More

    ಬಿಜೆಪಿ ಶಾಸಕನ ಬರ್ತ್​ಡೇ ಪಾರ್ಟಿಯಲ್ಲಿ ಎರಡು ಸಾವು; ಒಬ್ಬನಿಗೆ ಗುಂಡೇಟು, ಇನ್ನೊಬ್ಬನಿಗೆ ಕಲ್ಲೇಟು..

    ನವದೆಹಲಿ: ಬಿಜೆಪಿ ಶಾಸಕರೊಬ್ಬರ ಜನ್ಮದಿನದ ಸಂಭ್ರಮದ ಸಂದರ್ಭದಲ್ಲಿ ನಡೆದ ಘರ್ಷಣೆಯಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ. ಒಬ್ಬ ಗುಂಡೇಟಿಗೆ ಬಲಿಯಾಗಿದ್ದರೆ, ಮತ್ತೊಬ್ಬ ಬಡಿಗೆ ಹಾಗೂ ಕಲ್ಲೇಟಿನಿಂದಾಗಿ ಮೃತಪಟ್ಟಿದ್ದಾನೆ.

    ಶುಕ್ರವಾರ ರಾತ್ರಿ ಹತ್ತರ ಸಮಯದಲ್ಲಿ ಈ ಪ್ರಕರಣ ನಡೆದಿದ್ದು, ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ. ಸಾವಿಗೀಡಾದ ಇಬ್ಬರನ್ನು 30ರ ಆಸುಪಾಸಿನ ಜೋಗೇಂದ್ರ ಸಿಂಗ್​ ಹಾಗೂ ಅರವಿಂದ್ ಜೈ ಎಂದು ಗುರುತಿಸಲಾಗಿದೆ. ಮಧ್ಯಪ್ರದೇಶದ ಜಬೇರಾ ಕ್ಷೇತ್ರದ ಶಾಸಕ ಧರ್ಮೇಂದ್ರ ಸಿಂಗ್ ಲೋಧಿ ಅವರ ಜನ್ಮದಿನದ ಪಾರ್ಟಿಯಲ್ಲಿ ಈ ಪ್ರಕರಣ ನಡೆದಿದೆ. ದಾಮೋಹ್​ ಜಿಲ್ಲೆಯ ಬನ್ವಾರ್ ಗ್ರಾಮದಲ್ಲಿ ಈ ಪ್ರಕರಣ ನಡೆದಿದ್ದು, ನೋಹಟ ಠಾಣೆಯ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

    ಪಾರ್ಟಿಗೆ ಬಂದಿದ್ದ ಇಬ್ಬರ ನಡುವಿನ ಸಂಘರ್ಷವೇ ಈ ಇಬ್ಬರ ಸಾವಿಗೆ ಕಾರಣ ಎನ್ನಲಾಗಿದೆ. ಜೋಗೇಂದ್ರ ಸಿಂಗ್​ ಗುಂಡೇಟಿಗೆ ಸತ್ತು ಹೋಗಿದ್ದರೆ, ಅರವಿಂದ್ ಜೈ ಎಂಬಾತನನ್ನು ಅಲ್ಲಿದ್ದ ಕೆಲವರು ಬಡಿಗೆ ಹಾಗೂ ಕಲ್ಲುಗಳಿಂದ ಹೊಡೆದು ಸಾಯಿಸಿದ್ದಾರೆ. ಈ ಪೈಕಿ ಅರವಿಂದ್ ಜೈ ಶಾಸಕರ ಕಡೆಯವನಾಗಿದ್ದು, ಜೋಗೇಂದ್ರ ಸಿಂಗ್ ಅತಿಥಿ ಉಪನ್ಯಾಸಕನಾಗಿದ್ದ. ಘಟನೆ ಸಂದರ್ಭದಲ್ಲಿ ಶಾಸಕರು ಸ್ಥಳದಲ್ಲಿ ಇದ್ದಿರಲಿಲ್ಲ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    15ರ ವಿದ್ಯಾರ್ಥಿ ಜತೆ 35ರ ಶಿಕ್ಷಕಿಯ ಸರಸ: ಈಕೆಯ ಮಹಾ ಸುಳ್ಳುಗಳಿಗೆ ಅಂತ್ಯವಾಡಿದ ಕೋರ್ಟ್​!

    ಕೇಂದ್ರ ಸರ್ಕಾರದ ಸಚಿವಾಲಯಗಳಲ್ಲಿ ಉನ್ನತ ಪದವೀಧರರಿಗೆ ಉದ್ಯೋಗ: 89 ಹುದ್ದೆಗಳು ಖಾಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts