More

    ಮಹಾವೀರ ಸಹಕಾರಿಗೆ 1.5 ಕೋಟಿ ರೂ.ಲಾಭ

    ಹುಕ್ಕೇರಿ: ಪಟ್ಟಣದ ಮಹಾವೀರ ಮಲ್ಟಿಪರ್ಪಜ್ ಸೌಹಾರ್ದ ಸಹಕಾರಿಯು ಪ್ರಸಕ್ತ ಆರ್ಥಿಕ ವರ್ಷದಲ್ಲಿ 1.5 ಕೋಟಿ ರೂ. ಲಾಭ ಗಳಿಸಿದೆ ಎಂದು ಅಧ್ಯಕ್ಷ ಮಹಾವೀರ ನಿಲಜಗಿ ತಿಳಿಸಿದ್ದಾರೆ.

    ಗುರುವಾರ ಸಹಕಾರಿಯ ಪ್ರಧಾನ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸಂಸ್ಥಾಪಕ ಜಿ.ವಸಂತ ನಿಲಜಗಿ ಅವರ ಅಪೇಕ್ಷೆಯಂತೆ ಬಡ ಮತ್ತು ಮಧ್ಯಮ ವರ್ಗದವರ ಆರ್ಥಿಕ ಅಭ್ಯುದಯಕ್ಕೆ 20 ವರ್ಷಗಳ ಹಿಂದೆ ಪ್ರಾರಂಭಿಸಲಾದ ಸಂಸ್ಥೆಯು ಸದ್ಯ 11 ಶಾಖೆಗಳನ್ನು ಹೊಂದಿದ್ದು, ಶೀಘ್ರ ಗೋಕಾಕ ತಾಲೂಕಿನ ಕೊಣ್ಣೂರಿನಲ್ಲಿ ನೂತನ ಶಾಖೆ ಪ್ರಾರಂಭಿಸಿ ಜನರಿಗೆ ಆರ್ಥಿಕ ಸೌಲಭ್ಯ ಕಲ್ಪಿಸಲಾಗುವುದು ಎಂದರು. ಮುಖ್ಯ ಕಾರ್ಯ ನಿರ್ವಾಹಕ ರಾಜೇಂದ್ರ ಪಾಟೀಲ ಆರ್ಥಿಕ ಪ್ರಗತಿ ಕುರಿತು ವಿವರಿಸಿದರು.

    ಉಪಾಧ್ಯಕ್ಷ ಕಿರಣ ಸೊಲ್ಲಾಪುರೆ, ಸುಕುಮಾರ ಖತಗಲ್ಲಿ, ಪ್ರಜ್ವಲ ನಿಲಜಗಿ, ಮಹಾವೀರ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಸಂಜಯ ನಿಲಜಗಿ, ಶಾಖಾ ಕಾರ್ಯದರ್ಶಿ ಸಂತೋಷಸಿಂಗ ರಜಫುತ ಇದ್ದರು.

    ನನ್ನ 20 ವರ್ಷಗಳ ಅಧ್ಯಕ್ಷತೆಯಲ್ಲಿ ಸಹಕಾರಿಯು 103.56 ಕೋಟಿ ರೂ. ಠೇವು, 86.81 ಕೋಟಿ ರೂ. ಸಾಲ ನೀಡುವ ಮೂಲಕ ವಾರ್ಷಿಕ 330 ಕೋಟಿ ರೂ. ವಹಿವಾಟು ನಡೆಸಿದೆ. ಸಾರ್ವಜನಿಕರು ಹಾಗೂ ಗ್ರಾಹಕರಿಗೆ ಸಹಕಾರಿಯಿಂದ ಹೆಚ್ಚಿನ ಸೌಲಭ್ಯ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
    | ಮಹಾವೀರ ನಿಲಜಗಿ ಅಧ್ಯಕ್ಷರು, ಮಹಾವೀರ ಸೊಸೈಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts