More

    ಮೂಲ ಪತ್ತೆ ಮಾಡದಿರುವುದು ಆತಂಕ: ಶಾಸಕ ಯು.ಟಿ.ಖಾದರ್ ಕಳವಳ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಿನ ಪರಿಸ್ಥಿತಿಯೇ ಮುಂದುವರಿದರೆ ಇನ್ನೊಂದು ತಿಂಗಳಲ್ಲಿ ಪರಿಸ್ಥಿತಿ ಅತ್ಯಂತ ಗಂಭೀರವಾಗಲಿದೆ. ಇನ್ನೂ ಆಸ್ಪತ್ರೆಯ ಕರೊನಾ ಮೂಲವನ್ನೇ ಪತ್ತೆ ಮಾಡಲಾಗದಿರುವುದು ಆತಂಕದ ವಿಚಾರ ಎಂದು ಶಾಸಕ ಯು.ಟಿ.ಖಾದರ್ ಹೇಳಿದರು.

    ಶನಿವಾರ ಸುದ್ದಿಗೋಷ್ಠಿಯಲ್ಲಿ ಕಳವಳ ವ್ಯಕ್ತಪಡಿಸಿದ ಅವರು, ಜಿಲ್ಲೆಯಲ್ಲಿ 34 ಪಾಸಿಟಿವ್ ಪ್ರಕರಣ ಇರುವಾಗಲೇ 5ಮಂದಿ ಮೃತಪಟ್ಟಿರುವುದು ನಿಜಕ್ಕೂ ದಕ್ಷಿಣ ಕನ್ನಡ ಜಿಲ್ಲಾಡಳಿತದ ವೈಲ್ಯವನ್ನು ತೋರಿಸುತ್ತದೆ. ಜಿಲ್ಲಾಡಳಿತ ಇದನ್ನು ಗಂಭೀರವಾಗಿ ಪರಿಗಣಿಸಬೇಕಿತ್ತು. ಐಸಿಎಂಆರ್‌ನಿಂದ ವಿವರಣೆ ಪಡೆದುಕೊಳ್ಳಬೇಕಿತ್ತು ಎಂದರು.
    ಲಾಕ್‌ಡೌನ್ ಅವಧಿ, ವಲಸೆ ಕಾರ್ಮಿಕರು, ವಿದೇಶದಿಂದ ಆಗಮನ, ಕ್ವಾರಂಟೈನ್, ಮಾರ್ಕೆಟ್ ಶಿಫ್ಟ್ ವಿಷಯದಲ್ಲಿ ಜಿಲ್ಲಾಡಳಿತ ಗೊಂದಲದ ತೀರ್ಮಾನಗಳನ್ನೇ ತೆಗೆದುಕೊಂಡಿದೆ. ಜಿಲ್ಲಾ ಉಸ್ತುವಾರಿ ಸಚಿವರ ಆದೇಶ ಪಾಲಿಸಲು ಕೆಲವರು ಬಿಡುವುದಿಲ್ಲ. ಸರ್ಕಾರ ಗಳು ಪತ್ರಕರ್ತರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ, ಗ್ರಾಮ ಸಹಾಯಕಿಯರಿಗೆ, ಬಸ್ ಸಿಬ್ಬಂದಿ, ಟೈಲರ್‌ಗಳಿಗೆ, ಛಾಯಾಗ್ರಾ ಹಕರಿಗೆ, ಲ್ಯಾಬ್ ಟೆಕ್ನಿಷಿಯನ್‌ಗಳಿಗೆ ಪ್ಯಾಕೇಜ್ ಘೋಷಣೆ ಮಾಡಲಿ ಎಂದರು.

    ಕರಾವಳಿಯ ಲಕ್ಷಾಂತರ ಮಂದಿ ವಿದೇಶದಲ್ಲಿದ್ದಾರೆ. ಆದುದರಿಂದ ಕೇಂದ್ರ ಸರ್ಕಾರ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಕಡೆಗಣಿಸುವುದು ಸರಿಯಲ್ಲ. ಕೇರಳಕ್ಕೆ 25ಕ್ಕೂ ಅಧಿಕ ವಿಮಾನ ಬರುತ್ತಿದೆ, ಮಂಗಳೂರಿಗೆ ಕೇವಲ 2 ವಿಮಾನ ಬರುತ್ತಿರುವುದು ಖೇದಕರ ಎಂದರು. ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ದಕ್ಷಿಣ ಕನ್ನಡ ಕೋವಿಡ್ ಟಾಸ್ಕ್‌ಪೋಸ್ ಅಧ್ಯಕ್ಷ ಶುಭೋದಯ ಆಳ್ವ, ದ.ಕ. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸದಾಶಿವ ಉಳ್ಳಾಲ್, ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್, ಟಿ.ಕೆ.ಸುಧೀರ್ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts