More

    ಲಾಕ್​ಡೌನ್​ ಹಿನ್ನೆಲೆಯಲ್ಲಿ ಸ್ವಗ್ರಾಮಕ್ಕೆ ನಡೆದು ಹೊರಟ ನಾಲ್ವರು, ಆದರೆ ಗಮ್ಯ ತಲುಪಿದ್ದು ಇಬ್ಬರು ಮಾತ್ರ…!

    ರಾಯ್ಪುರ: ಕೋವಿಡ್​ ಲಾಕ್​ಡೌನ್​ ಹಿನ್ನೆಲೆಯಲ್ಲಿ ಸ್ವಗ್ರಾಮಗಳಿಗೆ ಮರಳಲು ರೈಲು, ಬಸ್​​ ಅಥವಾ ಬೇರಾವುದೇ ವಾಹನದ ಸೌಲಭ್ಯ ಇಲ್ಲದ ಕಾರಣ ನಾಲ್ವರು ಕಾರ್ಮಿಕರು ರೈಲ್ವೆ ಹಳಿ ಮೇಲೆ ಕಾಲ್ನಡಿಗೆಯೇ ತಮ್ಮ ಸ್ವಗ್ರಾಮದತ್ತ ಪ್ರಯಾಣ ಆರಂಭಿಸಿದ್ದರು. ದುರದೃಷ್ಟವಶಾತ್​ ಸರಕು ಸಾಗಣೆ ರೈಲಿನಡಿ ಸಿಲುಕಿ ಇಬ್ಬರು ಮೃತಪಟ್ಟರೆ, ಇನ್ನಿಬ್ಬರು ಬದುಕುಳಿದರು.

    ಕಾಳೇಶ್ವರ್​ ರಾಜ್ವಾಡೆ (21) ಮತ್ತು ಗುಲಾಬ್​ ರಾಜ್ವಾಡೆ (20) ತಮ್ಮ ಗ್ರಾಮದ ಇನ್ನಿಬ್ಬರ ಜತೆ ಪೆಂಡ್ರಾ-ಮರ್ವಾಹಿ-ಗೌರೆಲಾ ರೈಲು ಮಾರ್ಗವಾಗಿ ಸುರ್ಜಾಪುರ ಜಿಲ್ಲೆಯಲ್ಲಿರುವ ಸ್ವಗ್ರಾಮಗಳಿಗೆ ಮರಳುತ್ತಿದ್ದರು. ಭಾನುವಾರ ರಾತ್ರಿ ಇಡೀ ನಡೆದು ನಾಲ್ವರು ಛತ್ತೀಸಗಢದ ಕೊರಿಯಾ ಜಿಲ್ಲೆಯ ಉದಾಲ್​ಕಚ್ಚರ್​ ಮತ್ತು ಡರಿಟೋಲಾ ರೈಲು ನಿಲ್ದಾಣದ ಮಧ್ಯೆ ಇರುವ ರೈಲ್ವೆ ತಿರುವು ತಲುಪಿದ್ದರು. ಬೆಳಗ್ಗೆ 8 ಗಂಟೆಯಲ್ಲಿ ತಿಂಡಿ ತಿನ್ನಲು ನಿರ್ಧರಿಸಿದರು. ಆದರೆ ಕುಡಿಯಲು ನೀರು ಇರಲಿಲ್ಲ. ಹಾಗಾಗಿ ತಮ್ಮ ಜತೆಗಿದ್ದ ಇಬ್ಬರನ್ನು ನೀರು ತರಲು ಕಳುಹಿಸಿ, ಕಾಳೇಶ್ವರ ಮತ್ತು ಗುಲಾಬ್​ ರೈಲ್ವೆ ಹಳಿ ಮೇಲೆ ಕುಳಿತಿದ್ದರು. ಅದೇ ವೇಳೆ ವೇಗವಾಗಿ ಬಂದ ಸರಕು ಸಾಗಣೆ ರೈಲು ಇವರ ಮೇಲೆ ಹರಿದು, ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದರು.

    ನೀರು ತಂದ ಇನ್ನಿಬ್ಬರು ಇದನ್ನು ಕಂಡು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದರು. ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಮನ್ನೇಂದ್ರಗಢದ ಸಿಎಸ್​ಪಿ ಕರನ್​ ಕುಮಾರ್​ ಉಯ್ಕೆ, ತಿರುವಿನಿಂದಾಗಿ ರೈಲು ಬರುವುದು ಕಾಣಿಸದೇ ಹೋಗಿದ್ದರಿಂದ, ಇವರಿಬ್ಬರೂ ರೈಲಿಗೆ ಸಿಲುಕಿಕೊಂಡಿದ್ದಾರೆ ಎಂದು ತಿಳಿಸಿದರು.

    ಲಾಕ್​ಡೌನ್​ನಲ್ಲಿ ಶ್ವಾನ ಪ್ರೇಮ; ಸಾಕು ನಾಯಿಗಳಿಗೆ ಸ್ನಾನ ಮಾಡಿಸಿ ನಲಿದ ಹಾರ್ದಿಕ್​ ಮತ್ತು ಕೃಣಾಲ್​ ಪಾಂಡ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts