More

    ತಮಿಳುನಾಡಿನಲ್ಲಿ ಆನ್​ಲೈನ್ ರಮ್ಮಿ, ಪೋಕರ್ ಆಡಿದರೆ ಎರಡು ವರ್ಷ ಜೈಲು ಶಿಕ್ಷೆ

    ಚೆನ್ನೈ: ರಮ್ಮಿ ಮತ್ತು ಪೋಕರ್​ನಂಥ ಆನ್​ಲೈನ್ ಜೂಜಾಟಗಳಲ್ಲಿ ತೊಡಗಿದವರಿಗೆ ಎರಡು ವರ್ಷದವರೆಗಿನ ಜೈಲು ಶಿಕ್ಷೆ ವಿಧಿಸುವ ಕಾನೂನು ತರಲು ತಮಿಳುನಾಡು ಸರ್ಕಾರ ಮುಂದಾಗಿದೆ. ಕಂಪ್ಯೂಟರ್ ಅಥವಾ ಮೊಬೈಲ್ ಫೋನ್​ ಬಳಸಿ ಜೂಜು ಅಥವಾ ಬೆಟ್ಟಿಂಗ್​ ಉಳ್ಳ ಆನ್​ಲೈನ್ ಗೇಮ್ಸ್ ಆಡುವುದನ್ನು ನಿಷೇಧಿಸುವುದಕ್ಕೆ ವಿವಿಧ ಕಾನೂನುಗಳಿಗೆ ತಿದ್ದುಪಡಿ ತರುವ ವಿಧೇಯಕವನ್ನು ರಾಜ್ಯ ವಿಧಾನಸಭೆಯಲ್ಲಿ ಗುರುವಾರ ಮಂಡಿಸಲಾಗಿದೆ.

    ಈ ತಿದ್ದುಪಡಿ ವಿಧೇಯಕವು ಅಂಗೀಕೃತವಾದಲ್ಲಿ ಆನ್​ಲೈನ್​ ಮಾಧ್ಯಮದಲ್ಲಿ ವೇಗರ್ ಅಥವಾ ಬೆಟ್​ ಹೊಂದಿರುವ ಯಾವುದೇ ಆಟಗಳನ್ನು ಆಡುವುದು ಅಪರಾಧವಾಗಲಿದೆ. ಈ ರೀತಿಯ ಜೂಜಾಟಗಳನ್ನು ಆಯೋಜಿಸುವುದು ಕೂಡ ಅಪರಾಧವಾಗಲಿದ್ದು, ಯಾವುದಾದರೂ ಕಂಪೆನಿಯು ಈ ಕೃತ್ಯದಲ್ಲಿ ತೊಡಗಿದಲ್ಲಿ ಕಂಪೆನಿ ಮಾಲೀಕರೊಂದಿಗೆ ಜವಾಬ್ದಾರಿಯುತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಕೂಡ ಶಿಕ್ಷೆಗೆ ಗುರಿಯಾಗಲಿದ್ದಾರೆ. ತಪ್ಪಿತಸ್ಥರಿಗೆ ಎರಡು ವರ್ಷದವರೆಗಿನ ಜೈಲು ಶಿಕ್ಷೆ ಅಥವಾ ಹತ್ತು ಸಾವಿರ ರೂಪಾಯಿವರೆಗಿನ ದಂಡ ಅಥವಾ ಈ ಎರಡೂ ಶಿಕ್ಷೆಗಳನ್ನು ವಿಧಿಸುವ ಪ್ರಸ್ತಾವನೆ ವಿಧೇಯಕದಲ್ಲಿದೆ.

    ಇದನ್ನೂ ಓದಿ: ಒಂದೇ ಗಂಟೆಯಲ್ಲಿ ₹365 ಕೋಟಿ ದುಡಿಯುವ ಆಸೆಯೆ? ಹಾಗಿದ್ದರೆ ಇಲ್ಲಿದೆ ನಿಮಗೊಂದು ಚಾಲೆಂಜ್​!

    “ಇತ್ತೀಚೆಗೆ ರಮ್ಮಿ, ಪೋಕರ್ ಇತ್ಯಾದಿ ಆಟಗಳನ್ನು ಕಂಪ್ಯೂಟರ್ ಅಥವಾ ಮೊಬೈಲ್ ಫೋನ್ ಬಳಸಿ ದುಡ್ಡಿಗಾಗಿ ಇಲ್ಲ ಇತರ ಸ್ಟೇಕ್ಸ್​ಗಾಗಿ ಆಡುತ್ತಿರುವುದು ಹೆಚ್ಚಿದೆ. ಇದರಿಂದ ಮುಗ್ಧ ಜನರು ವಂಚನೆಗೊಳಗಾಗಿದ್ದು, ಆತ್ಮಹತ್ಯೆಯ ಘಟನೆಗಳು ಕೂಡ ವರದಿಯಾಗಿವೆ. ಆದ್ದರಿಂದ ಆನ್​ಲೈನ್​ ಜೂಜಾಟದ ದುಷ್ಪರಿಣಾಮಗಳಿಂದ ಜನರನ್ನು ಕಾಪಾಡಲು ಕಾನೂನು ಅವಶ್ಯಕವಾಗಿದೆ” ಎಂದು ವಿಧೇಯಕದ ಆಶಯಗಳಲ್ಲಿ ವಿವರಿಸಲಾಗಿದೆ.

    ಈ ಮುನ್ನ ತಮಿಳುನಾಡು ರಾಜ್ಯ ಸರ್ಕಾರವು 2020ರ ನವೆಂಬರ್ ​ತಿಂಗಳಲ್ಲಿ ಆನ್​ಲೈನ್ ಜೂಜನ್ನು ನಿಷೇಧಿಸಿ ಸುಗ್ರೀವಾಜ್ನೆ ಜಾರಿಗೊಳಿಸಿತ್ತು. ಅದರ ಸ್ಥಾನದಲ್ಲಿ, ತಮಿಳುನಾಡು ಗೇಮಿಂಗ್ ಆ್ಯಕ್ಟ್​ – 1930, ಚೆನ್ನೈ ಸಿಟಿ ಪೊಲೀಸ್ ಆ್ಯಕ್ಟ್ -1888 ಮತ್ತು ತಮಿಳುನಾಡು ಜಿಲ್ಲಾ ಪೊಲೀಸ್ ಕಾಯ್ದೆ – 1859 ಇವುಗಳಿಗೆ ಕೆಲವು ಬದಲಾವಣೆಗಳನ್ನು ಮಾಡಿ ಕಾನೂನು ಜಾರಿಗೊಳಿಸಲು ಈ ಮೂಲಕ ಸರ್ಕಾರ ಮುಂದಾಗಿದೆ.(ಏಜೆನ್ಸೀಸ್)

    ಕರೊನಾ ಲಸಿಕೆ ಪಡೆಯಲು ಆರೋಗ್ಯ ಸಿಬ್ಬಂದಿ ಹಿಂದೇಟು: ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!

    ಅತ್ತ ಅಮೆರಿಕದಲ್ಲಿ ಟೆಕ್ಕಿ ಪತಿ ವಾಸ: ಇತ್ತ ಮಗಳ ಜತೆ ಮಹಿಳೆ ನೇಣಿಗೆ ಶರಣಾಗಿದ್ದೇಕೆ?

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts