More

    ಗಲ್ಲು ಶಿಕ್ಷೆಗೆ ಗುರಿಯಾದವನಿಗೆ ಎರಡು ವರ್ಷ ಸಜೆ!

    ಕೊಳ್ಳೇಗಾಲ: ಪಟ್ಟಣದ ಭೀಮನಗರದ ವಿದ್ಯಾರ್ಥಿನಿ ಎಂ.ಎಸ್. ಕೃತಿಕಾದೇವಿ ಹತ್ಯೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ತಾಲೂಕಿನ ದೊಡ್ಡಿಂದುವಾಡಿ ಗ್ರಾಮದ ಎನ್. ಪ್ರಮೋದ್‌ಕುಮಾರ್‌ಗೆ ಹಣಕಾಸು ಸಂಸ್ಥೆಗೆ ಮೋಸವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯ ಬುಧವಾರ 2 ವರ್ಷ ಸಜೆ ಹಾಗೂ 2 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

    ಮುತ್ತೂಟ್ ಫೈನಾನ್ಸ್ ವ್ಯವಸ್ಥಾಪಕ ತುಳಸಿರಾಂ ಅವರು 2015ರ ಡಿಸೆಂಬರ್ 8ರಂದು ಪಟ್ಟಣ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದ ದೂರಿನ ವಿಚಾರಣೆ ನಡೆಸಿದ ನ್ಯಾಯಾಧೀಶ ಎಸ್.ಜೆ.ಕೃಷ್ಣ ಅವರು ಸಹಾಯಕ ಸರ್ಕಾರಿ ಅಭಿಯೋಜಕಿ ರೂಪಾಲಕ್ಷ್ಮೀ ಅವರ ವಾದ ಆಲಿಸಿದ ನಂತರ ಪ್ರಮೋದ್‌ಕುಮಾರ್ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 2 ವರ್ಷ ಸಾಧಾರಣ ಸಜೆ ಹಾಗೂ 2 ಸಾವಿರ ರೂ. ದಂಡ, ದಂಡ ಕಟ್ಟದಿದ್ದರೆ ಹೆಚ್ಚುವರಿಯಾಗಿ 3 ತಿಂಗಳ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

    ಇದನ್ನೂ ಓದಿ: ಮಗು ಪಡೆಯಲು 9 ವರ್ಷ ಕಾದಿದ್ದ ದಂಪತಿಗೆ ಶಾಕ್​: ಅವಳಿ ಮಕ್ಕಳನ್ನು ಕೊಂದ ಸಾಕು ನಾಯಿಗಳು!

    2014ರ ಡಿ. 21ರಂದು ಪ್ರಮೋದ್‌ಕುಮಾರ್, ತನ್ನ ಪ್ರೇಯಸಿ ಎಂ.ಎಸ್. ಕೃತಿಕಾದೇವಿಯನ್ನು ಮೈಸೂರಿನ ರವೀಂದ್ರನಾಥ ಠಾಗೂರ್‌ನಗರದ ನಿರ್ಜನ ಪ್ರದೇಶದಲ್ಲಿ ಹತ್ಯೆ ಮಾಡಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದ. ಕೃತಿಕಾದೇವಿಯ ಹತ್ಯೆಗೂ ಮೊದಲು ಆಕೆಗೆ ಸೇರಿದ 105 ಗ್ರಾಂ. ಚಿನ್ನಾಭರಣವನ್ನು ಪಟ್ಟಣದ ಮುತ್ತೂಟ್ ಫೈನಾನ್ಸ್‌ನಲ್ಲಿ ಗಿರವಿಯಿಟ್ಟು 1.81 ಲಕ್ಷ ರೂ. ಪಡೆದಿರುವ ಬಗ್ಗೆ ವಿಚಾರಣೆ ವೇಳೆ ಪೊಲೀಸರ ಮುಂದೆ ಒಪ್ಪಿಕೊಂಡಿದ್ದ. ನಂತರ ಪೊಲೀಸರು, ಮುತ್ತೂಟ್ ಫೈನಾನ್ಸ್‌ಗೆ ತೆರಳಿ ಅಲ್ಲಿ ಗಿರವಿ ಇಟ್ಟಿದ್ದ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದರು. ಬಳಿಕ ಮುತ್ತೂಟ್ ಫೈನಾನ್ಸ್ ವ್ಯವಸ್ಥಾಪಕರು ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿ, ಪ್ರಮೋದ್‌ಕುಮಾರ್ ಫೈನಾನ್ಸ್‌ಗೆ ಮೋಸ ಮಾಡಿದ್ದಾನೆ. ಆತನಿಂದ ಸಂಸ್ಥೆಗೆ ಬರಬೇಕಾದ ಹಣವನ್ನು ಕೊಡಿಸಿಕೊಡುವಂತೆ ಮನವಿ ಮಾಡಿದ್ದರು. ಪ್ರಕರಣ ದಾಖಲಿಸಿದ್ದ ಅಂದಿನ ಪಿಎಸ್‌ಐ ಆನಂದ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಈ ನಡುವೆ, ಮೈಸೂರಿನ ನ್ಯಾಯಾಲಯ ಕೆಲ ತಿಂಗಳ ಹಿಂದೆ ಕೃತಿಕಾದೇವಿಯ ಹತ್ಯೆ ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದು, ಸದ್ಯ ಆತನನ್ನು ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಇರಿಸಲಾಗಿದೆ.

    ಶಾಲಾ-ಕಾಲೇಜು ಆರಂಭ ಯಾವಾಗ?: ಶಿಕ್ಷಣ ಸಚಿವ ಸುರೇಶ್​ ಕುಮಾರ್​ ಹೇಳಿದ್ದು ಹೀಗೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts