More

    ಬಸ್ ಟಿಕೆಟ್ ದರ ಪರಿಷ್ಕರಣೆ, ಜಿಲ್ಲೆಯಲ್ಲಿ ಎಕ್ಸ್‌ಪ್ರೆಸ್, ಷಟಲ್ ಬಸ್ ಮತ್ತು ಸಿಟಿ ಬಸ್‌ಗಳಿಗೆ ಅನ್ವಯ

    ಉಡುಪಿ: ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಅ.13ರಿಂದ ಪೂರ್ವಾನ್ವಯವಾಗುವಂತೆ ಎಕ್ಸ್‌ಪ್ರೆಸ್, ಷಟಲ್ ಬಸ್ ಮತ್ತು ಸಿಟಿ ಬಸ್ ದರಗಳನ್ನು ಪರಿಷ್ಕರಿಸಿದೆ.

    ಎಕ್ಸ್‌ಪ್ರೆಸ್ ಹಾಗೂ ಷಟಲ್ ಬಸ್‌ಗಳ ಕನಿಷ್ಠ ದರ 8 ರೂಪಾಯಿಯನ್ನು 9 ರೂಪಾಯಿಗೆ ಏರಿಸಲಾಗಿದೆ. ನಗರ ಸಾರಿಗೆ 7 ರೂಪಾಯಿ ಕನಿಷ್ಠ ದರವನ್ನು 9 ರೂಪಾಯಿಗೆ ಏರಿಸಲಾಗಿದೆ. ಉಡುಪಿಯಿಂದ ಮಂಗಳೂರಿಗೆ ಎಕ್ಸ್‌ಪ್ರೆಸ್ ಪ್ರಯಾಣ ದರ 65 ರೂ.ನಿಂದ 80ಕ್ಕೆ ಪರಿಷ್ಕರಿಸಲಾಗಿದೆ. ಕೋವಿಡ್ ಸಂದರ್ಭ ಬಸ್‌ಗಳಲ್ಲಿ ನಿಯಮಿತ ಪ್ರಯಾಣಿಕರಿಗೆ ಅವಕಾಶ ಹಿನ್ನೆಲೆಯಲ್ಲಿ ಸರ್ಕಾರ ನೀಡಿದ ಅನುಮತಿಯಂತೆ ಪ್ರಸ್ತುತ ಎಲ್ಲ ವಿಧದ ಬಸ್‌ಗಳಲ್ಲಿ ಕನಿಷ್ಠ ದರ 10 ರೂಪಾಯಿ ಪಡೆಯಲಾಗುತ್ತಿತ್ತು.

    ಹೊಸ ದರಪಟ್ಟಿ ಪ್ರಕಾರ ಎಕ್ಸ್‌ಪ್ರೆಸ್, ಷಟಲ್ ಬಸ್‌ಗಳಿಗೆ 6.5 ಕಿಲೋ ಮೀಟರ್‌ವರೆಗೆ 9 ರೂ, 13 ಕಿ.ಮೀ. ವರೆಗೆ 16 ರೂ, 19.5 ಕಿ.ಮೀ.ವರೆಗೆ 22 ರೂ., 26 ಕಿ.ಮೀ.ವರೆಗೆ 29, 32.5 ಕಿ.ಮೀ.ವರೆಗೆ 35, 39 ಕಿ.ಮೀ.ವರೆಗೆ 42, 45.5 ಕಿ.ಮೀ.ವರೆಗೆ 48 ರೂ, 52 ಕಿ.ಮೀ.ವರೆಗೆ 55, 58 ಕಿ.ಮೀ.ವರೆಗೆ 61, 65 ಕಿ.ಮೀ. ವರೆಗೆ 68, 71.5 ಕಿ.ಮೀ. ವರೆಗೆ 74, 84.5 ಕಿ.ಮೀ. ವರೆಗೆ 87, 97.5 ಕಿ.ಮೀ.ವರೆಗೆ 100, 104 ಕಿ.ಮೀ.ವರೆಗೆ 107, 110.5 ಕಿ.ಮೀ.ವರೆಗೆ 113, 117 ಕಿ.ಮೀ.ವರೆಗೆ 120, 130 ಕಿ.ಮೀ.ವರೆಗೆ 133, 143 ಕಿ.ಮೀ. ವರೆಗೆ 146, 156 ಕಿ.ಮೀ.ವರೆಗೆ 159 ರೂಪಾಯಿ ದರ ನಿಗದಿ ಮಾಡಲಾಗಿದೆ.

    ಸಿಟಿ ಬಸ್ ಪ್ರಯಾಣ ದರ: 2.0 ಕಿ.ಮೀ.ವರೆಗೆ 7 ರೂ., 4ಕಿ.ಮೀ.ವರೆಗೆ 12, 6 ಕಿ.ಮೀ.ವರೆಗೆ 15, 8 ಕಿ.ಮೀ.ವರೆಗೆ 17, 10 ಕಿ.ಮೀ.ವರೆಗೆ 19, 12 ಕಿ.ಮೀ.ವರೆಗೆ 22, 14 ಕಿ.ಮೀ.ವರೆಗೆ 24, 16 ಕಿ.ಮೀ.ವರೆಗೆ 26, 18 ಕಿ.ಮೀ.ವರೆಗೆ 29, 20 ಕಿ.ಮೀ.ವರೆಗೆ 31, 22 ಕಿ.ಮೀ. ವರೆಗೆ 33, 24 ಕಿ.ಮೀ.ವರೆಗೆ 35, 26 ಕಿ.ಮೀ.ವರೆಗೆ 38 ರೂ.ದರ ನಿಗದಿ ಮಾಡಲಾಗಿದೆ.
    ಜಿಲ್ಲೆಯಾದ್ಯಂತ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳಲ್ಲಿ ಇಲೆಕ್ಟ್ರಾನಿಕ್ ಟಿಕೆಟ್ ಮಷಿನ್ ಮೂಲಕವೇ ಟಿಕೆಟ್ ವಿತರಿಸಲು ಸೂಚನೆ ನೀಡಲಾಗಿದ್ದು, ತಪ್ಪಿದರೆ ಪರವಾನಗಿ ರದ್ದು ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆ.ಪಿ ಗಂಗಾಧರ ತಿಳಿಸಿದ್ದಾರೆ.

    ರಾಜ್ಯ ಸರ್ಕಾರದ ಅಧಿಸೂಚನೆ ಪ್ರಕಾರ ಹಿಂದಿನ ದರಕ್ಕಿಂತ 3 ರೂಪಾಯಿ ಹೆಚ್ಚಿಸಲು ಅವಕಾಶವಿದೆ. ಆದರೆ ಜಿಲ್ಲಾಡಳಿತ ರಾಜ್ಯ ಸರ್ಕಾರ ವಿಧಿಸಿದ ಪರಿಷ್ಕೃತ ದರ ಪಟ್ಟಿ ನಿಯಮಗಳನ್ನು ಅಷ್ಟರ ಮಟ್ಟಿಗೆ ಏರಿಸಿಲ್ಲ. ಇದು ನಿಯಮ ಉಲ್ಲಂಘಿಸಿದೆ. ಈ ಬಗ್ಗೆ ಕೋರ್ಟ್ ಮೊರೆ ಹೋಗಲಾಗುವುದು.
    -ಕುಯಿಲಾಡಿ ಸುರೇಶ್ ನಾಯಕ್, ಅಧ್ಯಕ್ಷ, ಸಿಟಿ ಬಸ್ ಮಾಲೀಕರ ಸಂಘ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts