಂಕ್ ಕಚೇರಿಯನ್ನು ಎರಡು ದಿನ ಸೀಲ್‌ಡೌನ್ ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts