More

    ಮಕ್ಕಳಿಗೆ ಮೊಬೈಲ್ ಗಾಳ! ವಾಟ್ಸ್​ಆಪ್ ಗ್ರೂಪಲ್ಲಿ ಅಶ್ಲೀಲ ದೃಶ್ಯ ಕಳುಹಿಸಿ ಬೆದರಿಕೆ?

    | ಯಂಕಣ್ಣ ಸಾಗರ್

    ಬೆಂಗಳೂರು: ಮೊಬೈಲ್ ಫೋನ್ ಬಳಸುವ ಅಪ್ರಾಪ್ತರಿಗೆ ಅಶ್ಲೀಲ ಚಿತ್ರಗಳಿರುವ ಆನ್​ಲೈನ್ ಲಿಂಕ್ ಕಳುಹಿಸಿ ವ್ಯಸನಿಗಳನ್ನಾಗಿಸುವ ಮೂಲಕ ಕುಟುಂಬಸ್ಥರನ್ನು ಬ್ಲಾ್ಯಕ್​ವೆುೕಲ್ ಮಾಡುವ ಜಾಲವೊಂದು ರಾಜಧಾನಿಯಲ್ಲಿ ಹುಟ್ಟಿಕೊಂಡಿರುವ ಅನುಮಾನ ವ್ಯಕ್ತವಾಗಿದೆ.

    ಅನಾಮಧೇಯ ವ್ಯಕ್ತಿ ಯೊಬ್ಬ ವಾಟ್ಸ್​ಆಪ್ ಗ್ರೂಪ್ ರಚಿಸಿ ಅದರಲ್ಲಿ ಬೆಂಗಳೂರಿನ ಪ್ರತಿಷ್ಠಿತ ಶಾಲೆಗಳ 70ಕ್ಕೂ ಮಕ್ಕಳ ನಂಬರ್ ಸೇರ್ಪಡೆ ಮಾಡಿರುವುದು ಇಂಥದ್ದೊಂದು ಗುಮಾನಿಗೆ ಕಾರಣವಾಗಿದೆ. ಈ ಗ್ರೂಪ್​ನಲ್ಲಿ ಮಹಿಳೆಯರ ಅಶ್ಲೀಲ ಸಂಭಾಷಣೆ ಹಾಗೂ ಅಶ್ಲೀಲ ಚಿತ್ರಗಳಿರುವ ಆನ್​ಲೈನ್ ಲಿಂಕ್ ಹರಿಬಿಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಬೆಂಗಳೂರು ಪಶ್ಚಿಮ ವಿಭಾಗ ಸೈಬರ್ ಕ್ರೖೆಂ ಠಾಣೆ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

    ‘Find your Love 2083’ (ಫೈಂಡ್ ಯುವರ್ ಲವ್ 2083) ಹೆಸರಿನ ಈ ವಾಟ್ಸ್​ಆಪ್ ಗ್ರೂಪ್​ನಲ್ಲಿ ಶಾಲಾ ಮಕ್ಕಳು ಆನ್​ಲೈನ್ ತರಗತಿಗೆ ಬಳಸುವ ಫೋನ್ ನಂಬರ್ ಸೇರ್ಪಡೆಯಾಗಿದೆ.

    ಹಣಕ್ಕಾಗಿ ತಂತ್ರ: ಮಕ್ಕಳಿಗೆ ಅಶ್ಲೀಲ ಚಿತ್ರ ವೀಕ್ಷಿಸುವ ಚಟ ಬೆಳೆಸಿ ವ್ಯಸನಿಗಳನ್ನಾಗಿಸುವುದು, ಬಳಿಕ ಹಂತಹಂತವಾಗಿ, ಮಾನಸಿಕವಾಗಿ ತಮ್ಮ ತೆಕ್ಕೆಗೆ ತೆಗೆದುಕೊಂಡು ತಾವು ಹೇಳಿದಂತೆ ಕೇಳುವ ಮಟ್ಟಕ್ಕೆ ಕರೆದೊಯ್ದು ನಿಯಂತ್ರಣದಲ್ಲಿ ಇರಿಸಿಕೊಳ್ಳುವ ಉದ್ದೇಶವಿರಬಹುದು. ಆ ಮಕ್ಕಳಿಂದ ಖಾಸಗಿ ಫೋಟೋ ಹಾಗೂ ವಿಡಿಯೋ ಪಡೆದುಕೊಂಡು, ಅದನ್ನು ಪಾಲಕರಿಗೆ ಕಳುಹಿಸುವುದಾಗಿ ಬೆದರಿಸಿ, ಬಳಿಕ ಬ್ಯಾಂಕ್ ವಿವರ, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಮಾಹಿತಿ ಪಡೆದು ಖಾತೆಯಿಂದ ಹಣ ದೋಚಬಹುದು. ಇಲ್ಲವಾದರೆ, ಮಕ್ಕಳಿಂದ ಕುಟುಂಬಸ್ಥರ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ರಹಸ್ಯವಾಗಿ ಪಡೆದು ಬ್ಲಾ್ಯಕ್​ವೆುೕಲ್ ಮಾಡಿ ಹಣ ಸುಲಿಯುವ ಸಾಧ್ಯತೆಯೂ ಇದೆಯೆಂದು ಪೊಲೀಸರು ಹೇಳುತ್ತಾರೆ.

    ಇದನ್ನೂ ಓದಿ: ಕ್ವಾರಂಟೈನ್ ಕೇಂದ್ರದ ಕಾಪೌಂಡ್ ಜಿಗಿದ; ಪ್ರಶ್ನಿಸಲು ಬಂದವರನ್ನೇ ಕಚ್ಚಿದ!

    ದೂರಿಗೆ ಹಿಂದೇಟು: ಮೇ 10ರಂದು ಅಪ್ರಾಪ್ತ ಮಕ್ಕಳ ವಾಟ್ಸ್​ಆಪ್ ಗ್ರೂಪ್​ನಲ್ಲಿ ಅಶ್ಲೀಲ ದೃಶ್ಯಗಳಿರುವ ಲಿಂಕ್ ಹರಿದಾಡುತ್ತಿರುವುದು ಚಂದ್ರಾಲೇಔಟ್​ನ ಮಹಿಳೆಯೊಬ್ಬರಿಗೆ ಗೊತ್ತಾಗಿದೆ. ಈ ವಿಚಾರವನ್ನು ಅವರು, ಗ್ರೂಪಿನಲ್ಲಿದ್ದ ಫೋನ್ ನಂಬರ್​ಗಳಿಗೆ ಕರೆ ಮಾಡಿ ಪಾಲಕರ ಗಮನಕ್ಕೆ ತಂದಿದ್ದಾರೆ. ಆದರೆ, ಅವರೆಲ್ಲ ಪೊಲೀಸರಿಗೆ ದೂರು ಕೊಡಲು ಹಿಂದೇಟು ಹಾಕಿದ್ದಾರೆ. ಬಳಿಕ ಆಕೆಯೇ ಪಶ್ಚಿಮ ವಿಭಾಗದ ಸೈಬರ್ ಕ್ರೖೆಂ ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟಿದ್ದಾರೆ.

    113 ಮಕ್ಕಳ ಬಳಕೆ: 2018ರಲ್ಲಿ ರಾಜ್ಯದ 113 ಮಕ್ಕಳನ್ನು ಅಶ್ಲೀಲ ಚಿತ್ರಗಳಿಗೆ ಬಳಕೆ ಮಾಡಿಕೊಂಡಿರುವ ಬಗ್ಗೆ ರಾಜ್ಯ ಸರ್ಕಾರಕ್ಕೆ, ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ವರದಿ ನೀಡಿತ್ತು. ಹೈಕೋರ್ಟ್ ಸೂಚನೆ ಮೇರೆಗೆ ರಾಜ್ಯದಲ್ಲಿ 7 ಪ್ರತ್ಯೇಕ ಎಫ್​ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.

    ಪಾಲಕರಿಗೆ ಖಾಕಿ ಸಲಹೆ

    *ಮೊಬೈಲ್, ಕಂಪ್ಯೂಟರ್, ಲ್ಯಾಪ್​ಟಾಪ್, ಟ್ಯಾಬ್​ಗಳಿಗೆ ಸೆಕ್ಯೂರಿಟಿ ಸೆಟಿಂಗ್ಸ್ ಮಾಡುವುದು

    *ಆನ್​ಲೈನ್ ಮುಖಾಂತರ ಹರಿದುಬರುವ ಅನವಶ್ಯಕ ವೆಬ್​ಸೈಟ್​ಗಳನ್ನು ನಿಷ್ಕ್ರಿಯಗೊಳಿಸುವುದು

    *ಅನುಮತಿಯಿಲ್ಲದೇ ವಾಟ್ಸ್​ಆಪ್ ಗ್ರೂಪ್​ಗಳಿಗೆ ಸೇರಿಸಲು ಬಾರದಂತೆ ಸೆಟಿಂಗ್ಸ್ ಅಳವಡಿಸಬೇಕು

    *ಸೆಕ್ಯೂರಿಟಿ ಸೆಟಿಂಗ್ ಬದಲಾಯಿಸಿರುವುದು ಮಕ್ಕಳಿಗೆ ಗೊತ್ತಾಗದಿರಲಿ

    *ಅನಾಮಿಕರ ಜತೆ ಚಾಟ್ ಮಾಡದಂತೆ ಮಕ್ಕಳಿಗೆ ಅರಿವು ಮೂಡಿಸಬೇಕು

    *ದಿನನಿತ್ಯ ಮೊಬೈಲ್ ಬಳಕೆ ಮಾಡಿರುವ ಅವಧಿಯನ್ನು ಪರಿಶೀಲಿಸಬೇಕು

    *ಮೊಬೈಲ್ ಗೀಳಿಗೆ ಬಿದ್ದಿರುವುದು ಕಂಡುಬಂದರೆ ಮನೋವೈದ್ಯರ ಬಳಿ ಕರೆದೊಯ್ದು ಕೌನ್ಸೆಲಿಂಗ್​ಗೆ ಒಳಪಡಿಸಿ

    ಮಕ್ಕಳ ಕೈಗೆ ಮೊಬೈಲ್ ಕೊಡುವ ಮುನ್ನ ಎಚ್ಚರವಿರಲಿ. ಅನಾಮಿಕರು ಕಳುಹಿಸುವ ಆನ್​ಲೈನ್ ಲಿಂಕ್ ಓಪನ್ ಮಾಡದಂತೆ ಸೂಚಿಸಬೇಕು. ಮಕ್ಕಳಿಗೆ ಅಶ್ಲೀಲ ಚಿತ್ರ ರವಾನಿಸುತ್ತಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೊಳ್ಳಲಾಗುವುದು. ಇಂತಹ ಪ್ರಕರಣಗಳು ಗಮನಕ್ಕೆ ಬಂದರೆ ಸ್ಥಳೀಯ ಸೈಬರ್ ಕ್ರೖೆಂ ಠಾಣೆಗೆ ದೂರು ಕೊಡಿ.

    | ಸಂದೀಪ್ ಪಾಟೀಲ್, (ಸಿಸಿಬಿ) ಜಂಟಿ ಪೊಲೀಸ್ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts