More

    ಅಪ್ಪಅಮ್ಮ, ಅಜ್ಜಅಜ್ಜಿ ಕರೊನಾಗೆ ಬಲಿ; 12 ದಿನಗಳಲ್ಲಿ ಅನಾಥರಾದ ಹೆಣ್ಣುಮಕ್ಕಳು

    ಘಾಜಿಯಾಬಾದ್​​ : ಕರೊನಾ ಎರಡನೇ ಅಲೆಯು ಸೃಷ್ಟಿಸಿರುವ ಮರಣಕೂಪದಲ್ಲಿ ಎಷ್ಟೋ ಕುಟುಂಬಗಳು ಬೀದಿಗೆ ಬಂದಿವೆ. ಇಂಥದೇ ಪ್ರಸಂಗದಲ್ಲಿ ಹನ್ನೆರಡೇ ದಿನಗಳಲ್ಲಿ ಅಜ್ಜ-ಅಜ್ಜಿ, ಅಪ್ಪ-ಅಮ್ಮ ಎಲ್ಲರನ್ನೂ ಕಳೆದುಕೊಂಡ ಇಬ್ಬರು ಮಕ್ಕಳ ದಾರುಣ ಪರಿಸ್ಥಿತಿ ಮನಕಲಕುವಂಥದ್ದು.

    ಕುಟುಂಬದ ನಾಲ್ಕು ಜನ ಹಿರಿಯರೂ ಕರೊನಾದಿಂದಾಗಿ ಸತ್ತುಹೋದ ಪರಿಣಾಮ 6 ಮತ್ತು 8 ವರ್ಷಗಳ ಹೆಣ್ಣು ಮಕ್ಕಳು ದಿಢೀರನೇ ಅನಾಥರಾಗಿರುವ ಈ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್​​ನಿಂದ ವರದಿಯಾಗಿದೆ. ಕರೊನಾ ಬಗ್ಗೆ ಗಂಭೀರವಾಗಿ ಮುನ್ನೆಚ್ಚರಿಕೆ ವಹಿಸದಿದ್ದರೆ ಬದುಕು ಹೇಗೆ ಮೂರಾಬಟ್ಟೆಯಾಗಬಲ್ಲದು ಎಂಬ ಎಚ್ಚರಿಕೆ ನೀಡಿದೆ.

    ಇದನ್ನೂ ಓದಿ: ಕೇಂದ್ರ ನೀಡಿರುವ ವೆಂಟಿಲೇಟರ್​ಗಳ ಆಡಿಟ್​ : ಪ್ರಧಾನಿ ಮೋದಿ ಆದೇಶ

    ಒಂದು ಕಾಲದಲ್ಲಿ ಸುಖೀ ಕುಟುಂಬವಾಗಿದ್ದ ಮನೆಗೆ ಕರೊನಾ ಪ್ರವೇಶವಾಗಿದ್ದು ತಾತ ದುರ್ಗೇಶ್​ ಪ್ರಸಾದ್ ಅವರ ಮೂಲಕ. ನಿವೃತ್ತ ಶಿಕ್ಷಕರಾಗಿದ್ದ ಪ್ರಸಾದ್​ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ತಮ್ಮ ಪತ್ನಿ, ಮಗ-ಸೊಸೆ ಮತ್ತು ಮೊಮ್ಮಕ್ಕಳೊಂದಿಗೆ ಬದುಕುತ್ತಿದ್ದರು. ಅವರಿಗೆ ಕರೊನಾ ಪಾಸಿಟಿವ್​ ಬಂದಾಗ ಅವರು ಐಸೋಲೇಟ್​ ಮಾಡಿಕೊಂಡು ವೈದ್ಯರು ಹೇಳಿದ ಔಷಧಿಗಳನ್ನು ಸೇವಿಸಲಾರಂಭಿಸಿದರು ಎನ್ನಲಾಗಿದೆ.

    ಆದರೆ, ಒಂದೆರಡು ದಿನಗಳಲ್ಲೇ ಮನೆಯ ಉಳಿದ ಮೂವರು ವಯಸ್ಕರಿಗೂ ಸೋಂಕು ದೃಢವಾಯಿತು. ಏಪ್ರಿಲ್ 27 ರಂದು ದುರ್ಗೇಶ್ ಪ್ರಸಾದ್​ ಅವರ ಆರೋಗ್ಯ ಹದಗೆಟ್ಟು ಮೃತಪಟ್ಟರು. ಒಂದು ವಾರದ ನಂತರ ಅವರ ಮಗ ಅಶ್ವಿನ್ ಕೂಡ ಕರೊನಾಗೆ ಬಲಿಯಾದರು. ತಮ್ಮ ಬದುಕಿನಲ್ಲಾದ ಬದಲಾವಣೆಯನ್ನು ಅರಗಿಸಿಕೊಳ್ಳುತ್ತಲೇ ದುರ್ಗೇಶ್​ ಪ್ರಸಾದ್​ರ ಪತ್ನಿಯೂ ಮೃತಪಟ್ಟರು. ಸೊಸೆ ಕೂಡ ಮೇ 7 ರಂದು ತನ್ನ ಇಬ್ಬರು ಮಕ್ಕಳನ್ನು ತೊರೆದು ಅಸುನೀಗಿದರು.

    ಇದನ್ನೂ ಓದಿ: ಆಕ್ಸಿಜನ್ ಉಪಕರಣ : ಸ್ವಿಟ್ಜರ್​ಲ್ಯಾಂಡ್​ ಟು ಅಂಡಮಾನ್ ನಿಕೋಬಾರ್​

    ಈ ದುರಂತದ ನಂತರ ಈ ಕುಟುಂಬ ವಾಸವಾಗಿದ್ದ ವಸತಿ ಸಮುಚ್ಛಯದಲ್ಲಿ ಕರಾಳತೆ ಕವಿದಿದೆ. ಸೋಂಕಿತರಿಗೆ ಸಕಾಲಿಕವಾಗಿ ಸರಿಯಾದ ವೈದ್ಯಕೀಯ ಸೌಲಭ್ಯಗಳು ಲಭಿಸದೆ ಮೃತಪಟ್ಟಿದ್ದಾರೆ ಎಂದು ಅಕ್ಕಪಕ್ಕದವರು ದೂರಿದ್ದಾರೆ. ಮತ್ತೊಂದೆಡೆ, ತಮ್ಮ ಸುಖೀ ಕುಟುಂಬವನ್ನು ಕಳೆದುಕೊಂಡಿರುವ ಪುಟ್ಟ ಕಂದಮ್ಮಗಳು, ಈಗ ಬರೇಲಿಯಲ್ಲಿರುವ ತಮ್ಮ ಚಿಕ್ಕಮ್ಮನ ಮನೆಯಲ್ಲಿ ಆಶ್ರಯ ಪಡೆದಿವೆ. (ಏಜೆನ್ಸೀಸ್)

    VIDEO | ಕರ್ನಾಟಕಕ್ಕೆ ಇನ್ನೂ ಎರಡು ಆಕ್ಸಿಜನ್ ಎಕ್ಸ್​ಪ್ರೆಸ್​

    ಗೋವಾ ಆಕ್ಸಿಜನ್ ಗೊಂದಲ : ಒಂದೇ ಆಸ್ಪತ್ರೆಯಲ್ಲಿ 4 ದಿನಗಳಲ್ಲಿ 74 ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts