More

    ಎಚ್ಚರ, ಉಡ್ತಾ ಪಂಜಾಬ್ ಥರಾ ಆಗಲಿದೆ ಕರ್ನಾಟಕ!

    ಬೆಂಗಳೂರು: ಮಾದಕವಸ್ತು (ಡ್ರಗ್ಸ್) ತಯಾರು ಮಾಡುವವರು, ಸರಬರಾಜು ಮಾಡುವವರು, ಕಳ್ಳಸಾಗಾಣಿಕೆ ಮಾಡುವವರಿಗೆ ಜೀವಾವಧಿ ಶಿಕ್ಷೆ ನೀಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆಗ್ರಹಿಸಿದ್ದಾರೆ.

    ಇದೇ ತಿಂಗಳ 21ರಿಂದ ವಿಧಾನಸಭೆ ಅಧಿವೇಶನ ನಡೆಯಲಿದೆ. ಡ್ರಗ್ಸ್ ಪಿಡುಗನ್ನು ಕಾಂಗ್ರೆಸ್ ಪ್ರಸ್ತಾಪಿಸಲಿದೆ. ಸರ್ಕಾರ ವಿವಾದಾತ್ಮಕ ಕಾಯ್ದೆ ಜಾರಿಗೆ ತರುವುದನ್ನು ಬಿಟ್ಟು, ಡ್ರಗ್ಸ್ ಪಿಡುಗಿನ ಬಗ್ಗೆ ವಿಶೇಷ ಚರ್ಚೆಗೆ ಅವಕಾಶ ಕೊಡಲಿ. ಕಾಯ್ದೆಯನ್ನು ಮತ್ತಷ್ಟು ಬಲಗೊಳಿಸುವ ಬಗ್ಗೆ ನಿರ್ಧರಿಸಲಿ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು. ಇದನ್ನೂ ಓದಿರಿ ಅಭಿವೃದ್ಧಿ ಕಾರ್ಯಕ್ಕಾಗಿ 33000 ಕೋಟಿ ರೂ. ಸಾಲ ಪಡೆಯಲಿದೆ ರಾಜ್ಯ ಸರ್ಕಾರ

    ಎಚ್ಚರ, ಉಡ್ತಾ ಪಂಜಾಬ್ ಥರಾ ಆಗಲಿದೆ ಕರ್ನಾಟಕ!ಮಾದಕ ವಸ್ತು ಪೂರೈಕೆದಾರರಿಗೆ ಕನಿಷ್ಠ 20 ವರ್ಷ ಜೈಲು ಶಿಕ್ಷೆ ನೀಡಬೇಕು, ವ್ಯಸನಿಗಳನ್ನು ಸರಿಪಡಿಸುವ ಕೇಂದ್ರಗಳನ್ನ ತೆರೆಯಬೇಕು. ರಾಜ್ಯದಲ್ಲಿ ಡ್ರಗ್ಸ್ ಹಾವಳಿಯನ್ನು ಮಟ್ಟ ಹಾಕದೆ ಹೋದರೆ ಕರ್ನಾಟಕ ಮತ್ತೊಂದು ಉಡ್ತಾ ಪಂಜಾಬ್ ಆಗಲಿದೆ. ಡ್ರಗ್ಸ್ ಹಾವಳಿ ತಡೆಯಲು ವಿಶೇಷ ತನಿಖಾ ತಂಡ ರಚಿಸಬೇಕು ಎಂದು ಆಗ್ರಹಿಸಿದರು.

    ಡ್ರಗ್ಸ್ ಪಿಡುಗಿನಿಂದ ನಮ್ಮ ಯುವಕರು ಹಾಳಾಗುತ್ತಿದ್ದಾರೆ, ಇದರಿಂದ ಅವರ ಬದುಕು ಕಗ್ಗತ್ತಲಾಗಿದೆ. ಈ ವಿಚಾರದಲ್ಲಿ ಪಕ್ಷಾತೀತವಾಗಿ ಕೈಜೋಡಿಸಬೇಕಿದೆ. ವಿಶೇಷವಾಗಿ ಬೆಂಗಳೂರಿನಲ್ಲಿ ಡ್ರಗ್ಸ್ ಮಾಫಿಯಾ ಹೆಚ್ಚಾಗಿದೆ, ರೇವ್ ಪಾರ್ಟಿಗಳು ಮುಂದುವರಿಯುತ್ತಿವೆ ಎಂದು ಹೇಳಿದರು.

    ‘ನಾವಿಬ್ಬರೂ ಒಟ್ಟಿಗೆ ಡ್ರಗ್ಸ್​ ಸೇವಿಸುತ್ತಿದ್ದೆವು, ಬಿಎಂಡಬ್ಲ್ಯು ಕಾರಿನಲ್ಲೇ ಹೋಟೆಲ್​ಗೆ ಕರೆದೊಯ್ಯುತ್ತಿದ್ದೆ…’

    ಐಂದ್ರಿತಾ ರೇ-ದಿಗಂತ್​ಗೆ ಸಿಸಿಬಿ ನೋಟಿಸ್

    ಡ್ರಗ್ಸ್ ಆರೋಪಿ ಆದಿತ್ಯ ಆಳ್ವನ ‘ಹೌಸ್​ ಆಫ್​ ಲೈಫ್’ ನೋಡಿದ್ರೆ ಬೆಚ್ಚಿಬೀಳ್ತೀರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts