More

    ಜೆಸಿಬಿ ಮೇಲೆ ಹೆಬ್ಬಾವು.. ಒಂದಲ್ಲ ಎರಡು..!!!

    ಒರಿಸ್ಸಾ: ಹಾವುಗಳು ನಾಡಿಗೆ ಬಂದು ಜನರನ್ನು ಹೆದರಿಸುವ ಪ್ರಸಂಗಗಳು ಅನೇಕ. ಅಂಥದ್ದೊಂದು ಪ್ರಸಂಗ ಕಾಮಗಾರಿ ಪ್ರದೇಶವೊಂದರಲ್ಲಿ ಕಂಡುಬಂದಿದ್ದು, ಭಾರಿ ಉದ್ದದ ಎರಡು ಹೆಬ್ಬಾವುಗಳು ಒಂದರ ಬೆನ್ನಿಗೆ ಒಂದರಂತೆ ಪತ್ತೆಯಾಗಿವೆ.

    ಒರಿಸ್ಸಾದ ಬೆರ್ಹಂಪುರ್ ಜಿಲ್ಲೆಯ ಪಲ್ಲಿಗುಮುಲ ಗ್ರಾಮದಲ್ಲಿ ಜಲಾಶಯದ ಪ್ರದೇಶದಲ್ಲಿ ಪುನರ್​ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಆ ಸ್ಥಳದಲ್ಲಿ ನಿಲ್ಲಿಸಲಾಗಿದ್ದ ಜೆಸಿಬಿಯೊಂದರ ಮೇಲೆ ಸ್ಥಳೀಯರು ಹಾವೊಂದನ್ನು ಕಂಡಿದ್ದಾರೆ. ತಕ್ಷಣ ಹಾವು ಹಿಡಿಯುವ ಪರಿಸರ ಸಂರಕ್ಷಕ ಸಂಘಟನೆಗೆ ಕರೆ ಮಾಡಿದ್ದಾರೆ.

    ಜೆಸಿಬಿ ಮೇಲೆ ಹೆಬ್ಬಾವು.. ಒಂದಲ್ಲ ಎರಡು..!!!

    “ಹಾವುಗಳನ್ನು ಸಂರಕ್ಷಿಸುವ ತಂಡವೊಂದಕ್ಕೆ ರಾತ್ರಿ 9ಕ್ಕೆ ಕರೆಬಂತು. ಹೋಗಿ ನೋಡಿದಾಗ ಒಂದು 7 ಅಡಿ ಉದ್ದದ ಹೆಬ್ಬಾವು ಜೆಸಿಬಿ ಮೇಲೆ ಕೂತಿತ್ತು. ಅದನ್ನು ಸುಲಭವಾಗಿ ಹಿಡಿದರೆ, ಮತ್ತೊಂದು 11 ಅಡಿ ಉದ್ದದ ಹೆಬ್ಬಾವು ಜೆಸಿಬಿಯ ಒಳಗಡೆ ಅಡಗಿ ಕುಳಿತಿದ್ದುದು ಕಂಡುಬಂತು. ನಾಲ್ಕು ಗಂಟೆ ಪ್ರಯತ್ನ ಪಟ್ಟ ನಂತರ ಆ ಹಾವನ್ನೂ ಹಿಡಿದೆವು” ಎಂದು ಹಾವುಗಳ ಸಂರಕ್ಷಕರಲ್ಲೊಬ್ಬರಾದ ಸ್ವಾಧೀನ್ ಕುಮಾರ್ ಸಾಹು ಹೇಳಿದ್ದಾರೆ. ಎರಡೂ ಹಾವುಗಳನ್ನು ಕಾಡಿನ ಒಳಗೆ ಬಿಡಲಾಗಿದೆ.

    ಜೆಸಿಬಿ ಮೇಲೆ ಹೆಬ್ಬಾವು.. ಒಂದಲ್ಲ ಎರಡು..!!!

    ಬ್ಯಾಂಕ್​ ಲಾಕರ್​ನಲ್ಲೂ ಹಣ ಸೇಫ್​ ಅಲ್ಲ!; ಇಲ್ಲಿಟ್ಟ ಹಣ ಏನಾಯ್ತು ನೋಡಿ…

    ಬಿಎಸ್​ಎನ್​ಎಲ್​ ಇಷ್ಟೊಂದು ಬರ್ಬಾದ್ ಆಗಿದ್ಯಾ? ಬರೀ 3 ಸಾವಿರ ರೂ. ಕೊಡಲು ಫಂಡ್ ಇಲ್ವಂತೆ!

    VIDEO | ಡಾಕೂ ಗಬ್ಬರ್ ಸಿಂಗ್​ಗೆ ಶಿಕ್ಷೆಯಾಗಿದ್ದು ಯಾಕೆ ಗೊತ್ತಾ? ಉತ್ತರಪ್ರದೇಶ ಪೊಲೀಸರ ಅನ್ವೇಷಣೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts