More

    ಇಂಧನ ಬೆಲೆ ಏರಿಕೆ: ಸಚಿವರಿಬ್ಬರ ವಿಭಿನ್ನ ಹೇಳಿಕೆ!

    ಬೆಂಗಳೂರು: ಪೆಟ್ರೋಲ್, ಡೀಸೆಲ್‌, ಅಡುಗೆ ಅನಿಲ‌ ದರ ಏರಿಕೆ ವಿಚಾರವಾಗಿ ರಾಜ್ಯದ ಸಚಿವರಾದ ಕೆ.ಸಿ.ನಾರಾಯಗೌಡ ಹಾಗೂ ಬೈರತಿ ಬಸವರಾಜ ಅವರು ಶುಕ್ರವಾರ ವಿಭಿನ್ನ ಹೇಳಿಕೆಗಳನ್ನು ನೀಡಿದ್ದಾರೆ.

    ನೈಜ ಬಳಕೆದಾರರು ಪ್ರತಿಭಟಿಸುತ್ತಿಲ್ಲ ಎಂದ ನಾರಾಯಣ ಗೌಡ: ಕ್ರೀಡಾ ಸಚಿವ ಕೆ.ಸಿ.ನಾರಾಯಣ ಗೌಡ ಅವರು ಇಂದು ರಾಜ್ಯ ಬಿಜೆಪಿ ಕಚೇರಿಗೆ ಭೇಟಿ ನೀಡಿ, ಕಾರ್ಯಕರ್ತರ ಅಹವಾಲು ಆಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಜಾಗತಿಕ ತೈಲ ದರ ಅವಲಂಬಿಸಿ ಪೆಟ್ರೋಲ್, ಡೀಸೆಲ್‌, ಗ್ಯಾಸ್ ದರ ಏರಿಕೆಯಾಗುತ್ತದೆ. ಈ ವಿಷಯದಲ್ಲಿ ನೈಜ ಬಳಕೆದಾರರು ಯಾರೂ ಪ್ರತಿಭಟನೆ ಮಾಡುತ್ತಿಲ್ಲ. ಕಾಂಗ್ರೆಸ್ ರಾಜಕೀಯ ನಾಟಕವಾಡುತ್ತಿದೆ ಎಂದು ನಾರಾಯಣಗೌಡ ಕುಟುಕಿದರು.

    ಇದನ್ನೂ ಓದಿ: ಕೆಎಸ್ಆರ್​ಟಿಸಿಗೆ 60 ವರ್ಷ ಪೂರೈಸಿದ ಸಂಭ್ರಮ: ರಾಜಧಾನಿಯಲ್ಲಿ ಅದ್ಧೂರಿ ಆಚರಣೆ

    ಪ್ರಧಾನಿ ನರೇಂದ್ರ ಮೋದಿಯವರು ಸಮರ್ಥರಿದ್ದು, ಎಲ್ಲವನ್ನು ಸರಿದೂಗಿಸುವರು. ಬೆಲೆ ಏರಿಕೆ ತಾತ್ಕಾಲಿಕವಾಗಿದೆ. ಬಡ ಜನರ ಕಷ್ಟಕ್ಕೆ ಸ್ಪಂದಿಸಿಯೇ ಉಚಿತ ಅಡುಗೆ ‌ಅನಿಲ ಸಿಲಿಂಡರ್ ಪೂರೈಸುತ್ತಿದ್ದು, ಕಾಂಗ್ರೆಸ್ ಅಧಿಕಾರದಲ್ಲಿ ಈ ನೆರವು ನೀಡಲಿಲ್ಲ. ಆದರೆ ಬೆಲೆ ಏರಿಕೆ ನಿಂತಿದ್ದಿಲ್ಲ. ಜನರ ದಿಕ್ಕು ತಪ್ಪಿಸಲು ಕಾಂಗ್ರೆಸ್ ಪಿತೂರಿ ಹೂಡಿದೆ ಎಂದು ಅವರು ಕಿಡಿಕಾರಿದರು.

    ಸೆಸ್ ಇಳಿಕೆ ಬಗ್ಗೆ ಪರಿಶೀಲನೆ ನಡೆಯಲಿದೆ ಎಂದ ಬೈರತಿ ಬಸವರಾಜ: ಮತ್ತೊಂದೆಡೆ, ಸುದ್ದಿಗಾರರೊಂದಿಗೆ ಮಾತನಾಡಿದ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಅವರು, ತಮಿಳುನಾಡು ಮಾದರಿಯಲ್ಲಿ ಪೆಟ್ರೋಲ್, ಡೀಸೆಲ್‌ ಮೇಲಿನ ಸೆಸ್ ಇಳಿಕೆ ವಿಚಾರವಾಗಿ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು. ಇಂಧನ ದರ ಹೆಚ್ಚಳದಿಂದ ಅಗತ್ಯ‌ವಸ್ತುಗಳ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಪರಿಹಾರ ಮಾರ್ಗೋಪಾಯಗಳ ಬಗ್ಗೆ ಪರಿಶೀಲನೆಯಾಗಲಿದೆ ಎಂದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಸಮರ್ಥರೂ, ಅನುಭವಿಗಳೂ ಆಗಿದ್ದು, ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.

    ಕುಡಿದ ಮತ್ತಿನಲ್ಲಿ ಗಲಾಟೆ: ಹೆಲ್ಮೆಟ್​ನಿಂದ ಹೊಡೆದು ಕಂಟ್ರಾಕ್ಟರ್ ಕೊಲೆ

    ಸಾರಿಗೆ ನಿಗಮಗಳನ್ನು ಲಾಭಕ್ಕೆ ತರಲು ತಜ್ಞರ ಸಮಿತಿ: ಸಿಎಂ ಬೊಮ್ಮಾಯಿ ಘೋಷಣೆ

    ಸೂಪರ್​ ಮಾರ್ಕೆಟ್​ನಲ್ಲಿ 6 ಜನರಿಗೆ ಚಾಕು ಇರಿತ… ‘ಉಗ್ರವಾದಿ’ಗೆ ಅಂತ್ಯ ಹಾಡಿದ ಪೊಲೀಸರು

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts