More

    ಬಡವರಿಗೆ ಸಾಮೂಹಿಕ ವಿವಾಹ ಅನುಕೂಲ

    ಹರಪನಹಳ್ಳಿ: ತಾಲೂಕಿನ ಉಚ್ಚಂಗಿದುರ್ಗದ ಬೆಟ್ಟದ ಮೇಲಿರುವ ಉತ್ಸವಾಂಬ ದೇವಾಲಯದಲ್ಲಿ ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಬುಧವಾರ ಸಾಮೂಹಿಕ ವಿವಾಹ ಜರುಗಿತು.

    ಧಾರ್ಮಿಕ ದತ್ತಿ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಮಲ್ಲಪ್ಪ ಮಾತನಾಡಿ, ರಾಜ್ಯವ್ಯಾಪಿ ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಆಯ್ದ 205 ದೇವಸ್ಥಾನಗಳಲ್ಲಿ ಹುಂಡಿ ಹಣದ ಸದ್ಬಳಕೆೆಗಾಗಿ ರಾಜ್ಯ ಸರ್ಕಾರ ಸರಳ ಸಾಮೂಹಿಕ ವಿವಾಹ ಆಯೋಜಿಸಿದೆ ಎಂದರು. ಇಂತಹ ವಿವಾಹ ಬಡ ಕುಟುಂಬಗಳಿಗೆ ವರದಾನವಾಗಲಿದೆ. ಒಂದು ಜೋಡಿಗೆ 40 ಸಾವಿರ ರೂ. ಮೌಲ್ಯದ ಎರಡು ಬಂಗಾರದ ಗುಂಡು, ಒಂದು ತಾಳಿ, ವಸಗಳನ್ನು ಖರೀದಿಸಲು 10 ಸಾವಿರ ರೂ. ಹಾಗೂ ವರನಿಗೆ 5 ಸಾವಿರ ರೂ. ಸಹಾಯಧನ ನೀಡಲಾಗಿದೆ ಎಂದರು.

    ಈ ಯೋಜನೆ ಕಳೆದ 3 ವರ್ಷಗಳಿಂದ ಜಾರಿಯಲ್ಲಿದ್ದರೂ ಕರೋನಾದಿಂದಾಗಿ 2 ವರ್ಷಗಳಿಂದ ಸಾಮೂಹಿಕ ವಿವಾಹಗಳ ನಡೆದಿರಲಿಲ್ಲ. ಈಗ ಮತ್ತೆ ಆರಂಭಿಸಲಾಗಿದ್ದು, ಈ ಬಾರಿ ‘ಸಪ್ತಪದಿ’ ಕಾರ್ಯಕ್ರಮದಡಿ 4 ಜೋಡಿ ದಾಂಪತ್ಯಕ್ಕೆ ಕಾಲಿಟ್ಟವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts