More

    ವಿವಾಹಿತೆಯೊಂದಿಗೆ ಯುವತಿ ಆತ್ಮಹತ್ಯೆ: ಸಮಾಜ ಒಪ್ಪದ ಸಂಬಂಧವೇ ಇಬ್ಬರಿಗೂ ಮುಳುವಾಯಿತಾ?​

    ಚೆನ್ನೈ: ತಮಿಳುನಾಡಿನ ನಮಕ್ಕಲ್​ ಮೂಲದ ಮಹಿಳೆಯರಿಬ್ಬರು ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದು, ಯಾವುದೇ ಡೆತ್​ನೋಟ್​ ಪತ್ತೆಯಾಗದಿದ್ದರೂ ಇಬ್ಬರ ನಡುವಿನ ಸಂಬಂಧದ ಮೇಲೆ ಸಂಶಯ ವ್ಯಕ್ತವಾಗಿದೆ. ಎಲ್ಲಿ ಬೇರೆ ಬೇರೆಯಾಗುತ್ತೇವೆ ಎಂಬ ಭಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿಬಹುದೆಂದು ಶಂಕಿಸಲಾಗಿದ್ದು, ಪಾಲಕರ ಹೇಳಿಕೆ ಅದಕ್ಕೆ ಪುಷ್ಟಿ ನೀಡುವಂತಿದೆ.

    ಜ್ಯೋತಿ (23) ಮತ್ತು ಪ್ರಿಯಾ (20) ಮೃತ ದುರ್ದೈವಿಗಳು. ಇಬ್ಬರ ನಡುವೆ ರೊಮ್ಯಾಂಟಿಕ್​ ಸಂಬಂಧ ಇತ್ತೆಂದು ನಂಬಲಾಗಿದೆ.

    ಇದನ್ನೂ ಓದಿ: 13 ವರ್ಷದ ಬಾಲಕನನ್ನು ಹೆಣ್ಣು ಮಗುವಿನ ತಂದೆಯಾಗಿ ಮಾಡಿದ ವಿವಾಹಿತೆಗೆ ಸಿಕ್ಕ ಶಿಕ್ಷೆ ಏನು ಗೊತ್ತಾ?

    ಅಂದಹಾಗೆ ಜ್ಯೋತಿ ವಿವಾಹಿತೆಯಾಗಿದ್ದು, ಗಂಡನಿಂದ ಪ್ರತ್ಯೇಕವಾಗಿ ಅಜ್ಜಿಯೊಂದಿಗೆ ವಾಸಿಸುತ್ತಿದ್ದಳು. ಅವಳಿಗೆ ಎರಡು ವರ್ಷದ ಮಗು ಸಹ ಇತ್ತು. ಪತಿಯಿಂದ ದೂರಾದ ಬಳಿಕ ಮಗ್ಗದ ಕೆಲಸಕ್ಕೆ ಸೇರಿದ್ದಳು. ಪ್ರಿಯಾ ಕೊಟ್ಟುಪಾಳ್ಯಂನಲ್ಲಿರುವ ತಮ್ಮ ಕುಟುಂಬದೊಂದಿಗೆ ವಾಸವಿದ್ದಳು. ಸುಮಾರು 1 ವರ್ಷದಿಂದ ಮಗ್ಗದ ಕೆಲಸ ಮಾಡುತ್ತಿದ್ದಳು.

    ಜ್ಯೋತಿ ಮತ್ತು ಪ್ರಿಯಾ ಪೆರಿಯಾಮನಲಿ ಏರಿಯಾದಲ್ಲಿ ಕೆಲ ತಿಂಗಳ ಹಿಂದೆ ಒಟ್ಟಿಗೆ ಮಗ್ಗದ ಕೆಲಸ ಮಾಡುತ್ತಿದ್ದರು. ಆದರೆ, ಅವರ ಸ್ನೇಹತ್ವದ ಬಗ್ಗೆ ಸಂಶಯ ಬಂದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ಮಗ್ಗದ ಮಾಲೀಕ ಎಚ್ಚರಿಕೆ ನೀಡಿದ್ದರು. ನಂತರ ಅವರಿಬ್ಬರ ಕುರಿತು ಅನೇಕ ವದಂತಿಗಳು ಹರಿದಾಡ ತೊಡಗಿತು. ಇದರಿಂದ ಎಚ್ಚೆತ್ತ ಪ್ರಿಯಾ ಪಾಲಕರು ಜ್ಯೋತಿಯಿಂದ ದೂರ ಇರುವಂತೆ ಹೇಳಿದ್ದರು. ಅಲ್ಲದೆ, ಜ್ಯೋತಿ ಮದುವೆಯಾಗಿ ಗಂಡನಿಂದ ದೂರವಿದ್ದುದ್ದರಿಂದ ಸ್ನೇಹ ಬೆಳೆಸಲು ನಿರಾಕರಿಸಿದ್ದರು.

    ಇದನ್ನೂ ಓದಿ: ಮಹಿಳೆಯ ಶವದ ಜತೆ ಸಾರ್ವಜನಿಕ ಸ್ಥಳದಲ್ಲಿ ಸಂಭೋಗ: ಆರೋಪಿ ಬಂಧಿಸಿದ ಅಧಿಕಾರಿಗಳಿಗೆ ಕಾದಿತ್ತು ಶಾಕ್​!

    ಊರೆಲ್ಲಾ ವದಂತಿ ಹಬ್ಬುತ್ತಿದ್ದಂತೆ ಪ್ರಿಯಾಗೆ ಮದುವೆ ಮಾಡಲು ಕುಟುಂಬ ನಿರ್ಧರಿಸಿ, ರಾಶಿಪುರಂನಲ್ಲಿ ವರನನ್ನು ಗೊತ್ತುಪಡಿಸಿದ್ದರು. ಮೇ 27ಕ್ಕೆ ಮದುವೆ ನಡೆಯಬೇಕಿತ್ತು. ಆದರೆ ಇಲ್ಲಿ ನಡೆದಿದ್ದೇ ಬೇರೆ. ಪ್ರಿಯಾ ಶನಿವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಜ್ಯೋತಿ ಮನೆಗೆ ಭೇಟಿ ನೀಡಿದ್ದಳು. ತುಂಬಾ ಹೊತ್ತು ಮನೆಗೆ ಬರದಿದ್ದನ್ನು ನೋಡಿ ಪ್ರಿಯಾ ಸಹೋದರ ಜ್ಯೋತಿ ಮನೆಯ ಬಳಿ ಬಂದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಬಂದ ಪೊಲೀಸರು ಶವಗಳನ್ನು ತಿರುಚೆಂಗೊಡ್​​ ಆಸ್ಪತ್ರೆಗೆ ಪರೀಕ್ಷೆಗಾಗಿ ರವಾನಿಸಿದ್ದಾರೆ.

    ಸಿಆರ್​ಪಿಸಿಯ ಸೆಕ್ಷನ್​ 174ರ ಅಡಿಯಲ್ಲಿ ಎಫ್​ಐಆರ್​ ದಾಖಲಿಸಿಕೊಂಡು ತನಿಖೆ ಆರಂಭಿಸಿರುವುದಾಗಿ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲದೆ, ಬೇರೆ ಬೇರೆಯಾಗುತ್ತೇವೆ ಎಂಬ ಭಯದಿಂದ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನಂಬಲಾಗಿದೆ. ಸ್ಥಳದಲ್ಲಿ ಯಾವುದೇ ಡೆತ್​ನೋಟ್​ ಪತ್ತೆಯಾಗಿಲ್ಲ. ತನಿಖಾ ನಂತರವೇ ಖಚಿತ ಮಾಹಿತಿ ತಿಳಿಯುತ್ತದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

    ಇದನ್ನೂ ಓದಿ: ಮಕ್ಕಳಿಗೆ ಮೊಬೈಲ್ ಗಾಳ! ವಾಟ್ಸ್​ಆಪ್ ಗ್ರೂಪಲ್ಲಿ ಅಶ್ಲೀಲ ದೃಶ್ಯ ಕಳುಹಿಸಿ ಬೆದರಿಕೆ?

    ಮೊಬೈಲ್​​ ಬಿಟ್ಟು ಓದಿಕೋ ಎಂದಿದ್ದಕ್ಕೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯಿಂದ ದುಡುಕಿನ ನಿರ್ಧಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts